28.4 C
ಪುತ್ತೂರು, ಬೆಳ್ತಂಗಡಿ
October 12, 2026
ತಾಲೂಕು ಸುದ್ದಿಪ್ರಮುಖ ಸುದ್ದಿ

ಶೃಂಗೇರಿ ಶಾರದಾಂಬೆ ಸಾನಿಧ್ಯದಲ್ಲಿ, ಸಿಂಗಾರ ಕಲಾವಿದೆರ್ ಬಜಗೋಳಿ ತಂಡದ ಹೊಸ ನಾಟಕ “ಅಂಗೈ ಮದಿಮಾಲ್” ಶುಭ ಮುಹೂರ್ತ

ಬೆಳ್ತಂಗಡಿ: ತುಳು ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ‘ಸಿಂಗಾರ ಕಲಾವಿದೆರ್ ಬಜಗೋಳಿ’ ತಂಡದ ಈ ವರ್ಷದ ಹೊಸ ತುಳು ನಾಟಕ ‘ಅಂಗೈ ಮದಿಮಾಲ್’ ರಂಗ ಪ್ರಯೋಗದ ಶುಭ ಮುಹೂರ್ತವು ಶೃಂಗೇರಿ ಶಾರದಾಂಬೆಯ ಪುಣ್ಯ ಸಾನಿಧ್ಯದಲ್ಲಿ ಅತ್ಯಂತ ಸಂಭ್ರಮದಿಂದ ಭಾನುವಾರ ನೆರವೇರಿತು.

ಅಶು ಬಜಗೋಳಿ ಅವರ ಸಾರಥ್ಯದಲ್ಲಿ ಹಾಗೂ ಗಣೇಶ್ ಬಿ. ಅಳಿಯೂರು ಅವರ ನಿರ್ದೇಶನದಲ್ಲಿ ಹಾಗೂ ಪ್ರವೀಣ್ ಶೆಟ್ಟಿ ಸಮಗ್ರ ನಿರ್ವಹಣೆಯಲ್ಲಿ ಈ ನಾಟಕವು ಮೂಡಿಬರಲಿದೆ. ಈ ಶುಭ ಸಮಾರಂಭದಲ್ಲಿ ನಾಟಕದ ತಂಡದ ಪ್ರಮುಖರಾದ ಅಶು ಬಜಗೋಳಿ, ಪ್ರವೀಣ್ ಶೆಟ್ಟಿ ಬಜಗೋಳಿ, ಅಶ್ವಥ್ ಚೆಂಡೆ, ಸುಧೀಶ್ ಪುತ್ತಿಗೆ, ಸಂಪತ್ ಸಾಣೂರು,ಶ್ಯಾಮ್ ಪ್ರಸಾದ್ ನಲ್ಲೂರು ಹಾಗೂ ಚೈತ್ರ ಕಡಾರಿ ಉಪಸ್ಥಿತರಿದ್ದರು. ತುಳು ರಂಗಭೂಮಿ ಪ್ರೇಕ್ಷಕರಿಗೆ ವಿಭಿನ್ನ ಮನರಂಜನೆ ನೀಡಲು ಸಜ್ಜಾಗುತ್ತಿರುವ ಈ ‘ಅಂಗೈ ಮದಿಮಾಲ್ ’ ನಾಟಕವು ಅತೀ ಶೀಘ್ರದಲ್ಲೇ ಪ್ರದರ್ಶನಗೊಳ್ಳಲಿದೆ.

Related posts

ಲಾಯಿಲ: ಕನ್ನಾಜೆ ಅಂಗನವಾಡಿ ಕೇಂದ್ರದಲ್ಲಿ ಹಣ್ಣಿನ ಗಿಡಗಳ ನಾಟಿ ಹಾಗೂ ಶಾಲಾ ಕೈತೋಟ ರಚನೆ

Suddi Udaya

ಮಹಾಭಾರತ ಸರಣಿಯ 114ನೇ ವಿಷಮ ದಾಂಪತ್ಯ ತಾಳಮದ್ದಳೆ

Suddi Udaya

ವೇಣೂರು: ಧೀಮಹಿ ಸನಾತನ ಪ್ರತಿಷ್ಠಾನದಿಂದ ಯಕ್ಷಗಾನ ಹಿಮ್ಮೇಳ  ತರಗತಿ ಆರಂಭ

Suddi Udaya

ನಡ ಸರಕಾರಿ ಪ.ಪೂ. ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

Suddi Udaya

ಎಲ್ ಸಿ ಆರ್ ವಿದ್ಯಾಸಂಸ್ಥೆಯಲ್ಲಿ ದಶಮ ಸಂಭ್ರಮದ ಸಭಾ ಕಾರ್ಯಕ್ರಮ

Suddi Udaya

ಕರಾಟೆ ಚಾಂಪಿಯನ್ ಶಿಪ್: ಶ್ರೀಚರಣ್ ಜೈನ್ ಬಂಗಾಡಿ ರವರಿಗೆ ಚಿನ್ನದ ಪದಕ

Suddi Udaya
error: Content is protected !!