24.9 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಹ್ಯಾಂಡ್‌ಬಾಲ್‌ ಪಂದ್ಯಾಟ: ಶ್ರೀ ಧ. ಮಂ.ಅ. ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದ ಮಿನಿ ಒಲಿಂಪಿಕ್ ಕ್ರೀಡಾಕೂಟಕ್ಕೆ ಆಯ್ಕೆ

ಉಜಿರೆ: ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆ, ಉಜಿರೆಯ ವಿದ್ಯಾರ್ಥಿಗಳು ಹ್ಯಾಂಡ್‌ಬಾಲ್‌ನಲ್ಲಿ ವಿಶೇಷ ಸಾಧನೆಗೈದು ರಾಜ್ಯಮಟ್ಟದ ಮಿನಿ ಒಲಿಂಪಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಉಜಿರೆಯ ಶ್ರೀ ರತ್ನವರ್ಮ ಕ್ರೀಡಾಂಗಣದಲ್ಲಿ ನಡೆದ ಹ್ಯಾಂಡ್‌ಬಾಲ್ ಆಯ್ಕೆ ಪಂದ್ಯಾಟದಲ್ಲಿ 14ರ ವಯೋಮಾನದ ವಿಭಾಗದಲ್ಲಿ ಶಾಲೆಯ ನಂದನ್, ಮನ್ವಿತ್, ಸಮೃದ್ಧ, ಸಂಪ್ರೀತ್, ಪೂರ್ವಿಕ್ ಹಾಗೂ ಹರ್ಷಿತ್ ಎಂಬ ಆರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಬೆಂಗಳೂರಿನಲ್ಲಿ ನವೆಂಬರ್ 14ರಿಂದ 21ರವರೆಗೆ ನಡೆಯಲಿರುವ V State Mini Games ಕ್ರೀಡಾಕೂಟದಲ್ಲಿ ಈ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕ ಹೇಮೋದರ್ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುತ್ತಾರೆ.

Related posts

ನಿಡ್ಲೆ: ಸತ್ಯಭಾಮೆಯಮ್ಮ ನಿಧನ

Suddi Udaya

ಕಿರು ನಾಟಕ ಸ್ಪರ್ಧೆ: ಬೆಳ್ತಂಗಡಿ ಸ.ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ

Suddi Udaya

ಉಜಿರೆ ಶ್ರೀ ಧ.ಮಂ.ಪ.ಪೂ. ಕಾಲೇಜಿನ ಎನ್.ಎಸ್.ಎಸ್ ವತಿಯಿಂದ ವಿಶ್ವ ಕೈ ತೊಳೆಯುವ ದಿನಾಚರಣೆ

Suddi Udaya

ತ್ರೋಬಾಲ್ ಪಂದ್ಯಾಟ: ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲಾ ವಿದ್ಯಾರ್ಥಿಗಳ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಹತ್ಯಡ್ಕ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ: ಕಾರ್ಯಾಲಯ ಉದ್ಘಾಟನೆ

Suddi Udaya

ಕಕ್ಕಿಂಜೆ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದ ವ್ಯಕ್ತಿ ಪೊಲೀಸರ ವಶ

Suddi Udaya
error: Content is protected !!