32.4 C
ಪುತ್ತೂರು, ಬೆಳ್ತಂಗಡಿ
October 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಂಚಗ್ಯಾರಂಟಿ ಯೋಜನೆಯಲ್ಲಿ ತಾಲೂಕಿಗೆ ರೂ. 674,4727,109 ಮೊತ್ತ ಜಮೆ

ಬೆಳ್ತಂಗಡಿ :  ರಾಜ್ಯ ಸರಕಾರ ಮಹತ್ವಕಾಂಕ್ಷಿ ಯೋಜನೆಯಾದ ಪಂಚಗ್ಯಾರಂಟಿ ಯೋಜನೆಯನ್ನು ತಾಲೂಕಿನ ಜನರಿಗೆ ತಲುಪಿಸಿ ಮೂರು ವರ್ಷದಲ್ಲಿ ಅಹ ಫಲಾನುಭಾವಿಗಳಿಗೆ ರೂ. 674.4727.109 ಮೊತ್ತ ಜಮೆಯಾಗಿದ್ದು ಜಿಲ್ಲಾ ಮಟ್ಟದಲ್ಲಿ ನಮ್ಮ ಸಮಿತಿ ಪ್ರಥಮ ಸ್ಥಾನದಲ್ಲಿದೆ. ಸರಕಾರ ಆದೇಶದಂತೆ ನೂತನ ಸಮಿತಿ ರೂಪುಗೊಳ್ಳಲಿದ್ದು ನಮ್ಮ ಈ ಮೂರು ವರ್ಷದ ಅವಧಿಯಲ್ಲಿ ಸಹಕರಿಸಿದ ಜನರಿಗೆ, ಅಧಿಕಾರಿಗಳಿಗೆ ಎಲ್ಲರಿಗೂ ಕೃತಜ್ಞತೆಗಳನ್ನು ಬೆಳ್ತಂಗಡಿ ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ಮಾಲಾಡಿ ಸಲ್ಲಿಸಿದರು.

ಅವರು ಅ.10ರಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯ ಸರಕಾರ 5 ಅದ್ಭುತ ಯೋಜನೆಗಳನ್ನು ರಾಜ್ಯಕ್ಕೆ ಪರಿಚಯಿಸಿ ತಕ್ಷಣದಿಂದ ಜಾರಿಗೊಳಿಸಿ ಜನರ ಬದುಕಿಗೆ ಹೊಸ ಭರವಸೆಯನ್ನು ತಂದಿದೆ. ಟೀಕೆಗಳನ್ನು ಎದುರಿಸಿ ಪ್ರತೀ ಕುಟುಂಬದ ಗ್ರಹಿಣಿಯರ ಕೈ ಹಿಡಿದು ಗೃಹಲಕ್ಷ್ಮೀ ಯೋಜನೆ, ಮಹಿಳೆಯರ ಹೆಗಲ ಭಾರ ಇಳಿಸಿ ಸ್ವಾವಲಂಬನೆಯಿಂದ ಬದುಕು ಬದಲಾಯಿಸಿದ ಯೋಜನೆ, ಹಸಿವು ಮುಕ್ತ ಕರ್ನಾಟಕಕ್ಕೆ ಅನ್ನಭಾಗ್ಯ ಯೋಜನೆ, ಗೃಹಜ್ಯೋತಿ, ಶಕ್ತಿ. ಯುವನಿಧಿ ಈ ಎಲ್ಲಾ ಯೋಜನೆಗಳ ಅನುಷ್ಠಾನದಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಉಳಿಸಿಕೊಂಡು ಬರುವಲ್ಲಿ ಅಧ್ಯಕ್ಷರೊಂದಿಗೆ ಸಂಪೂರ್ಣ ಸಹಕಾರ ನೀಡಿದ 5 ಇಲಾಖೆಯ ಅಧಿಕಾರಿಗಳಿಗೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ, ಕೃತಜ್ಞತೆ ಸಲ್ಲಿಸಿದರು.

ಪ್ರತಿ ಶಿಬಿರಗಳ ಸಭೆಗಳ ವಿಚಾರಗಳನ್ನು ಜನತೆಗೆ ತಲುಪಿಸುತ್ತಿದ್ದ ಪತ್ರಿಕಾ ಮಾಧ್ಯಮ, ದೃಶ್ಯಮಾಧ್ಯಮದವರಿಗೆ, ಎಲ್ಲಾ ಕಾರ್ಯಗಳ ಬಗ್ಗೆ ಸಲಹೆ ಹಾಗೂ ತಾಲೂಕಿನ ಎಲ್ಲಾ ಇಲಾಖೆಗಳನ್ನು ಸಮನ್ವಯದೊಂದಿಗೆ ಈ ಸಮಿತಿಯ ಕಾರ್ಯದರ್ಶಿಯವರಾದ, ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ರವರಿಗೆ ತಾಲೂಕು, ನೋಡೆಲ್ ಅಧಿಕಾರಿಯಾದ ಹೆರಾಲ್ಡ್ ಸಿಕ್ವೆರಾ ಹಾಗೂ ತಾಲೂಕು ಪಂಚಾಯತ್ ಸಿಬ್ಬಂದಿಯವರಿಗೆ, ಸಮಿತಿಯ ಸದಸ್ಯರಿಗೆ,  ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಹಕರಿಸಿದ ಕಾಂಗ್ರೆಸ್ ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೂ ಎಲ್ಲರಿಗೂ ಧನ್ಯವಾದಗಳು ಎಂದರು.

ಪತ್ರಿಕಾಗೋಷ್ಠಿಯಲ್ಲಿ  ಸಮಿತಿ ಸದಸ್ಯರಾದ  ನೇಮಿರಾಜ್ ಕಿಲ್ಲೂರು,  ಸೌಮ್ಯಾ ಲಾಯಿಲ, ಮರಿಟಾ ಪಿಂಟೋ, ಶರೀಫ್ ಸಬರಬೈಲು, ವಿಜಯ ಗೌಡ ಬೇಳಾಲು ಹಾಗೂ ವೀರಪ್ಪ ಮೊಯ್ಲಿ ಬಂಗಾಡಿ ಉಪಸ್ಥಿತರಿದ್ದರು.

ಇದುವರೆಗೂ ಈ ಯೋಜನೆಯಲ್ಲಿ ಗೃಹಲಕ್ಷ್ಮೀ ಯೋಜನೆಯ 32 ಕಂತುಗಳಲ್ಲಿ 315.39, 4400, ಗೃಹಜ್ಯೋತಿಯಲ್ಲಿ 141.13.72.541, ಅನ್ನಭಾಗ್ಯದಲ್ಲಿ 55, 49,55.540, ಶಕ್ತಿಯೋಜನೆಯಲ್ಲಿ 123.10.96.528, ಯುವನಿಧಿಯಲ್ಲಿ 3.33.58.500 ರೂ. ಮೊತ್ತ ಜಮೆಯಾಗಿದ್ದು ಒಟ್ಟಿನಲ್ಲಿ ಈ ಮೂರು ವರ್ಷದಲ್ಲಿ ತಾಲೂಕಿಗೆ 674.4727.109 ರೂ. ಜಮೆಯಾಗಿದೆ.
-ಪದ್ಮನಾಭ ಸಾಲ್ಯಾನ್ ಮಾಲಾಡಿ, ಅಧ್ಯಕ್ಷರು ಬೆಳ್ತಂಗಡಿ ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ

Related posts

ಚಾರ್ಮಾಡಿ: ಅರೆ ಪ್ರಜ್ಞಾ ಸ್ಥಿತಿಯಲ್ಲಿ ಪತ್ತೆಯಾದ ಕಾಡಾನೆ

Suddi Udaya

ತಾಳೆ ಬೆಳೆ ಪ್ರದೇಶ ವಿಸ್ತರಣೆ: ಅರ್ಜಿ ಆಹ್ವಾನ

Suddi Udaya

ಕಕ್ಯಪದವು: ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ” ಷೇರು ಮಾರುಕಟ್ಟೆ ವಿಶ್ಲೇಷಣೆ” ಕುರಿತು ಮಾಹಿತಿ ಕಾರ್ಯಾಗಾರ

Suddi Udaya

ಅಂತರ್ ಕಾಲೇಜು ಚದುರಂಗ ಸ್ಪರ್ಧೆ: ಎಸ್ ಡಿಎಂ ಕಾಲೇಜಿನ ಪುರುಷರ ತಂಡ ಚಾಂಪಿಯನ್

Suddi Udaya

ಉಜಿರೆ: ಎಸ್ ಡಿ ಯಂ ಪಾಲಿಟೆಕ್ನಿಕ್ – ರಾಷ್ಟೀಯ ಯುವ ದಿನದ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ

Suddi Udaya

ವಲಯ ಮಟ್ಟದ ಬಂಟರ ಕ್ರೀಡಾಕೂಟ: ಪ್ರಜನ್ ಶೆಟ್ಟಿ ಮುಂಡಾಜೆ ಪ್ರಥಮ

Suddi Udaya
error: Content is protected !!