24 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಶ್ರೀ ಗುರುದೇವ ಪ. ಪೂ.ಕಾಲೇಜಿನ ಎನ್.ಎಸ್.ಎಸ್.ಶಿಬಿರದ ಸಮಾರೋಪ

ಬೆಳ್ತಂಗಡಿ :’ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ವಿದ್ಯಾರ್ಥಿಗಳನ್ನು ಹೊಸ ಚಿಂತನೆಯ ಕಡೆಗೆ ಕೊಂಡೊಯ್ಯಲು ಸಹಕಾರಿಯಾಗಿದೆ. ಶಿಬಿರಗಳ ಮೂಲಕ ಜೀವನ ಮೌಲ್ಯದ ಶಿಕ್ಷಣ ದೊರೆಯುತ್ತಿದ್ದು, ಉತ್ತಮ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗಿದೆ ಎಂದು ಪ್ರಗತಿಪರ ಕೃಷಿಕ ಸಂತೋಷ್ ಸಾಲಿಯಾನ್ ಕಾಪಿನಡ್ಕ ಹೇಳಿದರು.

ಅವರು ಬಳಂಜ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ವಿದ್ಯಾರ್ಥಿಗಳು ಕ್ಷಣಿಕ ಸುಖದ ಕಡೆಗೆ ಆಸಕ್ತಿ ಬೆಳೆಸಿದೆ ಬದುಕನ್ನು ಬೆಳಗಿಸುವ ಕಡೆಗೆ ಸದಾ ಪ್ರಯತ್ನಶೀಲರಾಗಬೇಕು. ಎನ್.ಎಸ್.ಎಸ್.ಶಿಬಿರದ ಮೂಲಕ ಸಿಗುವ ಮೌಲ್ಯಯುತ ವಿಚಾರಗಳನ್ನು ಬದುಕಿನ ಉದ್ದಕ್ಕೂ ಅಳವಡಿಸಿಕೊಳ್ಳಬೇಕು’ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ ವಹಿಸಿದ್ದರು.

ವೇದಿಕೆಯಲ್ಲಿ ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ, ಉದ್ಯಮಿ ಶೇಖರ್ ದೇವಾಡಿಗ ಪಾಲಬೆ, ಬಳಂಜ ಶಾಲಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ್ ಬಳಂಜ, ಕಾರ್ಯದರ್ಶಿ ರತ್ನರಾಜ ಜೈನ್, ವಕೀಲ ಸತೀಶ್ ರೈ ಬಾರ್ದಡ್ಕ, ಬಿ ಯುವರಾಜ, ಉಪನ್ಯಾಸಕ ದಿನೇಶ್ ಬಿ.ಕೆ., ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಲೋಚನ, ಘಟಕದ ನಾಯಕಿ ಸಾನಿಕಾ ಇದ್ದರು.

ಸಮಾರಂಭದಲ್ಲಿ ಶಿಬಿರಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು.

ಗ್ರಾಮಸ್ಥರಾದ ರಮಾನಾಥ ಶೆಟ್ಟಿ ಪಂಬಾಜೆ, ಘಟಕದ ನಾಯಕ ಪ್ರಶಾಂತ್, ಶಿಬಿರಾರ್ಥಿ ರಕ್ಷಿತಾ ಅನಿಸಿಕೆ ವ್ಯಕ್ತಪಡಿಸಿದರು.

ಸಹ ಶಿಬಿರಾಧಿಕಾರಿಗಳಾದ ಅನನ್ಯ ಸ್ವಾಗತಿಸಿ, ಚಂದನ ಶಿಬಿರದ ಸಾಧಕರ ಪಟ್ಟಿಯನ್ನು ವಾಚಿಸಿದರು. ಸಹ ಶಿಬಿರಾಧಿಕಾರಿ ಸೌಜನ್ಯ ಮತ್ತು ಶಿಬಿರಾರ್ಥಿ ದೀಪಿಕಾ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾಧಿಕಾರಿ ಗಣೇಶ್ ಬಿ ಶಿರ್ಲಾಲು ವಂದಿಸಿದರು. ಕಾಲೇಜಿನ ಉಪನ್ಯಾಸಕರುಗಳಾದ ಹರೀಶ್ ಪೂಜಾರಿ, ರಾಕೇಶ್ ಕುಮಾರ್ ಮತ್ತು ಸಿಬ್ಬಂದಿ ಜನಾರ್ದನ ಸಹಕರಿಸಿದರು.

Related posts

ಶ್ರೀ ಕ್ಷೇ.ಧ.ಗ್ರಾ.ಯೋಜನೆಯಿಂದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಯವರ ಹುಟ್ಟು ಹಬ್ಬದ ಪ್ರಯುಕ್ತ ವಾಲ್ಮೀಕಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಹಣ್ಣು ಹಂಪಲು ವಿತರಣೆ

Suddi Udaya

ನಾಳ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಸಭೆ

Suddi Udaya

ವೇಣೂರು: ಆಳ್ವಾಸ್ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುಕನ್ಯಾರವರು ಸಲ್ಲಿಸಿದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ

Suddi Udaya

ಪ್ರಸನ್ನ ಫಾರ್ಮಸಿ ಕಾಲೇಜಿನಲ್ಲಿ ಅಂಗದಾನ ಜಾಗೃತಿ ಕಾರ್ಯಕ್ರಮ ‘ಧಾತ್ರು’ ಆಯೋಜನೆ

Suddi Udaya

ಮಿತ್ತಬಾಗಿಲು ಕೋಳಿ ಅಂಕದ ಮೇಲೆ ಬೆಳ್ತಂಗಡಿ ಪೊಲೀಸ್ ದಾಳಿ

Suddi Udaya

ಎಸ್.ಡಿ.ಎಂ ಸೈನಾಥಾನ್ 2026 – ‘ಎ ರನ್ ಟು ಹಾನರ್ ಅವರ್ ಹೀರೋಸ್’;

Suddi Udaya
error: Content is protected !!