24.6 C
ಪುತ್ತೂರು, ಬೆಳ್ತಂಗಡಿ
October 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನೆರಿಯ: ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಸಾಧಕರ ಸನ್ಮಾನ ಕಾರ್ಯಕ್ರಮ

ನೆರಿಯ ಗ್ರಾಮದ ದೇವಗಿರಿ ಚರ್ಚ್ ಸಭಾಂಗಣದಲ್ಲಿ ನೆರಿಯ ಗ್ರಾಮದ ವೆಲ್ಲಪುಲ್ಲಿ ಥೋಮಸ್ ಮತ್ತು ನೆರಿಯ ಗ್ರಾ. ಪಂ. ಮಾಜಿ ಸದಸ್ಯೆ ಮರಿಯಮ್ಮ ರವರ ಪುತ್ರಿ ದೀಪ್ತಿ ಹಾಗೂ ಪುದುವೆಟ್ಟು ಗ್ರಾಮದ ಪೆಲತ್ತೇರಿ ಓನಚ್ಚನ್ ಮತ್ತು ಮೇರಿ ರವರ ಮಗ ಜೋಮೇಶ್ ರವರ ನಿಶ್ಚಿತಾರ್ಥ ಕಾರ್ಯಕ್ರಮ ಅ.19ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಅನುಷ್ಠಾನ ಸಮಿತಿ ಬೆಳ್ತಂಗಡಿ ತಾಲೂಕು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ , ಪಿಎಚ್ಡಿ ಪದವಿ ಪಡೆದ ಉಪನ್ಯಾಸಕ ನೆರಿಯ ಗ್ರಾಮದ ಪುತ್ಯೇಟ್ಟು ಪಡವಿಲ್ ಸೆಬಾಸ್ಟಿಯನ್ ಪಿ.ಎಂ , ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಫೆರ್ನಾಂಡಿಸ್ ಹಳ್ಳಿಮನೆ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ ನೂತನ ಸದಸ್ಯ ರೋಹಿ ಪುದುವೆಟ್ಟು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸೆಬಾಸ್ಟಿಯನ್ ಕಳೆಂಜ , ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ನವೀನ್ ಗೌಡ ಸವಣಾಲು , ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಾಫಿ ಕಾಶಿಪಟ್ಣ , ನೆರಿಯ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಲಕ್ಷ್ಮಣ ಆಲಂಗಾಯಿ, ನೆರಿಯ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಜೆ ಸೆಬಾಸ್ಟಿಯನ್ , ಮಾಜಿ ಸದಸ್ಯರಾದ ರಮೇಶ್ ಕೆ.ಎಸ್ , ಜೋಸೆಫ್ ಪಿ.ಸಿ , ಫಿಲಿಪ್ ಪಿ.ಜೆ ಮುಖಂಡರಾದ ಜಾರ್ಜ್‌ ತೋಟತ್ತಾಡಿ , ಶಾಜು ದೇವಗಿರಿ ,ಅಶ್ವಥ್ ಗಂಡಿಬಾಗಿಲು ಮೊದಲಾದವರು ಉಪಸ್ಥಿತರಿದ್ದರು.

Related posts

ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ

Suddi Udaya

ಇಂದಬೆಟ್ಟು: ರಬ್ಬರ್ ತೋಟಕ್ಕೆ ತಗುಲಿದ ಬೆಂಕಿ

Suddi Udaya

ವಲಯ ಮಟ್ಟದ ಕ್ರೀಡಾಕೂಟ: ಮಚ್ಚಿನ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಹಲವು ಬಹುಮಾನ

Suddi Udaya

ಮಾಚಾರು: ಬದನಾಜೆ ಶಾಲೆ ಹಿರಿಯ ವಿದ್ಯಾರ್ಥಿ ಸಂಘದ ಪುನಾರಚನೆ

Suddi Udaya

ಕನ್ನಡ, ತುಳು ಸಾರಸ್ವತ ಲೋಕದ ಖ್ಯಾತ ಸಾಹಿತಿ, ಯಕ್ಷಗಾನ ಪ್ರಸಂಗಕರ್ತರಾಗಿ ಪ್ರಸಿದ್ಧರಾಗಿದ್ದ ಡಾ. ಅಮೃತ ಸೋಮೇಶ್ವರ ರವರ ನಿಧನಕ್ಕೆ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya

ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಬಂಟ್ವಾಳದಲ್ಲಿ ಪತ್ತೆ

Suddi Udaya
error: Content is protected !!