28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿವರದಿ

ಗಾಂಧಿ ಗ್ರಾಮ ಪ್ರಶಸ್ತಿ ಪುರಸ್ಕೃತ ಬಳಂಜ ಗ್ರಾಮ ಪಂಚಾಯತ್ ಗೆ ಪ್ರತಿಷ್ಠಿತ ಶಿವರಾಮ ಕಾರಂತ ಪ್ರಶಸ್ತಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರವರಿಂದ ಪ್ರಶಸ್ತಿ ಪ್ರದಾನ

ಬೆಳ್ತಂಗಡಿ:ಪ್ರತಿಷ್ಠಿತ ಗಾಂಧಿ ಗ್ರಾಮ ಪ್ರಶಸ್ತಿ ಪುರಸ್ಕೃತ ಬಳಂಜ ಗ್ರಾಮ ಪಂಚಾಯತ್ ಗೆ ಮತ್ತೊಂದು ಉನ್ನತವಾದ ಶಿವರಾಮ ಕಾರಂತ ಪ್ರಶಸ್ತಿ ಲಭಿಸಿದೆ.

ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ,ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ ಇದರ ಸಹಯೋಗದಲ್ಲಿ ಇಂಪನ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರು ಬಳಂಜ ಗ್ರಾಮ ಪಂಚಾಯತ್ ಗೆ ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲೆಯ ಶಾಸಕರುಗಳು, ಜನಪ್ರತಿನಿಧಿಗಳು, ಬಳಂಜ ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಶೋಭಾ ಕುಲಾಲ್, ಪಂ.ಅ.ಅಧಿಕಾರಿ ಶ್ರೀನಿವಾಸ್, ಉಪಾಧ್ಯಕ್ಷ ಯಶೋಧರ ಶೆಟ್ಟಿ, ಸದಸ್ಯರಾದ ಹೇಮಂತ್, ಬೇಬಿ ನಾರಾಯಣ, ಪದ್ಮಾವತಿ, ಯಕ್ಷಿತಾ ದೇವಾಡಿಗ, ಸುಚಿತ್ರಾ, ಪ್ರಸನ್ನ ಉಪಸ್ಥಿತರಿದ್ದರು.

ಗ್ರಾಮ ಪಂಚಾಯತುಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಉತ್ತೇಜನ, ಜನಪರ ಆಡಳಿತ, ಪಂಚಾಯತು ವ್ಯಾಪ್ತಿಯಲ್ಲಿ ಹಮ್ಮಿಕೊಂಡ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನ, ಪಂಚಾಯತಕ್ಕೆ ಆದಾಯ ಮೂಲಗಳ ನಿರ್ಮಾಣ ಮೊದಲಾದ ಉತ್ತಮ ಕಾರ್ಯಗಳನ್ನು ಪರಿಗಣಿಸಿ ಅರ್ಹವಾಗಿ ಶಿವರಾಮ ಕಾರಂತ ಪ್ರಶಸ್ತಿ ಲಭಿಸಿದೆ.

Related posts

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 10ನೇ ವರ್ಷದ ಯೋಗ ದಿನಾಚರಣೆ

Suddi Udaya

ತೋಟತ್ತಾಡಿ ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘದ ಮಹಿಳಾ ಬಿಲ್ಲವ ವೇದಿಕೆಯ ನೂತನ ಸಮಿತಿ ರಚನೆ

Suddi Udaya

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಅಸ್ಸಾಂ ಮುಖ್ಯಮಂತ್ರಿ ಗೌರವಾರ್ಪಣೆ

Suddi Udaya

ಯುವವಾಹಿನಿ ಕೆಂದ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಸಾಧಕ ಹರೀಶ್ ಕೆ ಪೂಜಾರಿ ಬೈಲಬರಿ ಬಳಂಜ

Suddi Udaya

ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ 15ನೇ ನೂತನ ಶಾಖೆ ಮಡಂತ್ಯಾರಿನಲ್ಲಿ ಉದ್ಘಾಟನೆ

Suddi Udaya

ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಬೆಳ್ತಂಗಡಿ ಮಂಡಲ ಬಿಜೆಪಿ ಯುವ ಮೋರ್ಚಾ ವತಿಯಿಂದ ಗುರುವಾಯನಕೆರೆ ಹುತಾತ್ಮ ವೀರ ಯೋಧ ಏಕನಾಥ್ ಶೆಟ್ಟಿಯವರ ಪುತ್ಥಳಿಗೆ ಗೌರವ ನಮನ

Suddi Udaya
error: Content is protected !!