31.8 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಆಟಿದ ನೆಂಪು’ ಕಾರ್ಯಕ್ರಮ

ಬೆಳ್ತಂಗಡಿ: ತುಳುನಾಡಿನ ಸಮೃದ್ಧ ಸಂಸ್ಕೃತಿ ಮತ್ತು ಅನನ್ಯ ಆಹಾರ ಪದ್ಧತಿಯನ್ನು ಸಾರುವ ‘ಆಟಿದ ನೆಂಪು’ ಕಾರ್ಯಕ್ರಮವು ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಆ. 15 ರಂದು ಬೆಳ್ತಂಗಡಿಯ ಗುರುನಾರಾಯಣ ಸಭಾಭವನದಲ್ಲಿ ಅತ್ಯಂತ ಸಂಭ್ರಮದಿಂದ ಜರುಗಿತು.

ಘಟಕದ ಅಧ್ಯಕ್ಷೆ ಲೀಲಾವತಿ ಪಣಕಜೆ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಮಹಿಳಾ ಬಿಲ್ಲವ ವೇದಿಕೆಯ ಸ್ಥಾಪಕ ಅಧ್ಯಕ್ಷೆ ಸುಜಿತಾ ವಿ. ಬಂಗೇರ ಅವರು ಸಾಂಪ್ರದಾಯಿಕ ಲಾಟನ್ ದೀಪ (lamp)ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಟಿ ತಿಂಗಳಿನ ಸಂಪ್ರದಾಯಗಳು ಹಾಗೂ ಆಚರಣೆಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ವಿವರಿಸಿದರು. ಆಟಿದ ದಿನವನ್ನು ಬೆಳ್ತಂಗಡಿಯಲ್ಲಿ ಮೊಟ್ಟಮೊದಲು ಪ್ರಾರಂಭ ಮಾಡಿದವರು ಬಿಲ್ಲವ ಮಹಿಳಾ ವೇದಿಕೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬಿಲ್ಲವ ವೇದಿಕೆಯ ಅಧ್ಯಕ್ಷ ಹಾಗೂ ಯುವವಾಹಿನಿ ಬೆಳ್ತಂಗಡಿ ಘಟಕದ ಮಾಜಿ ಅಧ್ಯಕ್ಷ ಎಂ.ಕೆ. ಪ್ರಸಾದ್ ಅವರು, ಆಟಿ ತಿಂಗಳಿನಲ್ಲಿ ಸೇವಿಸುವ ಸಾಂಪ್ರದಾಯಿಕ ಆರೋಗ್ಯಕರ ತಿನಿಸುಗಳು, ಅವುಗಳ ಹಿಂದಿರುವ ವೈಜ್ಞಾನಿಕ ಹಿನ್ನೆಲೆ ಹಾಗೂ ಆಚಾರ-ವಿಚಾರಗಳ ಕುರಿತು ಸವಿಸ್ತಾರವಾಗಿ ಹೇಳಿದರು. ತುಳುನಾಡಿನ ಕೃಷಿ ಪದ್ಧತಿ ಬಗ್ಗೆ ವಿಸ್ತಾರವಾಗಿ ಹೇಳುತ್ತಾ ತುಳು ಭಾಷೆಗೆ ವಿಶೇಷ ಸ್ಥಾನಮಾನ ನೀಡುವಲ್ಲಿ ಪ್ರಯತ್ನ ಪಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೆಸ್ಟ್ ಫೌಂಡೇಶನ್ ಬೆಳ್ತಂಗಡಿಯ ಅಧ್ಯಕ್ಷ ರಕ್ಷಿತ್ ಶಿವರಾಂ ಅವರು ಮಾತನಾಡಿ, ಆಟಿ ತಿಂಗಳಿನ ವಿಶೇಷತೆಗಳು ಹಾಗೂ ವಿವಿಧ ಸಮುದಾಯಗಳಲ್ಲಿ ಈ ಮಾಸದ ಆಹಾರ ಪದ್ಧತಿಯ ಆಚರಣೆಯ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಇದೇ ವೇಳೆ, ಮುಂಡಾಜೆ ಸಂಚಾಲನ ಸಮಿತಿಯ ಅತಿಥ್ಯದಲ್ಲಿ ಆ. 30 ರಂದು ನಡೆಯಲಿರುವ ಬಿರ್ವೇರೆ ಗೊಬ್ಬು ಕೆಸರುದ ಕಂಡಡ್’ ಕಾರ್ಯಕ್ರಮದ ಕರಪತ್ರವನ್ನು ವೇದಿಕೆಯಲ್ಲಿದ್ದ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಲೀಲಾವತಿ ಪಣಕಜೆ ಅವರು ಆಟಿದ ನೆಂಪು ಕಾರ್ಯಕ್ರಮ ಸಮಾಜದ ಬಾಂಧವರನ್ನು. ಒಗ್ಗೂಡಿಸುವಲ್ಲಿ ಪರಸ್ಪರ ಬಾಂಧವ್ಯವನ್ನು ಹೆಚ್ಚಿಸುವಲ್ಲಿ ಮತ್ತು ತುಳು ಭಾಷೆಯನ್ನು ಉಳಿಸುವಲ್ಲಿ ಯುವ ಪೀಳಿಗೆಗೆ ತುಳು ಸಂಪ್ರದಾಯ ಆಚಾರ ವಿಚಾರ. ವನ್ನು ತಿಳಿಸುತ್ತಾ ನಿಟ್ಟಿನಲ್ಲಿ ಆಯೋಜಿಸಿದ ಕಾರ್ಯಕ್ರಮ ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.

ಕಾರ್ಯಕ್ರಮ ಕುಮಾರಿ ಕೃತಿ ಪ್ರಾರ್ಥಿಸಿ, ಮಹಿಳಾ ಸಂಚಾಲನ ಸಮಿತಿಯ ಸಂಚಾಲಕಿ ಪ್ರಮೀಳಾ ಮಾಲೂರು ಸ್ವಾಗತಿಸಿದರು. ಸೇವಂತಿ ನಿರಂಜನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಘಟಕದ ಸಂಘಟನಾ ಕಾರ್ಯದರ್ಶಿ ಕೇಶವ ಮುಂಡಾಜೆ ನಡೆಸಿಕೊಟ್ಟ ಆಕರ್ಷಕ ಸ್ಪರ್ಧೆಗಳು ಹಾಗೂ ಪ್ರಚಾರ ನಿರ್ದೇಶಕ ಜಿತೇಶ್ ಬೆಳ್ತಂಗಡಿ ಅವರ ನೇತೃತ್ವದ ನೃತ್ಯ ಪ್ರದರ್ಶನ ಸಭಿಕರನ್ನು ಮನರಂಜಿಸಿತು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಘಟಕದ ಪದಾಧಿಕಾರಿಗಳು ಆಟಿ ತಿಂಗಳಿನ ಸುಮಾರು 42 ಬಗೆಯ ವಿವಿಧ ಸಾಂಪ್ರದಾಯಿಕ ತಿಂಡಿ-ತಿನಿಸುಗಳನ್ನು ಸಿದ್ಧಪಡಿಸಿ ತಂದಿದ್ದು, ನೆರೆದಿದ್ದ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ವೇದಿಕೆಯಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕದ ಕಾರ್ಯದರ್ಶಿ ಅಶ್ವಿನ್ ಕುಮಾರ್ ಬಿ.ಕೆ. ಬಳಂಜ, ಸಾಂಸ್ಕೃತಿಕ ನಿರ್ದೇಶಕ ಮೋಹನ್ ಕಾನರ್ಪ ಮಹಿಳಾ ಸಂಚಾಲನ ಸಮಿತಿ ಸಂಚಾಲಕಿ ಪ್ರಮೀಳಾ ಮಾಲೂರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ನಿರೂಪಕರಾದ ಸುಧಾಮಣಿ ರಮಾನಂದ ಸಾಲಿಯಾನ್ ಮತ್ತು ಜಿತಿಕ್ಷ ಮುಂಡಾಜೆ ಕಾರ್ಯಕ್ರಮವನ್ನು ನಿರ್ವಹಿಸಿದರು. ಮಹಿಳಾ ಸಂಚಾಲನ ಸಮಿತಿಯ ಕಾರ್ಯದರ್ಶಿ ಶಾಂಭವಿ ಮುoಡೂರು ವಂದನಾರ್ಪಣೆ ಸಲ್ಲಿಸಿದರು.

Related posts

ತಾಲೂಕು ಮಟ್ಟದ ಕ್ರೀಡಾಕೂಟ: ಮಚ್ಚಿನ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

Suddi Udaya

ಕಕ್ಯಪದವು ಎಲ್.ಸಿ.ಆರ್ ವಿದ್ಯಾಸಂಸ್ಥೆಯಲ್ಲಿ ಪದವಿ ವಿಭಾಗದ ವಿದ್ಯಾರ್ಥಿ‌‌ಸಂಘದ ಉದ್ಘಾಟನೆ ಹಾಗೂ ಸ್ವಾಗತ ಕಾರ್ಯಕ್ರಮ

Suddi Udaya

ಎಸ್ ವಿ ಟಿ ಟೀಮ್ ಪಟ್ರಮೆ ವತಿಯಿಂದ ದೀಪಾವಳಿ ಪ್ರಯುಕ್ತ ವಾಲಿಬಾಲ್ ಪಂದ್ಯಾಟ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಚುನಾವಣೆ ಶೇ. 61 ಮತದಾನ

Suddi Udaya

ಪಿಯುಸಿ ಫಲಿತಾಂಶ: ಸಂಸ್ಕೃತದಲ್ಲಿ ಎಕ್ಸೆಲ್ ಕಾಲೇಜಿನ 114 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಗಳಿಕೆ

Suddi Udaya

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಮಾತೃಶ್ರೀ ಶ್ರೀಮತಿ ಅಮಣಿ ಶೆಟ್ಟಿ ನಿಧನ

Suddi Udaya
error: Content is protected !!