25.4 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ತವಿಲ್ (ಡೊಲ್ಕಿ) ವಾದನ ಕಾರ್ಯಕ್ರಮ: ಮೂರನೇ ಬಾರಿಗೆ ಅಮೆರಿಕಕ್ಕೆ ಹೊನ್ನಪ್ಪ ದೇವಾಡಿಗ

ಬೆಳ್ತಂಗಡಿ : ತವಿಲ್ (ಡೊಲ್ಕಿ) ವಾದನ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ, ಮಚ್ಚಿನ ಗ್ರಾಮದ ಖ್ಯಾತ ಕಲಾವಿದ ಹೊನ್ನಪ್ಪ ದೇವಾಡಿಗ ಅವರು ಮೂರನೇ ಬಾರಿಗೆ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಕಳೆದ 35 ವರ್ಷಗಳಿಂದ ದೇಶದಾದ್ಯಂತ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ತಮ್ಮ ವಿಶಿಷ್ಟ ವಾದನ ಶೈಲಿಯ ಮೂಲಕ ಜನಮೆಚ್ಚುಗೆ ಗಳಿಸಿರುವ ಅವರು, ಅಮೆರಿಕದಲ್ಲಿ ನಡೆಯಲಿರುವ ‘ಶ್ರೀಮದ್ಭಗವದ್ಗೀತಾ ಯಾಗ’ ಕಾರ್ಯಕ್ರಮದಲ್ಲಿ ತವಿಲ್ ವಾದನ ಸೇವೆ ಸಲ್ಲಿಸಲಿದ್ದಾರೆ.

ಅಮೆರಿಕದ ಟೆಂಪಿ, ಫೀನಿಕ್ಸ್‌ನಲ್ಲಿರುವ ಸುಜ್ಞಾನ ರಿಲೀಜಿಯಸ್ ಆ್ಯಂಡ್ ಚಾರಿಟೇಬಲ್ ಫೌಂಡೇಶನ್‌ನ ಶ್ರೀ ವೆಂಕಟಕೃಷ್ಣ ದೇವಾಲಯದಲ್ಲಿ ಅಕ್ಟೋಬರ್ 22ರಿಂದ 24ರವರೆಗೆ ನಡೆಯಲಿರುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ತವಿಲ್ ವಾದನವನ್ನು ನಡೆಸಿಕೊಡಲು ಹೊನ್ನಪ್ಪ ದೇವಾಡಿಗ ಅವರಿಗೆ ಆಹ್ವಾನ ನೀಡಲಾಗಿದೆ.
ತಮ್ಮ ಕಲಾಸೇವೆಯ ಮೂಲಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಹೊನ್ನಪ್ಪ ದೇವಾಡಿಗ ಅವರು ಮೂರನೇ ಬಾರಿಗೆ ಅಮೆರಿಕದಲ್ಲಿ ವಾದನ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

Related posts

ವಿ.ಹಿಂ.ಪ. ಬಜರಂಗದಳ‌ ಮಾತೃಶಕ್ತಿ ದುರ್ಗಾವಾಹಿನಿ ಬೆಳ್ತಂಗಡಿ ಪ್ರಖಂಡದ ಆಶ್ರಯದಲ್ಲಿ ನಡೆಯುವ ಅಖಂಡ ಭಾರತ ಸಂಕಲ್ಪ ದಿನದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ನಿರಂತರ ಮಳೆ: ಮದ್ದಡ್ಕ ಆಲಂದಿಲ ಮದರಸ ಬಳಿ ಚರಂಡಿ ಇಲ್ಲದೆ‌ ರಸ್ತೆಯಲ್ಲೇ ಹರಿದ ನೀರು

Suddi Udaya

ಮುಂಡೂರು ಶ್ರೀ ನಾಗಕಲ್ಲುರ್ಟಿ ದೈವಸ್ಥಾನ ಶ್ರೀ ಕ್ಷೇತ್ರ ಮಂಗಳ ಗಿರಿಯಲ್ಲಿ ಸಂಭ್ರಮದ ನಾಗರಪಂಚಮಿ

Suddi Udaya

ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಚಾಲನೆ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಭಾರಿಯಾಗಿ ಯತೀಶ್ ಆರ್‍ವಾರ ನೇಮಕ

Suddi Udaya

ಬಾಲಕ ಸುಮಂತ್ ಸಾವು ಪ್ರಕರಣ: ಬ್ರೈನ್ ಮ್ಯಾಪಿಂಗ್ ಪ್ರಕ್ರಿಯೆ ಆರಂಭ

Suddi Udaya
error: Content is protected !!