33.9 C
ಪುತ್ತೂರು, ಬೆಳ್ತಂಗಡಿ
October 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವಿಜಯವಾಣಿ ಪತ್ರಿಕೆ ಮತ್ತು ಸೋಜಾ ಎಲೆಕ್ಟ್ರಾನಿಕ್ & ಫರ್ನೀಚರ್ಸ್ ಬೆಳ್ತಂಗಡಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ವಿಜಯೋತ್ಸವ ಶಾಪಿಂಗ್ ಹಬ್ಬಗಳ ಸಂಭ್ರಮ “ಕೂಪನ್ ಬಿಡುಗಡೆ”

ಬೆಳ್ತಂಗಡಿ: ವಿಜಯವಾಣಿ ಪತ್ರಿಕೆ ಮತ್ತು ಉತ್ಕೃಷ್ಟ ಉತ್ಪನ್ನಗಳ ವಿಶ್ವಾಸಾರ್ಹ ವಿಕ್ರಯವಾಗಿರುವ ಸೋಜಾ ಎಲೆಕ್ಟ್ರಾನಿಕ್ & ಫರ್ನೀಚರ್ಸ್ ಬೆಳ್ತಂಗಡಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ವಿಜಯೋತ್ಸವ ಶಾಪಿಂಗ್ ಹಬ್ಬಗಳ ಸಂಭ್ರಮ “ಕೂಪನ್ ಬಿಡುಗಡೆ ಕಾರ್ಯಕ್ರಮ ಅ.13ರಂದು ಬೆಳ್ತಂಗಡಿ ಸೋಜಾ ಎಲೆಕ್ಟ್ರಾನಿಕ್ & ಫರ್ನೀಚರ್ಸ್ನಲ್ಲಿ ನಡೆಯಿತು.

ಬೆಳ್ತಂಗಡಿ ವಲಯದ ಧರ್ಮಗುರು ಫಾ. ವಾಲ್ಟರ್ ಡಿ`ಮೆಲ್ಲೊ ಅವರು ಕೂಪನ್ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.

ವೇದಿಕೆಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮೊಯಿದಿನ್ ಭಾವ, ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್ ಜನಾರ್ದನ್, ವಿಜಯವಾಣಿ ಪತ್ರಿಕೆಯ ಪತ್ರಕರ್ತ ಮನೋಹರ ಬಳಂಜ ಉಪಸ್ಥಿತರಿದ್ದರು.

ಸೋಜಾ ಎಲೆಕ್ಟ್ರಾನಿಕ್ & ಫರ್ನೀಚರ್ಸ್ ಬೆಳ್ತಂಗಡಿ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಅಲ್ಫಾನ್ಸೋ ಫ್ರಾಂಕೋ ಸ್ವಾಗತಿಸಿದರು. ಸಂಸ್ಥೆಯ ಸಿಬ್ಬಂದಿಗಳು ಕುರಾನ್, ಬೈಬಲ್, ಭಗವದ್ಗೀತೆ ಬೋಧಿಸಿ, ಪ್ರಾರ್ಥಿಸಿದರು. ಪಿ.ಆರ್.ಒ.ಗಳಾದ ಅಬ್ದುಲ್ ಖಾದರ್ ನಾವೂರು ಕಾರ್ಯಕ್ರಮ ನಿರೂಪಿಸಿದರು. ಅಮೀನಾ ಬೀ ಶಬಾನ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.

Related posts

ಆ.21-22: ರೈತರಿಗೆ ಜೇನು ಕೃಷಿ ಹಾಗೂ ಜೇನಿನ ಮೌಲ್ಯವರ್ಧನೆ ಕುರಿತು ಸಾಂಸ್ಥಿಕ ತರಬೇತಿ

Suddi Udaya

ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಸಂತಸದ ವಿಚಾರ: ದೇವೇಂದ್ರ ಹೆಗ್ಡೆ ಕೊಕ್ರಾಡಿ

Suddi Udaya

ತೆಕ್ಕಾರಿನ ಬಟ್ರಬೈಲು ಎಂಬಲ್ಲಿ ದೇವಸ್ಥಾನದ ಬಾವಿಯಲ್ಲಿ ಅತೀ ಪುರಾತನ ಶ್ರೀ ಕೃಷ್ಣ ದೇವರ ವಿಗ್ರಹ ಪತ್ತೆ

Suddi Udaya

ಕನ್ಯಾಡಿ 2 ಸ.ಉ.ಹಿ. ಪ್ರಾ. ಶಾಲಾ ಮಂತ್ರಿಮಂಡಲದ ಪ್ರಮಾಣವಚನ ಸ್ವೀಕಾರ ಸಮಾರಂಭ

Suddi Udaya

ಯುವ ಕಾಂಗ್ರೆಸ್ ಗ್ರಾಮೀಣ ಬ್ಲಾಕ್ ನ ಉಪಾಧ್ಯಕ್ಷರಾಗಿ ಯತೀಶ್ ಯಕ್ಷ ಧರ್ಮಸ್ಥಳ ನೇಮಕ

Suddi Udaya

ಬೆಳಾಲು ಶ್ರೀ ಧ.ಮಂ. ಪ್ರೌಢಶಾಲಾ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಚೊಕ್ಕಾಡಿ 60 ಅಭಿನಂದನಾ ಸಮಾರಂಭ

Suddi Udaya
error: Content is protected !!