33.4 C
ಪುತ್ತೂರು, ಬೆಳ್ತಂಗಡಿ
October 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸರಕಾರಿ ಆಸ್ಪತ್ರೆಗಳ ರಕ್ಷಿಸಿ, ಖಾಸಗೀ ಆಸ್ಪತ್ರೆಗಳ ನಿಯಂತ್ರಿಸಿ ; ತಾಲೂಕು ಕಚೇರಿ ಎದುರು ಸಿಪಿಐಎಂ ಪ್ರತಿಭಟನೆ

ಬೆಳ್ತಂಗಡಿ: ಇಂದು ಕಂಬಳದ ಕೋಣದ ಆರೋಗ್ಯಕ್ಕೆ ನೀಡುವ ಕಾಳಜಿ ಜನಸಾಮಾನ್ಯರ ಆರೋಗ್ಯಕ್ಕೆ ನೀಡದಿರುವುದು ಇಂದಿನ ಸರಕಾರಗಳ ಧೋರಣೆಯಾಗಿದೆ ಎಂದು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಹೇಳಿದರು.

ಅವರು ಸಿಪಿಐಎಂ ಬೆಳ್ತಂಗಡಿ ತಾಲೂಕು ನೇತೃತ್ವದಲ್ಲಿ ಸರಕಾರಿ ಆಸ್ಪತ್ರೆಗಳ ರಕ್ಷಿಸಿ, ಖಾಸಗೀ ಆಸ್ಪತ್ರೆಗಳ ನಿಯಂತ್ರಿಸಿ ಎಂಬ ಹೋರಾಟವನ್ನು ಉದ್ಘಾಟಿಸಿ ಮಾತಾಡಿದರು. ಸರಕಾರಿ ಆಸ್ಪತ್ರೆಗಳಲ್ಲಿ ಸುವ್ಯವಸ್ತಿತ ಸೌಲಭ್ಯಗಳು ಇರುವಂತೆ ಮಾಡಬೇಕು, ನುರಿತ ವೈದ್ಯರುಗಳು ಇರಬೇಕು ಎಂಬುದರ ಜೊತೆಗೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ತಾಲೂಕು ಆಸ್ಪತ್ರೆ ಸ್ಥಾಪನೆ ಆಗಬೇಕು ಎಂದು ಒತ್ತಾಯಿಸಿದರು.

ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ಅವರು ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಸಾಕಷ್ಟು ವೈದ್ಯರು ನರ್ಸ್ಗಳು ನೇಮಕವಾಗಬೇಕು, ಕನಿಷ್ಟ ಸೈನಿಂಗ್ ವ್ಯವಸ್ಥೆ ಇಲ್ಲದ ನಮ್ಮ ಆಸ್ಪತ್ರೆಯಲ್ಲಿ ಮೂಲಭೂತ ಸವಲತ್ತುಗಳೂ ಇಲ್ಲ ಎಂದರು. ಕೇರಳದ ಎಡರಂಗ ಗ್ರಾಮದ ಆಸ್ಪತ್ರೆಯಲ್ಲಿರುವ ಸುವ್ಯವಸ್ಥೆಯನ್ನಾದರೂ ನಮ್ಮ ತಾಲೂಕು ಆಸ್ಪತ್ರೆಗೆ ಒದಗಿಸಿರಿ ಎಂದವರು ಹೇಳಿದರು.

ಸಿಪಿಐಎಂ ಪಕ್ಷದ ತಾಲೂಕು ಸಮಿತಿ ಸದಸ್ಯ ಲಕ್ಷ್ಮಣ ಗೌಡ ಸ್ವಾಗತಿಸಿದರು. ಶ್ಯಾಮರಾಜ್ ಪಟ್ರಮೆ ವಂದಿಸಿದರು. ಹೋರಾಟದ ನೇತೃವದಲ್ಲಿ ಸಿಪಿಐಎಂ ಪಕ್ಷದ ತಾಲೂಕು ಮುಖಂಡರುಗಳಾದ ಜಯಶ್ರೀ, ಧನಂಜಯ, ಸುಕುಮಾರ್, ಅಜಿ.ಎಂ.ಜೋಸ್ ಹಾಗೂ ಕಾರ್ಮಿಕ ಮುಖಂಡರುಗಲಾದ ದೇವಕಿ, ರಾಮಚಂದ್ರ, ಪುಷ್ಪ, ಅಶ್ವಿತ, ಶಾಜಿ, ನಯನ ಕುಮಾರಿ, ಮಹಿಳಾ ಸಂಘದ ಕಿರಣಪ್ರಭ, ಶ್ರೀಮತಿ ಕುಮಾರಿ, ಡಿ.ಎಚ್.ಎಸ್ ತಾಲೂಕು ಅಧ್ಯಕ್ಷ ಅಣ್ಣು, ವಿದ್ಯಾರ್ಥಿ ನಾಯಕ ವಿನುಶರಮಣ, ಯುವಜನ ನಾಯಕರಾದ ಅಧಿತಿ, ಜಯಂತ ಮೊದಲಾದವರು ಇದ್ದರು.

Related posts

ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕಬ್ಸ್, ಬುಲ್ ಬುಲ್ಸ್ ವಿದ್ಯಾರ್ಥಿಗಳಿಗೆ ರಾಜಪಾಲರಿಂದ ರಾಜ್ಯ ಪ್ರಶಸ್ತಿ ಪತ್ರ

Suddi Udaya

ಪುತ್ತೂರು ಬಿಲ್ಲವ ಸಂಘದಿಂದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ರವರಿಗೆ ಅಭಿನಂದನೆ

Suddi Udaya

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾಗಿ ಅಬ್ದುಲ್ ಹಮೀದ್, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಆಯ್ಕೆ

Suddi Udaya

ಬೆಳಾಲು ಪ್ರೌಢಶಾಲೆಯ ವಿದ್ಯಾರ್ಥಿ ಸರಕಾರ ರಚನೆ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ಕೆಸರ್ ಕಂಡೊಡು ಗೌಡೆರೆಗೌಜಿ-ಗಮ್ಮತ್ ಉದ್ಘಾಟನೆ: ಮಾಜಿ ಸೈನಿಕರಿಗೆ ಸಂಘದ ವತಿಯಿಂದ ಗೌರವಾಪ೯ಣೆ – ಆದ್ದೂರಿಯಾಗಿ ನಡೆದ ತುಳು ಜಾನಪದ ಶೈಲಿಯ ಪಥ ಸಂಚಲನ

Suddi Udaya

ಬೆಳ್ತಂಗಡಿ ತೋಟಗಾರಿಕೆ ಇಲಾಖೆಯಲ್ಲಿ ಡಾ. ಎಂ ಎಚ್ ಮರಿಗೌಡರ ಜನ್ಮ ದಿನಾಚರಣೆ

Suddi Udaya
error: Content is protected !!