34.1 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಕೊಕ್ಕಡದಲ್ಲಿ ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿಯ 5ನೇ ನೂತನ ಶಾಖೆ ಉದ್ಘಾಟನೆ

ಬೆಳ್ತಂಗಡಿ : ಬೆಳ್ತಂಗಡಿಯಲ್ಲಿ ಕಳೆದ 29ವರ್ಷದಿಂದ ಕಾರ್ಯಾಚರಿಸುತ್ತಿರುವ ನಾರಾವಿ, ಅಳದಂಗಡಿ, ವೇಣೂರು, ಸೋಮಂತಡ್ಕದಲ್ಲಿ ಶಾಖೆಗಳನ್ನು ಹೊಂದಿರುವ ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿಯ 5ನೇ ನೂತನ ಶಾಖೆ ಕೊಕ್ಕಡದಲ್ಲಿ ಸಮ್ಯಕ್ ಕಾಂಪ್ಲೆಕ್ಸ್ ನಲ್ಲಿ ಅ.8ರಂದು ಉದ್ಘಾಟನೆಗೊಂಡಿತು.


ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ (ಗ್ರಾಮೀಣ) ನಾಗೇಶ್ ಕುಮಾರ್ ಗೌಡ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು. ಕೊಕ್ಕಡ ಸಂತ ಜೋನ್ ಬ್ಯಾಪ್ಟಿಸ್ಟ್ ಚರ್ಚ್ ಧರ್ಮಗುರು ವಂದನೀಯ ಫಾ| ಅನಿಲ್ ಪ್ರಕಾಶ್ ಡಿಸಿಲ್ವ ಆಶೀರ್ವಚನಗೈದರು.
ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಸಹಕಾರ ಸಂಘ ಅಧ್ಯಕ್ಷ ಹೆನ್ರಿ ಲೋಬೊ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರು, ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಭದ್ರತಾ ಕೊಠಡಿ ಉದ್ಘಾಟಿಸಿದರು. ಬೆಳ್ತಂಗಡಿ ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಪ್ರತಿಮಾ ಬಿ. ಗಣಕ ಯಂತ್ರ ಉದ್ಘಾಟಿಸಿದರು. ಕೊಕ್ಕಡ ಬದ್ರಿಯಾ ಜುಮ್ಮಾ ಮಸೀದಿ ಖತೀಬರು ಅಬ್ದುಲ್ ರಾಝಿಕ್ ಆಲ್ ಖಾಸಿಮಿ, ಕೊಕ್ಕಡ ಸಮ್ಯಕ್ ಕಾಂಪ್ಲೆಕ್ಸ್ ಮಾಲಕ ಪಣಿರಾಜ ಜೈನ್, ಇಂಫಾನ್ಟ್ ಜಿಸಸ್ ಚರ್ಚ್ ಧರ್ಮ ಗುರು ವಂ. ಫಾ. ಗ್ರೇಸಿಯಸ್ ಅಲ್ವರಿಸ್, ಉಪಾಧ್ಯಕ್ಷ ಡೇನಿಸ್ ಸಿಕ್ವೆರ, ಹಿರಿಯ ನಿರ್ದೇಶಕರಾದ ಜೇಮ್ಸ್ ಡಿಸೋಜ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಐವನ್ ಗೊನ್ಸಾಲ್ವಿಸ್ ಉಪಸ್ಥಿತರಿದ್ದರು.


ಆಡಳಿತ ಮಂಡಳಿ ನಿರ್ದೇಶಕರುಗಳಾದ ಜೋಸೆಫ್ ಪೀಟರ್ ಸಲ್ದಾನ್ಹ, ಹೆರಾಲ್ಡ್ ಪಿಂಟೊ, ತೋಮಸ್‌ ಆ‌ರ್. ನೊರೊನ್ಹ,ವಿನ್ಸೆಂಟ್ ಪ್ರಕಾಶ್ ಪಿಂಟೊ, ಅಲ್ಫೋನ್ಸ್ ರೊಡ್ರಿಗಸ್, ಪ್ರಸಾದ್ ಪಿಂಟೊ, ರಫಾಯಲ್ ವೇಗಸ್,
ಶ್ರೀಮತಿ ಪೌಲಿನ್ ರೇಗೊ, ಶ್ರೀಮತಿ ಪ್ಲಾವಿಯಾ ಡಿಸೋಜ, ವೃತ್ತಿಪರ ನಿರ್ದೇಶಕರಾದ ರಿಯೋ ಮೈಕಲ್ ರೊಡ್ರಿಗಸ್, ವಿನಯ್ ಜೋನ್ಸನ್ ಡಿಸೋಜ, ಕೊಕ್ಕಡ ಶಾಖಾ ವ್ಯವಸ್ಥಾಪಕ ಅಜಯ್ ರೋಡ್ರಿಗಸ್, ಮುಖ್ಯ ಪ್ರವರ್ತಕ ಸಿರಿಲ್ ಪಾಯಿಸ್, ಮಾಜಿ ಅಧ್ಯಕ್ಷ ಎಲೋಸಿಯಸ್ ಲೋಬೊ, ಮಾಜಿ ಉಪಾಧ್ಯಕ್ಷರುಗಳಾದ ಅಲ್ಫೋನ್ಸ್ ಫ್ರಾಂಕೋ, ಜೋಸೆಫಿನ್ ಪಿಂಟೊ, ಮಾಜಿ ನಿರ್ದೇಶಕ ರುಡಾಲ್ಫ್ ಡಿಸೋಜ, ಜೋಕಿಂ ಕ್ರಸ್ತಾ ಭಾಗವಹಿಸಿದ್ದರು. ವಿವಿಧ ಶಾಖಾ ವ್ಯವಸ್ಥಾಪಕರು, ಸಿಬ್ಬಂದಿ ವರ್ಗದವರು, ಸಂತ ಜೋನ್ ಬ್ಯಾಪ್ಟಿಸ್ಟ್ ಚರ್ಚ್ ಮತ್ತು ಇನ್ಫಫೆಂಟ್ ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ, ಕಾರ್ಯದರ್ಶಿ, ವಾಳೆಯ ಗುರಿಕಾರರು ಸಮಸ್ತ ಕ್ರೈಸ್ತ ಭಾಂದವರು ಭಾಗವಹಿಸಿದ್ದರು.

ಸನ್ಮಾನ: ಕಳೆದ 25ವರ್ಷಗಳಿಂದ ಕ್ರಿಸ್ಮಸ್ ಸಂದರ್ಭದಲ್ಲಿ ಸಂತ ಕ್ಲೋಸ್ ದ. ಕ. ಜಿಲ್ಲೆಯಲ್ಲಿ ಬೈಕ್ ನಲ್ಲಿ ಸವಾರಿ ಮಾಡಿ ಜನಾನುರಾಗಿಯಾಗಿದ್ದ ವಿನ್ಸೆoನ್ ಮಿನೆಜೆಸ್ ಇವರನ್ನು ಗೌರವಿಸಲಾಹಿತು. ಇಂಜಿನಿಯರ್ ಆಲೆನ್ ಡಿಸೋಜ, ಎಲೆಕ್ಟ್ರಿಸಿಯಾನ್ ಪ್ರದೀಪ್, ಪ್ಯಾಬ್ರಿಕೇಶನ ಅರುಣ್ ಫೆರ್ನಾಂಡಿಸ್, ಸಿ ಸಿ ಕ್ಯಾಮರಾ ಲಕ್ಷ್ಮಿ ನಾರಾಯಣ, ಸಾಫ್ಟ್ ವೇರ್ ಪ್ರಕಾಶ್ ಕೆ. ಇನ್ನಿತರ ಕಾರ್ಮಿರನ್ನು ಗೌರವಿಸಲಾಯಿತು.
ಪ್ರಥಮ ಉಳಿತಾಯ ಖಾತೆ ಜಾನ್ಸನ್ ಗಲ್ಬಾವ್, ನಿರಖು ಠೇವಣಿ ಜೀವನ್ ಡಿಸೋಜ ಇವರಿಗೆ ನಿರ್ದೇಶಕ ತೊಮಸ್ ಆರ್. ನೋರೊನ್ಹ ವಿತರಿಸಿದರು. ಕೊಕ್ಕಡ, ನೆಲ್ಯಾಡಿಯ ಚರ್ಚ್ ಪಾಲನ ಮಂಡಳಿ ಸದಸ್ಯರು ಸಹಕರಿಸಿದ ಜನ್ಸಾನ್ ಗಲ್ಬಾವ್, ರಿತೇಶ್ ಸ್ಟೇಲ್ಲಾ, ಪ್ರಕಾಶ್, ಮೌರಿಸ್ ಡಿಸೋಜಾ, ಮಾರ್ಕ್ ಡಿಸೋಜ, ವನಿತಾ ಮೊಂತೇರೋ, ಸ್ಯಾಂಡ್ರಾ ಲೋಬೊ, ಮೌರಿಸ್ ಮೊಂತೇರೋ, ಫ್ಲೋರಿನ್, ಜಾನ್ ಮೊಂತೇರೋ, ತೊಮಸ್ ಡಿಸೋಜ, ಹೆರಾಲ್ಡ್ ಡಿಸೋಜ, ಸ್ಮಿತಾ ರೋಡ್ರಿಗಸ್ ಇವರನ್ನು ಗೌರವಿಸಲಾಯಿತು.

ಅಧ್ಯಕ್ಷ ಹೆನ್ರಿ ಲೋಬೊ ಸ್ವಾಗತಿಸಿ, ಡಾ. ವಿಶಾಲ್ ಪಿಂಟೊ ಕಾರ್ಯಕ್ರಮ ನಿರೂಪಿಸಿ ಉಪಾಧ್ಯಕ್ಷ ಡೇನಿಸ್ ಸಿಕ್ವೆರ ವಂದಿಸಿದರು. ಸಿಬ್ಬಂದಿ ವರ್ಗ ಪ್ರಾರ್ಥಿಸಿದರು.

Related posts

ಬ್ರಹ್ಮ ಶ್ರೀ ನಾರಾಯಣ ಗುರುಗಳ 169ನೇ ಜಯಂತಿಯ ಗುರುಸ್ಮರಣೆ ಕಾರ್ಯಕ್ರಮದಲ್ಲಿ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿ ಯವರಿಗೆ ಸನ್ಮಾನ

Suddi Udaya

ಸಂಬೋಳ್ಯ ಮೃತ ಬಾಲಕ ಸುಮಂತ್ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ

Suddi Udaya

ಗೋಕರ್ಣದ ಅಶೋಕೆಯಲ್ಲಿ ಚಾತುರ್ಮಾಸ್ಯ ವೃತಾಚರಣೆಯಲ್ಲಿರುವ ಜಗದ್ಗುರು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ಶಾಸಕ ಹರೀಶ್ ಪೂಂಜ

Suddi Udaya

ಪಾಲ್ತಾಡಿ ರಾಮಕೃಷ್ಣ ಆಚಾರ್ಯ ರವರ ನಿಧನಕ್ಕೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya

ಪೆರಾಜೆ ಕಿಂಡಿ ಅಣೆಕಟ್ಟುವಿನಲ್ಲಿ ಶೇಖರಣೆಗೊಂಡ ಮರದ ದಿಮ್ಮಿಗಳು ಬಳಂಜ ಗ್ರಾಮ ಪಂಚಾಯತ್ ನಿಂದ ತೆರವು ಕಾರ್ಯ

Suddi Udaya

ಕೃಷಿ ಜಾಗದ ನೋಂದಣಿಯಲ್ಲಿ ಉಂಟಾಗಿರುವ ಸಮಸ್ಯೆಯ ಕುರಿತು ಮುಲ್ಲೈ ಮುಹಿಲನ್ ಭೇಟಿ ಮಾಡಿದ ಶಾಸಕ ಹರೀಶ್ ಪೂಂಜ: ಶೀಘ್ರ ಪರಿಹರಿಸುವಂತೆ ಮನವಿ

Suddi Udaya
error: Content is protected !!