24.3 C
ಪುತ್ತೂರು, ಬೆಳ್ತಂಗಡಿ
October 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗುರಿಪಳ್ಳ ಸ.ಹಿ.ಪ್ರಾ. ಶಾಲೆಯಲ್ಲಿ ನಿರ್ಮಾಣಗೊಂಡ ನೂತನ ಸಭಾಂಗಣಕ್ಕೆ ಧರ್ಮಸ್ಥಳ ಕ್ಷೇತ್ರದಿಂದ ರೂ.1.50 ಲಕ್ಷ ಮೊತ್ತದ ಮಂಜೂರಾತಿ ಪತ್ರ ವಿತರಣೆ

ಇಂದಬೆಟ್ಟು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಇಂದಬೆಟ್ಟು ವಲಯದ ಗುರಿಪಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣಗೊಂಡ ನೂತನ ಸಭಾಂಗಣಕ್ಕೆ ಡಾ. ವೀರೇಂದ್ರ ಹೆಗ್ಗಡೆ ರವರು ಮಂಜೂರು ಮಾಡಿದ ರೂ. 1,50,000/- ಮೊತ್ತದ ಮಂಜೂರಾತಿ ಪತ್ರವನ್ನು ವಿತರಣೆ ಮಾಡಲಾಯಿತು.

ಇಂದಬೆಟ್ಟು ವಲಯಾಧ್ಯಕ್ಷ ಗುರುರಾಜ್ ಗುರಿಪಳ್ಳ ಹಾಗೂ ವಲಯ ಮೇಲ್ವಿಚಾರಕಿ ಉಷಾ ಇವರು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷೆ ಶಾಂಭ ಶೆಟ್ಟಿಯವರಿಗೆ ಮಂಜೂರಾತಿ ಪತ್ರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಸಾದ್ ಪೂಜಾರಿ ಬನತ್ರೋಡಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಭರತ್ ಪೂಜಾರಿ ಬ್ರಹ್ಮಸ, ಉಪಾಧ್ಯಕ್ಷ ಜಯರಾಮ್ ಪೂಜಾರಿ ಕೊಡೆಕ್ಕಲ್, ಗೌರವ ಸಲಹೆಗಾರರು ಪ್ರಸಾದ್ ಕುಮಾರ್ ಏನೀರು, ಶಾಲಾ ಸಹ ಶಿಕ್ಷಕಿ ಶ್ರೀಮತಿ ಅಂಬಿಕಾ ಭಟ್, ಅಜಿತ್ ಎಂ ಭಟ್, ಒಕ್ಕೂಟದ ಪದಾಧಿಕಾರಿಗಳಾದ ಬಾಬು ಬಂಗೇರ, ನಾರಾಯಣ ಗೌಡ ಕೊಡ್ಡೋಲು, ಶ್ರೀಮತಿ ಚಂದ್ರಕಲಾ ಕೇರಿಮಾರು, ಶ್ರೀಮತಿ ವನಿತಾ ಬ್ರಹ್ಮಸ, ಸೇವಾಪ್ರತಿನಿಧಿ ಶ್ರೀಮತಿ ಪುಷ್ಪಾವತಿ ಉಪಸ್ಥಿತರಿದ್ದರು.

Related posts

ಭಾರತೀಯ ಸೇನೆಗೆ ಆಯ್ಕೆಯಾದ ಮಿತ್ತಬಾಗಿಲು ಪುನೀತ್ ಕುಮಾರ್ ರಿಗೆ ಪಂಚಶ್ರೀ ಹಾರ್ಡ್ವೇರ್ ವತಿಯಿಂದ ಸನ್ಮಾನ

Suddi Udaya

ಕೊಕ್ಕಡದಲ್ಲಿ ಶ್ರೀ ಸೌತಡ್ಕ ರಸಗೊಬ್ಬರ ಮತ್ತು ಕೀಟನಾಶಕ ಮಳಿಗೆ” ಶುಭಾರಂಭ

Suddi Udaya

ಕುಕ್ಕಾವು ಸ.ಹಿ.ಪ್ರಾ. ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕಿ ಲೀಲಾ ರವರಿಗೆ ಅಭಿನಂದನಾ ಸಮಾರಂಭ

Suddi Udaya

ಉಜಿರೆಯಲ್ಲಿ ಸಂಕಷ್ಟಿ ಪ್ರಯುಕ್ತ ತಾಳಮದ್ದಳೆ

Suddi Udaya

ಕುಕ್ಕೇಡಿ ಉಳ್ತೂರು ಬಳಿಯ ಕಡ್ತ್ಯಾರ್ ಎಂಬಲ್ಲಿ ಸುಡುಮದ್ದು ತಯಾರಿಕ ಘಟಕದಲ್ಲಿ ಭೀಕರ ಸ್ಪೋಟ ದುರಂತದಲ್ಲಿ ಚಿದ್ರಗೊಂಡು ದೂರಕ್ಕೆ ಎಸೆಯಲ್ಪಟ್ಟ ದೇಹಗಳು – ಮೂವರು ಸಾವು : ಹಲವರಿಗೆ ಗಂಭೀರ ಗಾಯ

Suddi Udaya

ವಾಲಿಬಾಲ್ ಪಂದ್ಯಾಟ: ವಾಣಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!