25.4 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸೋಜಾ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್‌ನಲ್ಲಿ ಸ್ನ್ಯಾಪ್‌ಡ್ರಾ ಸಾಫ್ಟ್‌ವೇರ್ ಉದ್ಘಾಟನೆ

ಬೆಳ್ತಂಗಡಿ : ಸೋಜಾ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್‌ನಲ್ಲಿ ವಿಶ್ವಾಸ್ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ ಸ್ನ್ಯಾಪ್‌ಡ್ರಾ (SnapDraw) ಯೋಜನಾ ನಿರ್ವಹಣಾ ಸಾಫ್ಟ್‌ವೇರ್ ಉದ್ಘಾಟಿಸಲಾಯಿತು. ಯೋಜನೆಯ ಸದಸ್ಯರಿಗೆ ಪ್ರತ್ಯೇಕ ಸ್ವಯಂ ನಿರ್ವಹಣಾ ಪೋರ್ಟಲ್ ಒದಗಿಸುವ ಈ ಸಾಫ್ಟ್‌ವೇರ್ ಅಳವಡಿಸಿಕೊಂಡ ಬೆಳ್ತಂಗಡಿ ತಾಲೂಕಿನ ಮೊದಲ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಶೋರೂಂ ಎಂಬ ಹೆಗ್ಗಳಿಕೆಗೆ ಸಂಸ್ಥೆ ಪಾತ್ರವಾಗಿದೆ.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆಲ್ಫೋನ್ಸ್ ಫ್ರಾಂಕೋ ಅವರ ಮುಂದಾಳತ್ವದಲ್ಲಿ ಈ ಸಾಫ್ಟ್‌ವೇರ್ ಅಳವಡಿಸಲಾಗಿದೆ. ಸದಸ್ಯರು ತಮ್ಮ ಯೋಜನೆಯ ವಿವರಗಳನ್ನು ನಿರ್ವಹಿಸಲು, ಕಂತುಗಳನ್ನು ಪರಿಶೀಲಿಸಲು, ಆನ್‌ಲೈನ್ ಮೂಲಕ ಹಣ ಪಾವತಿಸಲು, ವಿಜೇತರ ಇತಿಹಾಸ ವೀಕ್ಷಿಸಲು ಹಾಗೂ ಅಧಿಸೂಚನೆಗಳನ್ನು ಪಡೆಯಲು ಈ ಪೋರ್ಟಲ್ ಸಹಕಾರಿಯಾಗಿದೆ.

ಕಾರ್ಯಕ್ರಮವನ್ನು ರಿಪಬ್ಲಿಕ್ ಕನ್ನಡ ಸುದ್ದಿ ವಾಹಿನಿಯ ವ್ಯವಸ್ಥಾಪಕ ವೆಂಕಟೇಶ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿಜಯವಾಣಿ ಪತ್ರಿಕೆಯ ಹಿರಿಯ ವರದಿಗಾರ ಮನೋಹರ್ ಬಳೆಂಜ ಹಾಗೂ ಸೋಜಾ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್‌ನ ಮ್ಯಾನೇಜರ್ ಲ್ಯಾನ್ಸಿ ಡಿ ಸೋಜಾ, ಪಿ.ಆರ್.ಓ ಅಬ್ದುಲ್ ಖಾದರ್, ಅಮೀನ ಬಿ ಶಭಾನಾ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

31 ವರ್ಷಗಳ ಗ್ರಾಹಕ ಸೇವೆಯ ಅನುಭವ ಹೊಂದಿರುವ ಸೋಜಾ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್, ಗ್ರಾಹಕರ ಅನುಭವವನ್ನು ಸುಧಾರಿಸಲು ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದೆ.

ವಿಶ್ವಾಸ್ ಸಾಫ್ಟ್‌ವೇರ್‌ನ ಡೆವಲಪರ್ ರಂಜಿತ್ ಅವರ ನೇತೃತ್ವದಲ್ಲಿ ಅಭಿವೃದ್ಧಿಪಡಿಸಲಾದ ಸ್ನ್ಯಾಪ್‌ಡ್ರಾ, ಸ್ಥಳೀಯ ಉದ್ಯಮಗಳಿಗೆ ತಂತ್ರಜ್ಞಾನದ ಮೂಲಕ ಸುಲಭ ಮತ್ತು ಪರಿಣಾಮಕಾರಿ ಪರಿಹಾರಗಳನ್ನು ಒದಗಿಸುವ ಪ್ರಯತ್ನವಾಗಿದೆ.

ಈ ಹೊಸ ಪ್ರಯತ್ನಕ್ಕೆ ವಿಶ್ವಾಸ್ ಸಾಫ್ಟ್‌ವೇರ್ ಮೇಲೆ ವಿಶ್ವಾಸವಿಟ್ಟು ಬೆಂಬಲ ನೀಡಿದ ಆಲ್ಫೋನ್ಸ್ ಫ್ರಾಂಕೋ ಅವರಿಗೆ ಸಂಸ್ಥೆಯ ಕೃತಜ್ಞತೆ ಸಲ್ಲಿಸಿದರು.

Related posts

ಡಾ. ಎನ್. ವಿನಯ ಹೆಗ್ಡೆ ನಿಧನಕ್ಕೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya

ವಾಣಿ ಪ.ಪೂ. ಕಾಲೇಜಿನ ಎನ್‌.ಎಸ್.ಎಸ್‌. ಘಟಕದಿಂದ ಕೋಟಿ ವೃಕ್ಷ ಅಭಿಯಾನ

Suddi Udaya

ಕೊಕ್ಕಡ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಮಾಣೂರು ಸಪರಿವಾರ ಶ್ರೀ ಶಾಸ್ತರ ದೇವಸ್ಥಾನ ನೂತನ ದೇವಾಲಯದ ಶಿಲಾನ್ಯಾಸ

Suddi Udaya

ಕಲ್ಮಂಜ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ವಿವಿದೋದ್ದೇಶ ಸಹಕಾರಿ ಸಂಘಕ್ಕೆ ತೆಲಂಗಾಣ ಸರಕಾರದ ಸಚಿವ ಪೊನ್ನಂ ಪ್ರಭಾಕರ್ ಭೇಟಿ

Suddi Udaya
error: Content is protected !!