September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರತಿಭಟನೆವರದಿ

ವಕ್ಫ್ ಕಾಯ್ದೆಗೆ ಅಸಂವಿಧಾನಿಕ ತಿದ್ದುಪಡಿ: ಕಕ್ಕಿಂಜೆಯಲ್ಲಿ ಮೂರು ಪಂಚಾಯತ್ ವ್ಯಾಪ್ತಿಯ ಮಸ್ಜಿದ್ ಗಳ ಜಂಟಿ ಪ್ರತಿಭಟನೆ

ಬೆಳ್ತಂಗಡಿ: ಕೇಂದ್ರ ಸರಕಾರ ಉದ್ಧೇಶಿರುವ ವಕ್ಫ್ ಕಾಯ್ದೆಗೆ ತಿದ್ದುಪಡಿ ಪ್ರಕ್ರಿಯೆಯನ್ನು ವಿರೋಧಿಸಿ ಮುಂಡಾಜೆ, ಚಾರ್ಮಾಡಿ, ನೆರಿಯ ಈ‌ ಮೂರು ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಮಸ್ಜಿದ್‌ ಮತ್ತು ಮೊಹಲ್ಲಾಗಳ ಒಗ್ಗೂಡುವಿಕೆಯೊಂದಿಗೆ ಪ್ರತಿಭಟನಾ ಸಭೆಯು ಕಕ್ಕಿಂಜೆ ಪೇಟೆಯಲ್ಲಿ ಜರುಗಿತು.


ಇಲ್ಲಿನ‌ ಹಾರಿಸ್ ಹೊಟೇಲ್ ಬಳಿ‌ ಜಮಾಯಿಸಿದ ಹೋರಾಟಗಾರರು‌ ಸಾರ್ವಜನಿಕ ಸಭೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅಸಂವಿಧಾನಿಕ ವಕ್ಫ್ ತಿದ್ದುಪಡಿ‌ ಮಸೂದೆ ವಿರುದ್ಧ ವಾಟ್ಸ್ ಆಪ್ ಮೂಲಕ ರಚಿತವಾದ ಬಳಗದ ಸಂಯೋಜನೆಯಲ್ಲಿ ಈ ಹೋರಾಟ ಸಂಘಟಿಸಲಾಗಿತ್ತು.


ಇಸ್ಲಾಂ ನಲ್ಲಿ ವಕ್ಫ್ ಎಂದರೆ ಏನು? ವಕ್ಫ್ ಕಾಯ್ದೆಯ ತಿದ್ದುಪಡಿ ಹೇಗೇಗೆ ಆಯ್ತು, ಜಂಟಿ ಸದನ‌ ಸಮಿತಿ ನಡೆದುಕೊಂಡ ರೀತಿಯ ಬಗ್ಗೆ ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ವಿಷಯ ಮಂಡಿಸಿದರು. ಕಾಯ್ದೆಯ ತಿದ್ದುಪಡಿಯ ಲೋಪಗಳೇನೇನು? ಕಾಯ್ದೆ ಬದಲಾವಣೆಯಲ್ಲಿ ಒಳಗೊಂಡಿರುವ ಅಸಂವಿಧಾನಿಕ ಅಂಶಗಳು ಏನೇನು? ಹಾಗೂ ಬದಲಾಗಲಿರುವ ಕಾಯ್ದೆಯಿಂದ ಆಗುವ ತೊಂದರೆಗಳು ಏನು ಎಂಬ ಬಗ್ಗೆ ಯುವ ನ್ಯಾಯವಾದಿ ನವಾಝ್ ಶರೀಫ್ ಅರೆಕ್ಕಲ್ ಮಾತನಾಡಿದರು.


ಸಾಮಾಜಿಕ ಕಾರ್ಯಕರ್ತ ಅಶ್ರಫ್ ಚಾರ್ಮಾಡಿ ಸ್ವಾಗತಿಸಿ ಪ್ರಸ್ತಾವನೆಗೈದರು. ಆರು ಜಮಾಅತ್ ಗಳ ಪದಾಧಿಕಾರಿಗಳು, ಧರ್ಮಗುರುಗಳು, ಜಮಾಅತ್ ಬಾಂಧವರು, ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.
ಬಳಿಕ ಕಕ್ಕಿಂಜೆ ಪೇಟೆಯ ಮೂಲಕ ಗ್ರಾ.ಪಂ ಕಚೇರಿ ವರೆಗೆ ಜಾಥಾ ನಡೆಸಲಾಯಿತು. ಅಲ್ಲಿ ರಾಷ್ಟ್ರಪತಿಗಳಿಗೆ ಗ್ರಾ.ಪಂ ಪಿಡಿಒ‌ ಮೂಲಕ ಮನವಿ ಸಲ್ಲಿಸಲಾಯಿತು. ಅಬ್ದುಲ್ ನಾಸಿರ್ ಕಲ್ಲಗುಡ್ಡೆ ವಂದಿಸಿದರು.
ಕಬೀರ್ ಅರೆಕ್ಕಲ್ ನಿರೂಪಿಸಿದರು. ನಝೀರ್ , ಶರೀಫ್ ಹೆಚ್ ಎ, ಹನೀಫ್ ಕೋಣೆ ಮೊದಲಾದವರು ನಾಯಕತ್ವ ವಹಿಸಿದ್ದರು.

Related posts

ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಬಗ್ಗೆ ಆರೋಪ, ಅಪಪ್ರಚಾರ ಮಾಡಿದ ಹಿನ್ನೆಲೆ: ಸುದ್ದಿ ಬಿಡುಗಡೆ ಪತ್ರಿಕೆಯ ಇಬ್ಬರ ಸದಸ್ಯತನ ಅಮಾನತು

Suddi Udaya

ಧರ್ಮಸ್ಥಳ ಎಸ್‌ಡಿಎಂ ಆಂ.ಮಾ. ಶಾಲೆಗೆ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಭೇಟಿ

Suddi Udaya

ಮರುಮೌಲ್ಯ ಮಾಪನದಲ್ಲಿ ಶ್ರೀ ಧ.ಮಂ.ಪ.ಪೂ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಕು. ಅನನ್ಯ ರಾಜ್ಯಕ್ಕೆ 9ನೇ ರ‍್ಯಾಂಕ್

Suddi Udaya

ಬೆಳ್ತಂಗಡಿ: ಮಿಷ್ ಮಷ್ ಫ್ಯಾನ್ಸಿಯಲ್ಲಿ ಲಕ್ಕಿ ಡ್ರಾ: ರೂ.499 ರ ಹೆಚ್ಚಿನ ಖರೀದಿಗೆ ಲಕ್ಕಿ ಕೂಪನ್

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಿಂತನಾ ದಿನಾಚರಣೆ

Suddi Udaya

ಬೆಳ್ತಂಗಡಿ: ಡಾ| ಬಿ.ಆರ್ ಅಂಬೇಡ್ಕರ್ ರವರ 135ನೇ ಜನ್ಮ ದಿನಾಚರಣೆ ಮತ್ತು ವಿಶ್ವ ಕಾರ್ಮಿಕ ದಿನಾಚರಣೆ

Suddi Udaya
error: Content is protected !!