25.4 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎನ್‌ಡಿಎ ಫಲಿತಾಂಶ ಪ್ರಕಟ: ಕ್ರಿಯೇಟಿವ್ ಕಾಲೇಜಿನ 9 ಮಂದಿ ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ತೇರ್ಗಡೆ

ಕಾರ್ಕಳ: ರಾಷ್ಟ್ರೀಯ ರಕ್ಷಣಾ ಪಡೆ ಮತ್ತು ನೇವಲ್ ಅಕಾಡೆಮಿಗೆ ಸೇರಬಯಸುವವರಿಗೆ ಕೇಂದ್ರ ಲೋಕಸೇವಾ ಆಯೋಗದವರು ನಡೆಸುವ 2026ರ ಎನ್ ಡಿ ಎ-2 ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಕ್ರಿಯೇಟಿವ್ ಕಾಲೇಜಿನ ನಂದನ್ ಆರ್, ರಾಹುಲ್ ಜಿ.ಎನ್, ರಿಷಿ ಎಸ್ ಶೆಟ್ಟಿ, ಸುಮಿತ್ ಎಸ್ ಪ್ರಭು, ಚಿಂತನ್ ಎಮ್ ಹೆಗ್ಡೆ , ಪ್ರಣಮ್ ಹೆಚ್ .ಡಿ., ಮಿಹಿರ್ ಹೆಗ್ಡೆ , ಯು.ಶ್ರೀಶ ಮೈಪಾಡಿ, ಯಶಸ್ ಆರ್. ತೇರ್ಗಡೆಗೊಂಡು ಮುಂದಿನ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಆಯ್ಕೆಗೊಂಡಿದ್ದಾರೆ.

ರಾಷ್ಟ್ರ ವ್ಯಾಪಿ ನಡೆದ ಈ ಪರೀಕ್ಷೆಯಲ್ಲಿ ಒಟ್ಟಾರೆ 7406 ಮಂದಿ ವಿದ್ಯಾರ್ಥಿಗಳು ತೇರ್ಗಡೆಯನ್ನು ಹೊಂದಿದ್ದು ಅದರಲ್ಲಿ 9 ಮಂದಿ ವಿದ್ಯಾರ್ಥಿಗಳು ಕ್ರಿಯೇಟಿವ್ ಸಂಸ್ಥೆಯಿಂದ ಆಯ್ಕೆಗೊಂಡಿರುವುದು ಅತೀವ ಸಂತೋಷವನ್ನುಂಟು ಮಾಡಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಪ್ರಾಂಶುಪಾಲರು, ಆಡಳಿತ ಮಂಡಳಿ, ಉಪನ್ಯಾಸಕ ವರ್ಗದವರು, ಬೋಧಕೇತರ ಸಿಬ್ಬಂದಿಗಳು ಹಾಗೂ ಪರೀಕ್ಷಾ ಸಂಯೋಜಕರಾದ ಸುಮಂತ್ ದಾಮ್ಲೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Related posts

ಉಜಿರೆ:ಧೀಮತಿ ಜೈನ ಮಹಿಳಾ ಸಮಾಜದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ

Suddi Udaya

ಡಾ. ವಿಕ್ರಮ್ ತಿಮರಡ್ಕ ರವರಿಗೆ ಜಪಾನ್‌ನ ಕ್ಯೋಟೋ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ. ಪದವಿ

Suddi Udaya

ಧರ್ಮಸ್ಥಳ ಪೋಸೋಲಿಕೆ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ವಿಧಾನಸಭಾ ಚುನಾವಣೆಗೆ ಪಕ್ಷೇತರರಾಗಿ ಮಹೇಶ್ ನಾಮಪತ್ರ

Suddi Udaya

ಮುಗೇರಡ್ಕ ಚಂದ್ರಹಾಸ ಪೂಜಾರಿ ರವರ ಚಿಕಿತ್ಸಾ ನೆರವಿಗೆ ಮನವಿ

Suddi Udaya

ಮಾಲಾಡಿಯಲ್ಲಿ ಮಲ್ಲಿಗೆ ಕೃಷಿ, ತರಕಾರಿ ಕೃಷಿ, ಸಾವಯವ ಕೃಷಿ ತರಬೇತಿ ಕಾರ್ಯಕ್ರಮ

Suddi Udaya
error: Content is protected !!