ಬೆಳ್ತಂಗಡಿ: ಗ್ರಾಹಕರಿಗೆ ಉಳಿತಾಯದ ಉತ್ತಮ ಅವಕಾಶದೊಂದಿಗೆ ಆಕರ್ಷಕ ಬಹುಮಾನಗಳನ್ನು ಪಡೆಯುವ ಅವಕಾಶ ಕಲ್ಪಿಸುವ ಉದ್ದೇಶದಿಂದ ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಮಳಿಗೆಯಲ್ಲಿ ಆಕಾಶ್ ಮಾಸಿಕ ಉಳಿತಾಯ ಯೋಜನೆ ಪ್ರಾರಂಭಗೊಂಡಿದೆ. ಗ್ರಾಹಕರಿಂದ ಭರ್ಜರಿ ಸ್ಪಂದನೆ ದೊರೆತಿದೆ ಎಂದು ಸಂಸ್ಥೆಯ ಮಾಲಕ ಅಲ್ಪೋನ್ಸ್ ಫ್ರಾಂಕೋ ತಿಳಿಸಿದ್ದಾರೆ.
ಸೋಜಾ ಎಲೆಕ್ಟ್ರಾನಿಕ್ಸ್‌ನ 32ನೇ ವರ್ಷದ ಪಾದಾರ್ಪಣೆಯ ಸಂಭ್ರಮದ ಅಂಗವಾಗಿ ರೂಪಿಸಿರುವ ಈ ಯೋಜನೆಯಲ್ಲಿ ಗ್ರಾಹಕರು ಮಾಸಿಕವಾಗಿ ರೂ 1000 ಪಾವತಿಸಿ, ಉಳಿತಾಯ ಮಾಡುವ ಮೂಲಕ ವಿವಿಧ ಆಕರ್ಷಕ ಬಹುಮಾನಗಳನ್ನು ಪಡೆಯುವ ಅವಕಾಶ ಹೊಂದಿದ್ದಾರೆ.
ಯೋಜನೆಯಡಿ ಅದೃಷ್ಟಶಾಲಿ ಗ್ರಾಹಕರಿಗೆ ವಿಶೇಷ ಬಹುಮಾನಗಳು ಲಭಿಸಲಿವೆ. ಉಳಿತಾಯದೊಂದಿಗೆ ಬಹುಮಾನ ಪಡೆಯುವ ಅವಕಾಶವನ್ನು ಕಲ್ಪಿಸಿರುವುದು ಯೋಜನೆಯ ವಿಶೇಷತೆಯಾಗಿದೆ.ನವಂಬರ್ ತಿಂಗಳ 10ನೇ ತಾರೀಕಿಗೆ ಮೊದಲ ಡ್ರಾ ನಡೆಯಲಿದೆ.
ವಿದ್ಯಾರ್ಥಿಗಳಿಗೆ ವಿಶೇಷ ಆಫರ್: ಐಫೋನ್ ಗೆಲ್ಲುವ ಅವಕಾಶ
ಸೋಜಾ ಮಳಿಗೆಯ ಸಂಭ್ರಮಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕವಾಗಿ ವಿಶೇಷ ಐಫೋನ್ ಆಫರ್ ಅನ್ನು ಸಂಸ್ಥೆ ಘೋಷಿಸಿದೆ. ಪಿಯುಸಿ, ಪದವಿ, ಐಟಿಐ, ಡಿಪ್ಲೊಮಾ, ಎಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ವಿವಿಧ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಂಸ್ಥೆಗೆ ಬಂದು ಉಚಿತ ಕೂಪನ್ ಪಡೆದು ಲಕ್ಕಿ ಡ್ರಾದಲ್ಲಿ ಭಾಗವಹಿಸಿ ಐಫೋನ್ ಸೇರಿದಂತೆ ಆಕರ್ಷಕ 10 ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಕಲ್ಪಿಸಲಾಗಿದೆ.
ಗ್ರಾಹಕರ ವಿಶ್ವಾಸವೇ ನಮ್ಮ ಶಕ್ತಿ: ಅಲ್ಫೋನ್ಸ್ ಫ್ರಾಂಕೋ
ಸಂಸ್ಥೆಯ 32 ವರ್ಷಗಳ ಪಯಣದಲ್ಲಿ ಗ್ರಾಹಕರು ನೀಡಿರುವ ಪ್ರೀತಿ, ವಿಶ್ವಾಸ ಮತ್ತು ಸಹಕಾರವೇ ನಮ್ಮ ಶಕ್ತಿಯಾಗಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಜೊತೆಗೆ ಅವರ ಉಳಿತಾಯಕ್ಕೆ ಪ್ರೋತ್ಸಾಹ ನೀಡಬೇಕು ಎಂಬ ಉದ್ದೇಶದಿಂದ ‘ಸೋಜಾ ಆಕಾಶ್ ಮಾಸಿಕ ಉಳಿತಾಯ ಯೋಜನೆ’ ರೂಪಿಸಲಾಗಿದೆ. ಉಳಿತಾಯದ ಜೊತೆಗೆ ಆಕರ್ಷಕ ಬಹುಮಾನಗಳನ್ನು ಪಡೆಯುವ ಅವಕಾಶವನ್ನು ಗ್ರಾಹಕರಿಗೆ ನೀಡುವುದು ನಮ್ಮ ಉದ್ದೇಶವಾಗಿದೆ.ವಿದ್ಯಾರ್ಥಿಗಳು ದೇಶದ ಭವಿಷ್ಯ. ಅವರ ವಿದ್ಯಾಭ್ಯಾಸ ಹಾಗೂ ಪ್ರತಿಭೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಐಫೋನ್ ವಿಶೇಷ ಆಫರ್‌ನ್ನು ಪ್ರತ್ಯೇಕವಾಗಿ ವಿದ್ಯಾರ್ಥಿಗಳಿಗಾಗಿ ನೀಡಲಾಗಿದೆ. ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಂಡು ಮುಂದೆಯೂ ಇನ್ನಷ್ಟು ಉತ್ತಮ ಸೇವೆ ಮತ್ತು ಯೋಜನೆಗಳನ್ನು ನೀಡುವುದು ನಮ್ಮ ಆಶಯ ಎಂದು ಅಲ್ಫೋನ್ಸ್ ಫ್ರಾಂಕೋ ತಿಳಿಸಿದ್ದಾರೆ.













