27.8 C
ಪುತ್ತೂರು, ಬೆಳ್ತಂಗಡಿ
October 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿ

ಬೆಳ್ತಂಗಡಿ ವಕೀಲರ ಸಂಘದ ವಾರ್ಷಿಕ ಮಹಾಸಭೆ

ಬೆಳ್ತಂಗಡಿ : ತಾಲೂಕು ವಕೀಲರ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್. ಲೋಬೊ ಅವರ ಅಧ್ಯಕ್ಷತೆಯಲ್ಲಿ ಅ. 15ರಂದು ವಕೀಲರ ಭವನದಲ್ಲಿ ನಡೆಯಿತು.

ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ. ಮಂಡಿಸಿದರು.ಮಹಾಸಭೆಯಲ್ಲಿ ಸಂಘದ ಚಟುವಟಿಕೆಗಳ ಬಗ್ಗೆ ಬಹಳ ವಿಸ್ತರವಾಗಿ ಚರ್ಚೆ ನಡೆಯಿತು. ನಂತರ ವರದಿಯನ್ನು ಮತ್ತು ಲೆಕ್ಕಪತ್ರವನ್ನು ಅಂಗೀಕಾರ ಮಾಡಲಾಯಿತು. ಮುಂದಿನ ಹೈ ಕೋರ್ಟ್ ಪೀಠದ ಹೋರಾಟದ ಕುರಿತು ಹಲವು ಕಾರ್ಯ ಯೋಜನೆಗಳನ್ನು ತಾಲೂಕು ಹೈ ಕೋರ್ಟ್ ಪೀಠ ಹೋರಾಟ ಸಮಿತಿಯ ಅಧ್ಯಕ್ಷರಾದ ಬಿ. ಕೆ. ಧನಂಜಯ್ ರಾವ್ ಅವರು ಮಾತನಾಡಿ ಮುಂದೆ ನಡೆಯಬೇಕಾದ ಕಾರ್ಯಸೂಚಿಗಳನ್ನು ನ್ಯಾಯವಾದಿಗಳಿಗೆ ವಿವರಿಸಿದರು.

ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್. ಲೋಬೊ ಅವರು ಮುಂದಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹಾಗೂ ಮುಂದೆ ನಡೆಯುವಂತಹ ಸಂಘದ ಹಾಗೂ ನ್ಯಾಯಾಲಯದ ನೂತನ ಸಂಕೀರ್ಣದ ಕಾಮಗಾರಿ ಹಾಗೂ ಅದಕ್ಕೆ ಅತ್ಯಗತ್ಯವಾಗಿ ಬೇಕಾದ ಹೆಚ್ಚುವರಿ ಅನುದಾನವನ್ನು ಮಂಜೂರುಗೊಳಿಸಲು ಸತತ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಬೆಳ್ತಂಗಡಿ ವಕೀಲರ ಸಂಘದಿಂದ ನಿಯೋಜಿತರಾದ ಹೈ ಕೋರ್ಟ್ ನ್ಯಾಯಮೂರ್ತಿ ಉಷಾರಾಣಿ ಅವರನ್ನು ಸನ್ಮಾನ ಮಾಡುವ ಬಗ್ಗೆ ವಿವರಣೆ ನೀಡಿದರು. ಹಾಗೂ ಸಂಘದ ಏಳಿಗೆಗಾಗಿ ಸಂಘದ ಎಲ್ಲಾ ವಕೀಲರ ಸಹಕಾರ ಕೋರಿದರು.ಮುಂದಿನ ಅವಧಿಯಲ್ಲಿ ವಕೀಲರ ಸಂಘದಲ್ಲಿ ಮಂಗಳೂರು ವಕೀಲರ ಸಂಘದ ಸಹಕಾರಿ ಸಂಘದ ಶಾಖೆಯನ್ನು ತೆರೆಯುವುದರ ಬಗ್ಗೆ ಹಾಗೂ ಅಂಚೆ ಕಚೇರಿಯನ್ನು ತೆರೆಯುವುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.ವೇದಿಕೆಯಲ್ಲಿ ಉಪಾಧ್ಯಕ್ಷ ಶ್ರೀನಿವಾಸ ಗೌಡ, ಹಿರಿಯ ಸಮಿತಿಯ ಅಧ್ಯಕ್ಷ ಶಿವಕುಮಾರ್ ಎಸ್ ಎಂ, ಜೊತೆ ಕಾರ್ಯದರ್ಶಿ ಹರ್ಷಿತ್ ಕುಮಾರ್ ಹೆಚ್, ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಹಾಜರಿದ್ದರು.ಅತ್ಯಧಿಕ ಸಂಖ್ಯೆಯಲ್ಲಿ ನ್ಯಾಯವಾದಿಗಳು ಭಾಗಿಯಾಗಿ ಸಲಹೆ ಸೂಚನೆಗಳನ್ನು ನೀಡಿದರು. ವಕೀಲರ ಶ್ರೇಯೋಭಿವೃದ್ಧಿ ಬಗ್ಗೆ ಚರ್ಚಿಸಲಾಯಿತು. ಸಂಘದ ಉಪಾಧ್ಯಕ್ಷ ಶ್ರೀನಿವಾಸ್ ಗೌಡ ಸ್ವಾಗತಿಸಿ, ನಿಕಟಪೂರ್ವ ಅಧ್ಯಕ್ಷ ವಸಂತ ಮರಕಡ ವಂದಿಸಿದರು.

Related posts

ದಯಾ ವಿಶೇಷ ಮಕ್ಕಳ ಮುಂದಿನ ಭವಿಷ್ಯ ನಿರ್ಮಾಣಕ್ಕಾಗಿ ಡಿ.29 ರಂದು ಹೋಲಿ ರೆಡಿಮರ್ ಚರ್ಚ್ ವಠಾರದಲ್ಲಿ ದಯಾ ಫಿಯೆಸ್ತಾ-2024

Suddi Udaya

ಮಂದಿರಗಳ ರಕ್ಷಣೆ ದೃಷ್ಟಿಯಿಂದ ಕರ್ನಾಟಕ ಮಂದಿರ ಮಹಾಸಂಘದ ವತಿಯಿಂದ ಬೆಳ್ತಂಗಡಿ ತಹಶೀಲ್ದಾರರಿಗೆ ಮನವಿ

Suddi Udaya

ಪಂಚ ರಾಜ್ಯಗಳ ವಿಧಾನ ಸಭೆ ಚುನಾವಣೆ: ಬಿಜೆಪಿಗೆ ದಿಗ್ವಿಜಯ-ಪಾಲೇದು ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

Suddi Udaya

ಭಾರತೀಯ ಸಾಂಸ್ಕೃತಿಕ ವಿಕಾಸಕ್ಕಾಗಿ ನರೇಂದ್ರ ಮೋದಿಜೀಯವರು ಮತ್ತೊಮ್ಮೆ ಪ್ರಧಾನಿಯಾಗಲು ಕ್ಯಾ| ಬ್ರಿಜೇಶ್ ಚೌಟ ಹಾಗೂ ಕೋಟ ಶ್ರೀನಿವಾಸ ಪೂಜಾರಿಯವರನ್ನು ಗೆಲ್ಲಿಸಿ ಸಂಸ್ಕಾರ ಭಾರತೀ ಬೆಳ್ತಂಗಡಿ ಘಟಕ ಮತ್ತು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ಹೇಳಿಕೆ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಣೆ

Suddi Udaya

ಪಣಕಜೆ : ಚರಂಡಿಗೆ ವಾಲಿದ ಕೆಎಸ್ಆರ್ ಟಿಸಿ ಬಸ್ಸು

Suddi Udaya
error: Content is protected !!