34.1 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಡಾ. ಪ್ರದೀಪ್ ನಾವೂರು ಕ್ಲಿನಿಕ್‌ಗೆ ಬೆಂಕಿ: ಕಿಡಿಗೇಡಿಗಳ ಕೃತ್ಯಕ್ಕೆ ಧಾರ್ಮಿಕ ಮುಖಂಡ ಡಿ. ಕಿರಣ್ ಚಂದ್ರ ಪುಷ್ಪಗಿರಿ ಖಂಡನೆ

ಬೆಳ್ತಂಗಡಿ: ಕ್ಲಿನಿಕ್‌ಗೆ ಕಿಡಿಗೇಡಿಗಳಿಂದ ಬೆಂಕಿ ದುರಂತದ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ತೀವ್ರ ಆಘಾತವಾಗಿದೆ. ನಾವೂರು ಗ್ರಾಮ ಹಾಗೂ ಬೆಳ್ತಂಗಡಿ ತಾಲೂಕಿನ ಹೆಸರನ್ನು ಇಡೀ ರಾಷ್ಟ್ರಮಟ್ಟದಲ್ಲಿ ಹೆಮ್ಮೆಯಿಂದ ಗುರುತಿಸುವಂತೆ ಮಾಡಿದ ಡಾ. ಪ್ರದೀಪ್ ಅವರ ಕಾರ್ಯಕ್ಷೇತ್ರಕ್ಕೆ ಈ ರೀತಿಯಾಗಿ ಹಾನಿ ಉಂಟಾಗಿರುವುದು ಅತ್ಯಂತ ಖಂಡನೀಯ.


ನಮ್ಮ ಮುಗ್ಧ ಮಕ್ಕಳಿಗೆ ಸಂಸ್ಕಾರದ ಹಾದಿ ತೋರಿಸಿ, ಭಗವದ್ಗೀತೆ ಹಾಗೂ ವಿಷ್ಣು ಸಹಸ್ರನಾಮ ಪಠನವನ್ನು ಕಲಿಸಿ, ಪ್ರತಿಯೊಂದು ಮನೆಯಲ್ಲೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಜಾಗೃತಿ ಮೂಡಿಸಿದ ಅವರ ನಿಸ್ವಾರ್ಥ ಸೇವೆ ಅನನ್ಯವಾದದ್ದು.
ಈ ದುಷ್ಟ ಕೃತ್ಯವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಧಾರ್ಮಿಕ ಮುಖಂಡ ಡಿ. ಕಿರಣ್ ಚಂದ್ರ ಪುಷ್ಪಗಿರಿ ತಿಳಿಸಿದ್ದಾರೆ.

ಈ ಘಟನೆಯ ಹಿಂದೆ ಎಷ್ಟೇ ಪ್ರಭಾವಿಗಳಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸೂಕ್ತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಕಾನೂನು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸುತ್ತೇನೆ. ಡಾ. ಪ್ರದೀಪ್ , ನೀವು ಹಚ್ಚಿದ ಸಂಸ್ಕಾರ ಮತ್ತು ಸೇವೆಯ ದೀಪವನ್ನು ಆರಿಸಲು ಯಾವ ದುಷ್ಟ ಶಕ್ತಿಗಳಿಂದಲೂ ಸಾಧ್ಯವಿಲ್ಲ. ಇಡೀ ಊರಿನ ಜನತೆ ಮತ್ತು ಬೆಳ್ತಂಗಡಿ ತಾಲೂಕಿನ ಪ್ರತಿಯೊಬ್ಬ ನಾಗರಿಕನ ಬೆಂಬಲ ಸದಾ ನಿಮ್ಮೊಂದಿಗಿದೆ. ಈ ಸಂಕಷ್ಟದಿಂದ ನೀವು ಧೈರ್ಯವಾಗಿ ಹೊರಬಂದು, ಮತ್ತೆ ಅದೇ ಆತ್ಮವಿಶ್ವಾಸದಿಂದ ನಿಮ್ಮ ಸೇವಾ ಕಾರ್ಯವನ್ನು ಮುಂದುವರಿಸಬೇಕಾಗಿ ವಿನಂತಿಸುತ್ತೇನೆ.

Related posts

ಕಕ್ಕಿಂಜೆ: ಅಣಿಯೂರು ಸ.ಉ.ಹಿ. ಪ್ರಾ. ಶಾಲಾ ಹಳೆ ವಿದ್ಯಾರ್ಥಿ ಸಂಘ-ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ದಿಡುಪೆ ಜಲಪಾತದಲ್ಲಿ ಅರಣ್ಯ ವಾಚರ್ ಮೇಲೆ ಹಲ್ಲೆ: ಹಣ ದೋಚಿ ಪರಾರಿ

Suddi Udaya

ದಿಡುಪೆ ಫಾಲ್ಸ್‌ನಲ್ಲಿ ನಿಯಮ ಉಲ್ಲಂಘನೆ; ಹೋಂಸ್ಟೇ ಮಾಲೀಕರಿಗೆ ದಂಡ

Suddi Udaya

ಕುಪೆಟ್ಟಿ, ಕಲ್ಲೇರಿ, ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಗುಂಡಿಗಳಿಗೆ ತಾತ್ಕಲಿಕ ಪರಿಹಾರ: ಪ್ರಯಾಣಿಕರಿಗೆ ಧೂಳಿನ ಗೋಳು

Suddi Udaya

ಪೆರ್ಲ ಬೈಪಾಡಿ ಸ.ಪ್ರೌ. ಶಾಲೆ ಯಕ್ಷಗಾನ ನಾಟ್ಯ ತರಗತಿ ಉದ್ಘಾಟನೆ

Suddi Udaya

ಎಸ್.ಡಿ.ಎಂ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಶಿಕ್ಷಣ, ಸಂಶೋಧನೆ, ಮತ್ತು ಉದ್ಯಮಶೀಲತೆ ಕಾರ್ಯಾಗಾರ

Suddi Udaya
error: Content is protected !!