24.6 C
ಪುತ್ತೂರು, ಬೆಳ್ತಂಗಡಿ
October 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶಿಶಿಲ: ದೀಪಾವಳಿ ಹಬ್ಬದ ಪ್ರಯುಕ್ತ ದೋಸೆ ಹಬ್ಬ ಮತ್ತು ಹಗ್ಗಜಗ್ಗಾಟದ ಆಮಂತ್ರಣ ಪತ್ರಿಕೆ ಬಿಡುಗಡೆ

ಶಿಶಿಲ: ಶಿಶಿಲ ಗ್ರಾಮದ ಉಮ್ಮಂತಿಮ್ಮರು ನಲ್ಲಿ ನ.7ರಂದು ಅಡ್ಡಹಳ್ಳ ಫ್ರೆಂಡ್ಸ್ ಆಯೋಜಿಸುತ್ತಿರುವ ದೀಪಾವಳಿ ಹಬ್ಬದ ಪ್ರಯುಕ್ತ ದೋಸೆ ಹಬ್ಬ ಮತ್ತು ಹಗ್ಗಜಗ್ಗಾಟ ಸ್ಪರ್ಧೆಯ ಆಮಂತ್ರಣ ಪತ್ರಿಕೆಯನ್ನು ಶಿವಶಕ್ತಿ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಮಾಧವ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಧವ ಅವರು, “ಅಡ್ಡಹಳ್ಳ ಫ್ರೆಂಡ್ಸ್ ನಂತಹ ಯುವ ತಂಡಗಳು ಹಬ್ಬದ ಜೊತೆಗೆ ಒಗ್ಗಟ್ಟನ್ನು ಬೆಳೆಸುವ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ. ದೋಸೆ ಹಬ್ಬದ ಮೂಲಕ ಎಲ್ಲರನ್ನು ಒಂದೆಡೆ ಸೇರಿಸುವ ಇವರ ಪ್ರಯತ್ನಕ್ಕೆ ನಮ್ಮ ಸಂಘದ ಸಂಪೂರ್ಣ ಬೆಂಬಲವಿದೆ” ಎಂದು ಹೇಳಿದರು. “ಹಗ್ಗಜಗ್ಗಾಟದಂತಹ ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಗಳು ಇಂದಿನ ಯುವಕರಲ್ಲಿ ಹಬ್ಬದ ಉತ್ಸಾಹದ ಜೊತೆಗೆ ಆರೋಗ್ಯಕರ ಪೈಪೋಟಿಯನ್ನು ಹೆಚ್ಚಿಸುತ್ತವೆ. ಈ ಕಾರ್ಯಕ್ರಮ ಯಶಸ್ವಿಯಾಗಲಿ” ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಅಡ್ಡಹಳ್ಳ ಫ್ರೆಂಡ್ಸ್ ನ ಅಧ್ಯಕ್ಷರು ಕರುಣಾಕರ ಶಿಶಿಲ, ಕಾರ್ಯದರ್ಶಿ ಉಮೇಶ್ ಅಡ್ಡಹಳ್ಳ, ರಿಕ್ಷಾ ಚಾಲಕ ಮಾಲಕ ಸಂಘದ ಉಪಾಧ್ಯಕ್ಷ ರಾಧಾಕೃಷ್ಣ ಗುತ್ತು, ಕಾರ್ಯದರ್ಶಿ ಸುಮಂತ್, ಸದಸ್ಯರಾದ ವಸಂತ ಗೌಡ ಅಡ್ಡಹಳ್ಳ, ಸಂದೀಪ್ ಅಮ್ಮುಡಂಗೆ, ಸಂತೋಷ್ ನಾಗನಡ್ಕ, ಗೌತಮ್, ಹರಿಪ್ರಸಾದ್, ಚರಣ್, ಪುನೀತ್, ನಿತಿನ್, ತನ್ವಿತ್, ತಮ್ಮಯ್ಯ, ಲಕ್ಷಣ ಅಡ್ಡಹಳ್ಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts

ಕಳೆಂಜ ನಡುಜಾರು ಸ.ಕಿ.ಪ್ರಾ. ಶಾಲೆಯಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ

Suddi Udaya

ಉಜಿರೆ : ಶ್ರೀ ಧ.ಮಂ. ಕಾಲೇಜಿನ ಸ್ವಚ್ಛತಾ ಸಿಬ್ಬಂದಿಗೆ ಬೀಳ್ಕೊಡುಗೆ

Suddi Udaya

ರಾಜ್ಯ ಮಟ್ಟದ ಸ್ಕೂಲ್ ಒಲಿಂಪಿಕ್ಸ್‌ ಅಥ್ಲೆಟಿಕ್ಸ್‌ : ಎಸ್.ಡಿ.ಎಂ ಶಾಲೆಯ ವಿದ್ಯಾರ್ಥಿನಿ ಪ್ರಥಮ

Suddi Udaya

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ನ ಪದಗ್ರಹಣ ಸಮಾರಂಭ

Suddi Udaya

ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠೆ: ಗುರುವಾಯನಕೆರೆ ಎರ್ಡೂರು ಬಳಿ ‘ಶ್ರೀರಾಮನಗರ’ ನಾಮಫಲಕ ಅನಾವರಣ

Suddi Udaya

ಮೇ 9 ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ

Suddi Udaya
error: Content is protected !!