34.1 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಡಾ. ಪ್ರದೀಪ್ ನಾವೂರು ಕ್ಲಿನಿಕ್‌ಗೆ ಬೆಂಕಿ: ದುಷ್ಕರ್ಮಿಗಳ ಕೃತ್ಯಕ್ಕೆ ಬೆಳ್ತಂಗಡಿ ಬ್ರಾಹ್ಮಣ ಮಹಾಸಭಾ ವತಿಯಿಂದ ಖಂಡನೆ

ಬೆಳ್ತಂಗಡಿ: ಡಾ| ಪ್ರದೀಪ್ ನಾವೂರು ಇವರು ಬೆಳ್ತಂಗಡಿ ತಾಲೂಕಿನಲ್ಲಿ ಒಬ್ಬ ವೈದ್ಯರಾಗಿ, ಸಮಾಜ ಸೇವಕರಾಗಿ ಹಾಗೂ ಸಂಘಟಕರಾಗಿ ಗುರುತಿಸಿಕೊಂಡಿರುತ್ತಾರೆ. ಹೀಗಿರುವಲ್ಲಿ ಡಾ| ಪ್ರದೀಪ್ ನಾವೂರು ರವರ ಆರೋಗ್ಯ ಕ್ಲೀನಿಕ್ ಎಂಬಲ್ಲಿ ವೈದ್ಯರಾಗಿ ಸೇವೆಯನ್ನು ಸಲ್ಲಿಸುತ್ತಿದ್ದು, ನಿನ್ನೆಯ ದಿನ ರಾತ್ರಿ ಡಾ| ಪ್ರದೀಪ್ ನಾವೂರು ಇವರು ತಮ್ಮ ಕೆಲಸವನ್ನು ಮುಗಿಸಿ ಮನೆಗೆ ಹೋದ ನಂತರ ಅವರ ಕ್ಲೀನಿಕ್‌ಗೆ ಯಾವುದೋ ದುಷ್ಕರ್ಮಿಗಳು ಅವರ ಕ್ಲೀನಿಕ್ ನ ಹಿಂಬದಿ ಕಿಟಕಿಯನ್ನು ತೆಗೆದು ಡೀಸೆಲ್ ಚೆಲ್ಲಿ ಬೆಂಕಿಯನ್ನು ನೀಡಿರುತ್ತಾರೆ ಎಂದು ಡಾ| ಪ್ರದೀಪ್ ನಾವುರ ರವರು ಈಗಾಗಲೇ ಬೆಳ್ತಂಗಡಿ ಆರಕ್ಷಕ ಠಾಣೆಗೆ ದೂರನ್ನು ನೀಡಿರುವ ವಿಚಾರ ನಮಗೆ ತಿಳಿದುಬಂದಿರುತ್ತದೆ. ಈ ಘಟನೆಯನ್ನು ಬ್ರಾಹ್ಮಣ ಸಭಾದ ಪರವಾಗಿ ನಾವು ಖಂಡಿಸುತ್ತಿದ್ದು, ಈ ಕೃತ್ಯವನ್ನು ಎಸಗಿದ ದುಷ್ಕರ್ಮಿಗಳನ್ನು ಪೋಲೀಸ್ ಇಲಾಖೆಯ ಮೂಲಕ ಬಂಧಿಸಿ ಸೂಕ್ತ ಕಾನೂನುಕ್ರಮವನ್ನು ಕೈಗೊಳ್ಳಬೇಕಾಗಿ ಬೆಳ್ತಂಗಡಿ ಬ್ರಾಹ್ಮಣ ಮಹಾ ಸಭಾದ ಪರವಾಗಿ ವಿನಂತಿಸುತ್ತಿದ್ದೇವೆ.

ಅಲ್ಲದೇ ಡಾ। ಪ್ರದೀಪ್ ನಾವುರ ಮತ್ತು ಇವರ ಕುಟುಂಬಕ್ಕೆ ಸೂಕ್ತ ಭದ್ರತೆಯನ್ನು ಪೋಲೀಸ್ ಇಲಾಖೆ ಕೊಟ್ಟು ಭವಿಷ್ಯದಲ್ಲಿ ಅವರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ತಾವು ಕೈಗೊಳ್ಳಬೇಕಾಗಿ ವಿನಂತಿಸುತ್ತಿದ್ದೇವೆ ಎಂದು ಬ್ರಾಹ್ಮಣ ಸಂಘದ ಅಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯ ಹಾಗೂ ಕಾರ್ಯದರ್ಶಿ ಬಿ.ಕೆ ಧನಂಜಯ ರಾವ್ ತಿಳಿಸಿದ್ದಾರೆ.

Related posts

ಗ್ರಾ.ಪಂ.ಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣೆಗೆ ದಿನಾಂಕ ನಿಗದಿ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಜೆಸಿಐ ಬೆಳ್ತಂಗಡಿ ಮಂಜುಶ್ರೀ 47ನೇ ಜೆಸಿ ಸಪ್ತಾಹದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬಂದಾರಿನಲ್ಲಿ ಕಾಡಾನೆ ಪ್ರತ್ಯಕ್ಷ: ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ

Suddi Udaya

ವೇಣೂರು ಎಸ್.ಡಿ.ಎಂ ಐಟಿಐ ಯಲ್ಲಿ ನವೀಕೃತ ಕೈಗಾರಿಕಾ ಸಮಗ್ರ ವಿದ್ಯುತ್ ಕಾರ್ಯಗಾರ ಕೇಂದ್ರಕ್ಕೆ ಚಾಲನೆ

Suddi Udaya

ಶಿಬಾಜೆ: ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಚೌತಿ- ನವರಾತ್ರಿಯ ಬಗ್ಗೆ ಪೂರ್ವಭಾವಿ ಸಭೆ

Suddi Udaya

ಪಡಂಗಡಿ: ಶ್ರೀ ಕ್ಷೇತ್ರ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

Suddi Udaya
error: Content is protected !!