33.4 C
ಪುತ್ತೂರು, ಬೆಳ್ತಂಗಡಿ
October 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾವೂರು ಡಾ. ಪ್ರದೀಪ್ ಅವರ ಕ್ಲಿನಿಕ್‌ಗೆ ಕಿಡಿಗೇಡಿಗಳಿಂದ ಬೆಂಕಿ: ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಂದೇಶ್ ಎಸ್.ಜೈನ್ ಆಗ್ರಹ

ಬೆಳ್ತಂಗಡಿ: ನಾವೂರು ಗ್ರಾಮದ ಡಾ. ಪ್ರದೀಪ್ ಅವರ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದಾಂಡೇಲಿಯಲ್ಲಿ ಪತ್ರಕರ್ತರಾಗಿರುವ ಕನ್ಯಾಡಿ ಗ್ರಾಮದ ಮೇಗಿನ ಸುರೆಕ್ಯ ಗುತ್ತು ಸಂದೇಶ್ ಎಸ್.ಜೈನ್ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ನಾವೂರು ಗ್ರಾಮದ ಜನತೆಯ ಪ್ರಾಣದೈವ, ಹೆಮ್ಮೆಯ ವೈದ್ಯ ಡಾ. ಪ್ರದೀಪ್ ಅವರ ಆರೋಗ್ಯ ಕ್ಲಿನಿಕ್ ಹಿಂಭಾಗದ ಕಿಟಕಿ ಒಡೆದು ಒಳಕ್ಕೆ ಡೀಸೆಲ್ ಸುರಿದು ಬೆಂಕಿ ಹಚ್ಚಿರುವುದು ಸಾಮಾನ್ಯ ಅಪರಾಧವಲ್ಲ, ಇದು ಪೂರ್ವಯೋಜಿತ ಕೊಲೆ ಯತ್ನಕ್ಕೆ ಸಮಾನವಾದ ಹೇಯ ಕೃತ್ಯ.ಆರೋಗ್ಯವನ್ನೇ ದೇವರೆಂದು ಪೂಜಿಸುವ ವೈದ್ಯರ ಮೇಲೆ ನಡೆದಿರುವ ಈ ದಾಳಿ ಇಡೀ ಮಾನವ ಸಮಾಜದ ಮೇಲೆ ನಡೆದ ದಾಳಿಯಾಗಿದೆ. ಸಿಸಿಟಿವಿ ಇಲ್ಲದ ಜಾಗವನ್ನು ಗುರುತಿಸಿ, ಡೀಸೆಲ್ ತಂದು ಬೆಂಕಿ ಹಚ್ಚಿರುವುದರ ಹಿಂದೆ ದೊಡ್ಡ ಸಂಚಿದೆ. ಇದನ್ನು ಅತ್ಯುಗ್ರವಾಗಿ ಖಂಡಿಸುತ್ತೇನೆ. ಇವತ್ತಿನದು ತಂತ್ರಜ್ಞಾನದ ಯುಗ. ಪೊಲೀಸ್ ಇಲಾಖೆ ತನ್ನಲ್ಲಿರುವ ಎಲ್ಲಾ ತಾಂತ್ರಿಕ ಅಸ್ತ್ರಗಳನ್ನು ಬಳಸಿ ಆರೋಪಿಗಳನ್ನು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದ್ದಾರೆ.

ಘಟನಾ ಸ್ಥಳದ ಸುತ್ತ 2 ಕಿ.ಮೀ ವ್ಯಾಪ್ತಿಯ ಎಲ್ಲಾ ಮೊಬೈಲ್ ಟವರ್ ಡಂಪ್ ಮತ್ತು ಅಆಖ ವಿಶ್ಲೇಷಣೆ ಮಾಡಬೇಕು. ಎಫ್‌ಎಸ್‌ಎಲ್ ವಿಧಿವಿಜ್ಞಾನ ಪ್ರಯೋಗಾಲಯದಿಂದ ಡೀಸೆಲ್ ಮತ್ತು ಬೆಂಕಿಯ ಕುರುಹುಗಳ ಬಗ್ಗೆ ತನಿಖೆ ನಡೆಸಬೇಕು. ನಾವೂರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿ ವಶಕ್ಕೆ ಪಡೆದು ಶ್ವಾನದಳ ಮತ್ತು ಬೆರಳಚ್ಚು ತಜ್ಞರ ನೆರವು ಪಡೆಯಬೇಕು. ಆರೋಪಿಗಳನ್ನು ತ್ವರಿತವಾಗಿ ಪತ್ತೆ ಹಚ್ಚಿ ಬಂಧಿಸದಿದ್ದರೆ, ಇದು ಪೊಲೀಸ್ ಇಲಾಖೆಯ ವೈಫಲ್ಯ, ಅಸಮರ್ಥತೆ ಮತ್ತು ಪ್ರಾಮಾಣಿಕತೆಗೆ ಹಿಡಿದ ಕೈಗನ್ನಡಿಯಾಗುತ್ತದೆ. ನಾವೂರಿನ ಶಾಂತಿಪ್ರಿಯ ಜನತೆಯ ಎದೆಗಾರಿಕೆಯನ್ನು ಈ ಕೃತ್ಯ ಅಲುಗಾಡಿಸಿದೆ. ಜನತೆಯಲ್ಲಿ ಧೈರ್ಯ ತುಂಬುವ ಕೆಲಸವನ್ನು ಪೊಲೀಸರು ಮಾಡಬೇಕಾಗಿದೆ. ಇಲ್ಲದಿದ್ದರೆ ಇಡೀ ಬೆಳ್ತಂಗಡಿ ತಾಲೂಕು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಪೊಲೀಸ್ ವ್ಯವಸ್ಥೆಯ ಮೇಲಿರುವ ಕೊನೆಯ ಭರವಸೆಯೂ ನಾಶವಾಗುತ್ತದೆ.

ಡಾ. ಪ್ರದೀಪ್ ಅವರಿಗಾದ ನೋವು ನಮಗೆಲ್ಲರಿಗೂ ಆಗಿರುವ ಗಾಯ ಡಾ. ಪ್ರದೀಪ್ ಅವರು ಕೇವಲ ಒಬ್ಬ ವೈದ್ಯರಲ್ಲ. ಕಳೆದ ಒಂದು ದಶಕದಿಂದ ದಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಿಷ್ಣು ಸಹಸ್ರನಾಮ, ಭಗವದ್ಗೀತಾ ಪಠಣ, ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ, ಧರ್ಮ ಜಾಗೃತಿ ಬೋಧನೆಯನ್ನು ನಿಸ್ವಾರ್ಥವಾಗಿ ಮಾಡುತ್ತಿರುವ ಒಬ್ಬ ಸಂತ. ತಮ್ಮ ವೈಯಕ್ತಿಕ ಸುಖ-ದುಃಖಗಳನ್ನು ಬದಿಗಿಟ್ಟು 24/7 ನಾವೂರಿನ ಜನತೆಗೆ ಆರೋಗ್ಯ ಸೇವೆ ನೀಡುತ್ತಿರುವ ನಾವೂರಿನ ಮನೆ ಮಗ. ನಾವೂರಿಗೆ ಅವರು ಶಕ್ತಿ, ಮಾರ್ಗದರ್ಶಕರು, ಆತ್ಮೀಯ ಬಂಧು. ಅಂತಹ ಮಹಾನ್ ಚೇತನಕ್ಕೆ ಆದ ಅನ್ಯಾಯ ನನ್ನಂತಹ ಸಾವಿರಾರು ಅಭಿಮಾನಿಗಳ ಎದೆಗೆ ಬಿದ್ದ ಮಾಸಲಾರದ ಗಾಯ, ಸಹಿಸಲಾರದ ನೋವು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ನಾವೂರಿನ ಜನತೆಗೆ ಶಕ್ತಿಯಾಗಿ, ಮಾರ್ಗದರ್ಶಕರಾಗಿ ತಮ್ಮನ್ನು ತಾವು ಸಮರ್ಪಣಾ ಭಾವದಿಂದ ಸಮರ್ಪಿಸಿಕೊಂಡಿರುವ ಡಾ. ಪ್ರದೀಪ್ ಅವರಿಗೆ ನ್ಯಾಯ ದೊರಕಿಸಿಕೊಡಬೇಕು. ತಪ್ಪಿತಸ್ಥರ ವಿರುದ್ಧ ಬಿಎನ್‌ಎಸ್ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಂಡು, ಅವರಿಗೆ ಸೂಕ್ತ ಪರಿಹಾರ ಮತ್ತು ರಕ್ಷಣೆ ಒದಗಿಸಬೇಕೆಂದು ನಾನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಮತ್ತು ಜಿಲ್ಲಾಡಳಿತವನ್ನು ಆಗ್ರಹಿಸುತ್ತೇನೆ ಎಂದು ತಿಳಿಸಿದ್ದಾರೆ.

Related posts

ಬೆಳ್ತಂಗಡಿ: ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಸುವರ್ಣ ರಂಗ ಸಮ್ಮಾನ್ , ಸಾಧನಾ ಭೂಷಣ – 2024

Suddi Udaya

ಪುದುವೆಟ್ಟು ಗ್ರಾ.ಪಂ. ನಲ್ಲಿ ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆ

Suddi Udaya

ನಿಡ್ಲೆ: ಬರೆಂಗಾಯದಲ್ಲಿ ವನದುರ್ಗಾರಾಧನೆ, ವರ್ಷಾವಧಿ ನೇಮೋತ್ಸವ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಆರಂಬೋಡಿ ಗ್ರಾಮದ ಬೂತ್ ಪ್ರಗತಿ ಸಭೆ

Suddi Udaya

ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆ

Suddi Udaya

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ಬಿಜೆಪಿ ಸಂಸ್ಥಾಪನಾ ದಿನಾಚರಣೆ

Suddi Udaya
error: Content is protected !!