October 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾರಾವಿ ಬ್ರಹ್ಮಬೈದರ್ಕಳ ಗರಡಿ, ಶ್ರೀ ಕೊಡಮಣಿತ್ತಾಯಿ ದೈವಸ್ಥಾನದ ಶಿಲಾನ್ಯಾಸ

ನಾರಾವಿ: ತುಳುನಾಡಿನ ಆರಾಧನಾ ಪರಂಪರೆ, ಧಾರ್ಮಿಕ ನಂಬಿಕೆ ಹಾಗೂ ಸಾಂಸ್ಕೃತಿಕ ವೈಭವದ ಪ್ರತೀಕವಾಗಿರುವ ನಾರಾವಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಮತ್ತು ಶ್ರೀ ಕೊಡಮಣಿತ್ತಾಯಿ ದೈವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ನೂತನ ಗರಡಿ ಹಾಗೂ ದೈವಸ್ಥಾನದ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಅ. 12ರಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.

ತುಳುನಾಡಿನ ದೈವಾರಾಧನಾ ಪರಂಪರೆಯಲ್ಲಿ ಕೋಟಿ-ಚೆನ್ನಯರಿಗೆ ವಿಶೇಷ ಸ್ಥಾನವಿದೆ. ಅನ್ಯಾಯದ ವಿರುದ್ಧ ಹೋರಾಡಿ ಸತ್ಯ, ನ್ಯಾಯ ಹಾಗೂ ಧರ್ಮದ ಪ್ರತೀಕಗಳಾಗಿ ಜನಮಾನಸದಲ್ಲಿ ನೆಲೆನಿಂತ ಕೋಟಿ-ಚೆನ್ನಯರು ತುಳುನಾಡಿನ ಜನರ ಆರಾಧ್ಯ ದೈವಗಳಾಗಿದ್ದಾರೆ. ಅವರ ಆರಾಧನಾ ಕೇಂದ್ರಗಳಾದ ಗರಡಿಗಳು ತುಳುನಾಡಿನ ಇತಿಹಾಸ, ಸಂಸ್ಕೃತಿ ಹಾಗೂ ಜನಜೀವನದೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ. ನಾರಾವಿಯ ಶ್ರೀ ಬ್ರಹ್ಮಬೈದರ್ಕಳ ಗರಡಿಯೂ ಇಂತಹ ವಿಶಿಷ್ಟ ಧಾರ್ಮಿಕ ಪರಂಪರೆಯನ್ನು ಹೊಂದಿರುವ ಕ್ಷೇತ್ರವಾಗಿದೆ.

ಶ್ರೀ ಕೊಡಮಣಿತ್ತಾಯಿ ದೈವದ ಆರಾಧನೆಯೂ ತುಳುನಾಡಿನ ದೈವಾರಾಧನಾ ಸಂಪ್ರದಾಯದ ಪ್ರಮುಖ ಭಾಗವಾಗಿದ್ದು, ಭಕ್ತರ ನಂಬಿಕೆ, ಊರಿನ ಐಕ್ಯತೆ ಹಾಗೂ ಧಾರ್ಮಿಕ ಶ್ರದ್ಧೆಯೊಂದಿಗೆ ಬೆಸೆದುಕೊಂಡಿದೆ. ಗರಡಿ ಮತ್ತು ದೈವಸ್ಥಾನದ ಜೀರ್ಣೋದ್ಧಾರವು ಈ ಪಾರಂಪರಿಕ ಆರಾಧನಾ ಕೇಂದ್ರಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಿ ಹಸ್ತಾಂತರಿಸುವ ಮಹತ್ವದ ಕಾರ್ಯವಾಗಿದೆ. ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಮುಂದಿನ ವರ್ಷ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಆಯೋಜಿಸಲು ಉದ್ದೇಶಿಸಲಾಗಿದೆ.

ಕಾರ್ಯಕ್ರಮದಲ್ಲಿ ಮಂಗಳೂರು ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಶ್ರೀ ಬ್ರಹ್ಮಬೈದರ್ಕಳ ಗರಡಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಿ. ನಿರಂಜನ ಅಜ್ರಿ ರಾಮೆರಗುತ್ತು, ಸೂರಜ್ ಜೈನ್ ಪಮ್ಮದಬೆಟ್ಟು ಗುತ್ತು, ಜಗತ್ಪಾಲ ಜೈನ್ ಬೈರ್ನಡೆಗುತ್ತು, ಗೋಪಾಲ ಪೂಜಾರಿ ಗುರಿಕಾರರು, ಶ್ರೀ ಬ್ರಹ್ಮಬೈದರ್ಕಳ ಗರಡಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶೇಖರ್ ನಾರಾವಿ, ಉದ್ಯಮಿ ಶ್ರೀನಿವಾಸ ಕಿಣಿ, ಬಿಜೆಪಿ ಸಹ ಪ್ರಭಾರಿ ಜಯಂತ್ ಕೋಟ್ಯಾನ್ ಮರೋಡಿ, ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಡಿ. ಪುಷ್ಪಗಿರಿ, ಉದ್ಯಮಿ ವಸಂತ ಭಟ್, ಪ್ರಗತಿಪರ ಕೃಷಿಕ ಗಂಗಾಧರ ಮಿತ್ತಮಾರು, ಉದ್ಯಮಿ ರತ್ನಾಕರ ಬುಣ್ಣನ್ ಮರೋಡಿ, ಅಶೋಕ್ ಕೋಟ್ಯಾನ್ ಕಾಶಿಪಟ್ಣ, ಸದಾನಂದ ಪೂಜಾರಿ ದೋಲ್ದೊಟ್ಟು-ಪೆರಾಡಿ, ಸಾಹಿತಿ ಸದಾನಂದ ನಾರಾವಿ, ಡಾ. ಪ್ರಸಾದ್ ಶೆಟ್ಟಿ ನಾರಾವಿ, ವಾಸ್ತುತಜ್ಞ ಪ್ರಮಲ್ ಕುಮಾರ್ ಕಾರ್ಕಳ, ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಭಂಡಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕಾಂತ್ ಜೈನ್, ಮುನಿರಾಜ ಜೈನ್ ನಾರಾವಿ, ಕೋಟಿ-ಚೆನ್ನಯ ದರ್ಶನ ಪಾತ್ರಿಗಳಾದ ಜಯ-ವಿಜಯ ಮರೋಡಿ, ಉದ್ಯಮಿ ವಿನಯ ಕುಮಾರ್, ನಿವೃತ್ತ ಮುಖ್ಯೋಪಾಧ್ಯಾಯ ಪ್ರಭಾಕರ ನಾರಾವಿ, ಉದಯ ಹೆಗ್ಡೆ ನಾರಾವಿ, ನಿತ್ಯಾನಂದ ಪೂಜಾರಿ ಬಲ್ಪಂತಿ ನಾರಾವಿ, ಹರೀಶ್ ಪೂಜಾರಿ ನಿಟ್ಟೆ, ಅಭಿಜಿತ್ ಜೈನ್, ಸತೀಶ್ ಆಚಾರ್ಯ, ಸುಮಿತ್ರಾ, ರಾಮಚಂದ್ರ, ಧೀರಜ್ ಹೆಗ್ಡೆ, ರವಿ ಪೂಜಾರಿ, ರಾಜವರ್ಮ ಜೈನ್, ದಿವಾಕರ ಭಂಡಾರಿ, ಮೋಹನ್ ಅಂಡಿಂಜೆ ಸೇರಿದಂತೆ ಊರಿನ ಹಾಗೂ ಪರವೂರಿನ ಅನೇಕ ಭಕ್ತರು ಉಪಸ್ಥಿತರಿದ್ದರು.

Related posts

ಮುಂಡಾಜೆ ಕಾಲೇಜು ಎನ್‌ಎಸ್‌ಎಸ್ ಶಿಬಿರ ಉದ್ಘಾಟನೆ

Suddi Udaya

ಬಳೆಂಜ: ಕಾಪಿನಡ್ಕದಲ್ಲಿ ಪ್ರವಾಸಿಗರ ಕಾರು ಧರೆಗೆ ಡಿಕ್ಕಿ; ಚಾಲಕ ಸೇರಿದಂತೆ ಪ್ರಯಾಣಿಕರಿಗೆ ಗಾಯ

Suddi Udaya

ನಾರಾವಿ-ಅಳದಂಗಡಿ ಮಹಾಶಕ್ತಿ ಕೇಂದ್ರದ ವತಿಯಿಂದ ಮಾಜಿ ಶಾಸಕರಾದ ವಸಂತ ಬಂಗೇರರ ನಿಧನಕ್ಕೆ ಶ್ರದ್ಧಾಂಜಲಿ

Suddi Udaya

ಕೊಕ್ರಾಡಿ ಅತ್ರಿಜಾಲ್ ನಿಂದ ಕುತ್ಲೂರು ಸಂಪರ್ಕಿಸುವ ರಸ್ತೆಯ ಸೇತುವೆ ಕುಸಿದು ರಸ್ತೆ ಸಂಪರ್ಕ ಕಡಿತ ಅಡಿಕೆ ಮರದ ತಾತ್ಕಾಲಿಕ ಸೇತುವೆ ನಿರ್ಮಾಸಿ ಸಂಚಾರಕ್ಕೆ ಅವಕಾಶ ಕಲ್ಪಿಸಿದ ಬಿಜೆಪಿ ಕಾರ್ಯಕರ್ತರು

Suddi Udaya

ಧರ್ಮಸ್ಥಳ ಭಜನಾ ಪರಿಷತ್ ಪದಾಧಿಕಾರಿಗಳ ವಾರ್ಷಿಕ ಸಭೆ

Suddi Udaya

ಪದ್ಮುಂಜ ಸ.ಪ್ರೌ. ಶಾಲೆಯಲ್ಲಿ ಸಮಾಜ ವಿಜ್ಞಾನ ವಿಷಯ ವೇದಿಕೆಯ ಸಮಾಲೋಚನಾ ಸಭೆ

Suddi Udaya
error: Content is protected !!