November 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬ್ರೈನ್ ಕ್ವಿಜ್ ಸ್ಪರ್ಧೆ: ಹೊಸಂಗಡಿ ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ

ಹೊಸಂಗಡಿ: ರೋಟರಿ ಕ್ಲಬ್ ಸಿದ್ದಕಟ್ಟೆ ಫಾಲ್ಗುಣಿ ಪ್ರಾಯೋಜಕತ್ವದಲ್ಲಿ ಇಂದಿರಾ ಗಾಂಧಿ ರೆಸಿಡೆನ್ಸಿಯಲ್ ಶಾಲೆ, ಹೊಸಂಗಡಿ ಇಂಟರಾಕ್ಟ್ ಕ್ಲಬ್ ಆಯೋಜಿಸಿದ್ದ ಬ್ರೈನ್ ಕ್ವಿಜ್ ಫಿನಾಲೆ ಸ್ಪರ್ಧೆಯಲ್ಲಿ ಇಂದಿರಾಗಾಂಧಿ ವಸತಿ ಶಾಲೆ, ಹೊಸಂಗಡಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ನ.27 ರಂದು ಇಂದಿರಾ ಗಾಂಧಿ ರೆಸಿಡೆನ್ಷಿಯಲ್ ಶಾಲೆ, ಹೊಸಂಗಡಿಯಲ್ಲಿ ನಡೆದ ಫಿನಾಲೆಯಲ್ಲಿ ಒಟ್ಟು 6 ಶಾಲೆಗಳ ತಂಡಗಳು ಭಾಗವಹಿಸಿದ್ದವು.ಪ್ರತಿ ಶಾಲಾ ಮಟ್ಟದಲ್ಲಿ ಸ್ಪರ್ಧೆ ನಡೆಸಿ, ಪ್ರತಿ ಶಾಲೆಯಿಂದ ಮೂವರು ವಿಜೇತರಂತೆ ಒಟ್ಟು 18 ಸ್ಪರ್ಧಿಗಳು ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದರು.ಅಂತಿಮ ಸುತ್ತಿನಲ್ಲಿ ಹೊಸಂಗಡಿ ತಂಡದ ವಿದ್ಯಾರ್ಥಿಗಳಾದ ಚೇತಸ್ ಕೆ.ಆರ್, ವಿನಾಯಕ್ ಕೆ. ಚೌಟನವರ ಮತ್ತು ಅತಿಕ್ರಾಂತ್ ಆರಿಗ ಅವರು ಅತ್ಯುತ್ತಮ ಪ್ರದರ್ಶನ ನೀಡಿ ದ್ವಿತೀಯ ಸ್ಥಾನ ಪಡೆದರು. ವಿಜೇತ ವಿದ್ಯಾರ್ಥಿಗಳನ್ನು ರೋಟರಿ ಕ್ಲಬ್ ಸಿದ್ದಕಟ್ಟೆ ಫಾಲ್ಗುಣಿ ಅಧ್ಯಕ್ಷರು, ಸದಸ್ಯರು, ಶಾಲಾ ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದರು.

ವಿದ್ಯಾರ್ಥಿಗಳಲ್ಲಿ ಜ್ಞಾನ, ಚಿಂತನೆ ಮತ್ತು ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಈ ಕ್ವಿಜ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಎಂದು ಸಂಘಟಕರು ತಿಳಿಸಿದರು.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕದಿಂದ ತರಬೇತಿ ಕಾರ್ಯಕ್ರಮ

Suddi Udaya

ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ವಿರೋಧಿಸಿ ತಣ್ಣೀರುಪಂತ ಗ್ರಾ.ಪಂ. ಎದುರು ಬಿಜೆಪಿ ಪ್ರತಿಭಟನೆ

Suddi Udaya

ಎಸ್ಸೆಸ್ಸೆಲ್ಸಿ ಫಲಿತಾಂಶ: ಕನ್ನಡ ಮಾಧ್ಯಮ ಶಾಲೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಮಹಮ್ಮದ್ ಶಹಝಾದ್ ಗೆ ಅಭಿನಂದನೆ

Suddi Udaya

ಬೆಳ್ತಂಗಡಿ ನ್ಯಾಯಾಲಯದಲ್ಲಿ 80ನೇ ಸ್ವಾತಂತ್ರ್ಯೋತ್ಸವ

Suddi Udaya

ತಣ್ಣೀರುಪಂಥ: ಉಚಿತ ಆರಿ ಕೌಶಲ್ಯ ತರಬೇತಿ ಸಮಾರೋಪ ಸಮಾರಂಭ

Suddi Udaya

ಇಂಡೋ-ಭೂತಾನ್ ಯುವ ಸ್ನೇಹ ಶಿಬಿರಕ್ಕೆ ವೇಣೂರಿನ ನಿಶ್ಮಾ ಪೂಜಾರಿ ಆಯ್ಕೆ

Suddi Udaya
error: Content is protected !!