ಮಾಲಾಡಿ: ಮಾಲಾಡಿ ಗ್ರಾಮದ ಕೆತ್ತಿಗುಡ್ಡೆ, ಪುರಿಯ ಮೂಡಬೆಟ್ಟು ಉರ್ಕಿದ ಬೈಲು ಮೊದಲಾದ ಪ್ರದೇಶಗಳಲ್ಲಿ ಅ.9 ರಂದು ಸಂಜೆ ಬೀಸಿದ ಗಾಳಿ ಮಳೆಗೆ ಆನೇಕ ಮಂದಿಯ ಮನೆಗೆ ಹಾನಿಯಾಗಿದ್ದು, ಸಾವಿರಾರು ರೂ. ನಷ್ಟ ಸಂಭವಿಸಿದೆ.

ಸಂಜೆ ಸುರಿದ ಗಾಳಿ ಮಳೆಗೆ ಮೂಡಬೆಟ್ಟು, ಪುರಿಯ, ಕೆತ್ತಿಗುಡ್ಡೆ,, ಕುರಿಯೋಡಿ,, ಹುನ್ಸೆ ಬೆಟ್ಟು, ಪೇರ್ಡೆ ಮೊದಲಾದ ಕಡೆಗಳಲ್ಲಿ ಹಲವು ಮಂದಿಯ ಮನೆಯ ಹಂಚು, ಶೀಟ್ ಹಾರಿ ಹೋಗಿ ಪುಡಿಯಾಗಿ ಸಾವಿರಾರು ನಷ್ಟ ಸಂಭವಿಸಿದೆ. ಬಿರುಗಾಳಿ ಮಳೆಗೆ ಅನೇಕ ಮರಗಳು ಉರುಳಿ ಬಿದ್ದು ವಾಸದ ಮನೆಗಳಿಗೆ ಕೃಷಿಗೆ ಹಾನಿ ತಟ್ಟಿದೆ. ವಿದ್ಯುತ್ ಕಂಬ ಮುರಿದು ಬಿದ್ದು ಅಪಾರ ನಷ್ಟ ಆಗಿದೆ. ಮೆಸ್ಕಾಂ, ಅರಣ್ಯ ಇಲಾಖೆಯ ವತಿಯಿಂದ ನಾಗರಿಕರ ಸಹಕಾರದಿಂದ ಮುರಿದು ಬಿದ್ದ ಮರಗಳ ತೆರವು ರಸ್ತೆ ಸಂಪರ್ಕ ಸರಿ ಪಡಿಸುವ ಕಾರ್ಯಾಚರಣೆಯನ್ನು ಇಂದು ಆರಂಭಿಸಿದ್ದಾರೆ. ಅ.೯ರಂದು ರಾತ್ರಿ ವಿದ್ಯುತ್ ಸರಬರಾಜು ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಗ್ರಾಮ ಪಂಚಾಯತು ಪಿಡಿಒ, ಕಂದಾಯ ಇಲಾಖೆ, ಅರಣ್ಯ ಮೆಸ್ಕಾಂ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












