30.8 C
ಪುತ್ತೂರು, ಬೆಳ್ತಂಗಡಿ
October 22, 2026
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆಯಲ್ಲಿ ಧರ್ಮಸ್ಥಳ ಯೋಜನೆಯಲ್ಲಿ ಸೇವೆ ಸಲ್ಲಿಸಿದ್ದವರ ಮತ್ತು ನಿವೃತ್ತರಾದವರ ಕಾರ್ಯಾಗಾರ

ಉಜಿರೆ : ಧರ್ಮಸ್ಥಳ ಯೋಜನೆಯಲ್ಲಿ ಸೇವೆ ನೀಡಿದ್ದವರು ಮತ್ತು ನಿವೃತ್ತರಾದವರ ಕಾರ್ಯಾಗಾರ ಉಜಿರೆಯ ಓಶ್ಯನ್ ಪಾರ್ಲ್ ನಲ್ಲಿ ನಡೆಯಿತು.

ಸಭೆಯನ್ನು ಉದ್ದೆಶಿಸಿ ಮಾತಾಡಿದ ಹಿರಿಯ ಕಾರ್ಯಕರ್ತ ಬಿ.ಜಯಂತ ಶೆಟ್ಟಿಯವರು ನಾವೆಲ್ಲರೂ ಒಟ್ಟಾಗಿ ಬೆಳೆದವರು, ಸಂತೊಷದಿಂದ ಸಮಾಜಕ್ಕೆ ಉತ್ತಮ ಸೇವೆ ನೀಡಿದವರು. ಅದರಿಂದಾಗಿ ಇಂದಿಗೂ ನಮ್ಮನ್ನು ಧರ್ಮಸ್ಥಳದವರೆಂದು ಜನ ಗುರುತಿಸುತ್ತಾರೆ. ಧರ್ಮಸ್ಥಳ ನಮಗೆ ಉತ್ತಮ ಜೀವನ ರೂಪಿಸಿದೆ. ಆದುದರಿಂದ ಶ್ರೀ ಧರ್ಮಸ್ಥಳ ಬಗ್ಗೆ ಅಪಾರ ನಂಬಿಕೆಯೊಂದಿಗೆ ನಮ್ಮ ಮತ್ತು ಧರ್ಮಸ್ಥಳ ಸಂಭಂದ ಇನ್ನೂ ಗಟ್ಟಿಯಾಗಿರಬೇಕು. ಅದರೊಂದಿಗೆ ನಮ್ಮ ಸಂಘಟನೆ ಮತ್ತು ಹಿರಿಯರು ಕಿರಿಯರು ಎಂಬ ಭೇದ ಇಲ್ಲದೆ ಒಗ್ಗಟ್ಟಾಗಿರಬೇಕು. ಮುಂದೆ ಉತ್ತಮ ಯೋಜನೆ , ಯೋಚನೆ ರೂಪಿಸುವುದೆ ನಮ್ಮೆಲ್ಲರ ಉದ್ದೇಶ ಆಗಿರಬೆಕು ಎಂದು ನುಡಿದರು.

ಶ್ರೀಹರಿಯವರು ಮಾತಾಡುತ್ತಾ ನಮ್ಮ ಸಂಘಟನೆ ಸದ್ಯ ಉಡುಪಿ, ದ.ಕನ್ನಡಕ್ಕೆ ಸೀಮಿತವಾಗಿದ್ದು , ಹೆಚ್ಚು ಆರ್ಥಿಕ ಹೊರೆ ಆಗದಂತೆ ಮುಂದುವರಿಸಬೇಕೆಂದರು. ಸೀತಾರಾಮ ಶೆಟ್ಟಿಯವರು ಮುಂದಿನ ಯೋಜನೆ ಹೇಗಿರಬೇಕು ಎಂದು ಸೂಚಿಸಿದ್ದರು.
ಎಲ್ಲಾ ಕಾರ್ಯಕರ್ತರಿಂದ ಬಂದ ಅಭಿಪ್ರಾಯದ ಕ್ರೂಡೀಕರಣವನ್ನು ಬಿ .ಜಯರಾಮ ನೆಲ್ಲಿತ್ತಾಯರು ಸಭೆ ಮುಂದೆ ಮಂಡಿಸಿದ್ದರು. ಇದೆ ಸಂದರ್ಭದಲ್ಲಿ ಉತ್ತಮ ಅಭಿಪ್ರಾಯ ನೀಡಿದ್ದ ಬೂದಪ್ಪರಿಗೂ, ಶ್ರೀಮತಿ ವಾರಿಜಾರಿ ರವರಿಗೆ ಬಹುಮಾನ ನೀಡಿ ಅಭಿನಂದನೆ ಮಾಡಲಾಗಿತ್ತು.

ಪ್ರಸ್ತಾಪನೆಯನ್ನು ಗಂಗಾಧರ ಭಂಡಾರಿ ಮಂಡಿಸಿದರು. ಪ್ರಾರ್ಥನೆಯನ್ನು ಸುರೇಶ ಸಾಲಿಯಾನ್, ನಾಗೇಶ ಉಜಿರೆ ಸ್ವಾಗತಿಸಿ,
ಕಾರ್ಯಕ್ರಮವನ್ನು ಉಮೆಶ ಜಿ.ಮ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಕಾರ್ಯಕರ್ತರು ಪ್ರಸ್ತುತ ಅವರ ಜವಾಬ್ದಾರಿ ಮತ್ತು ಉದ್ಯೊಗ, ಹಿಂದಿನ ತಮ್ಮ ಅನುಭವ ತಿಳಿಸಿದ್ದರು.
ಕಾರ್ಯಕ್ರಮದಲ್ಲಿ ಮುಂದಿನ ಸಂಘಟನೆ ಮತ್ತು ಕಾರ್ಯಕ್ರಮ ರೂಪಣೆ ಸಿದ್ದತೆ ಬಗ್ಗೆ 22 ಮಂದಿಯ ಉಪಸಮಿತಿ ರಚಿಸಲಾಯಿತು.
ಯೋಜನೆಯಲ್ಲಿ ದುಡಿದು ಮೃತ ಪಟ್ಟಿರುವ ಹಿರಿಯರಿಗೆಲ್ಲಾ ಸಂತಾಪ ಸೂಚಿಸಲಾಗಿತ್ತು. ಕಾರ್ಯಕ್ರಮದಲ್ಲಿ ದ.ಕನ್ನಡ, ಉಡುಪಿ, ಕುಂದಾಪುರ ಮೊದಲಾದ ಕಡೆಯಿಂದ ಎಲ್ಲಾ ಹಿರಿಯ ಕಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಪೃಥ್ವಿ ಜುವೆಲ್ಸ್ ನಲ್ಲಿ ಮಹಾ ರಿಯಾಯಿತಿಗಳ ಸಂಭ್ರಮ: ಚಿನ್ನಾಭರಣಗಳ ತಯಾರಿಕಾ ವೆಚ್ಚದ ಮೇಲೆ ಶೇ.50 ವರೆಗೆ ರಿಯಾಯಿತಿ

Suddi Udaya

ಧರ್ಮಸ್ಥಳದಲ್ಲಿ ಗೋ ರಥ: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಂದ ಗೋ ರಥ ಯಾತ್ರೆಗೆ ಶುಭ ಹಾರೈಕೆ

Suddi Udaya

ಗುರುವಾಯನಕೆರೆ ಪೊಟ್ಟುಕೆರೆ ನಿಷೇಧಿತ ಮಾದಕ ವಸ್ತು ಸೇವಿಸಿದ ವ್ಯಕ್ತಿ ಮೇಲೆ ಪ್ರಕರಣ ದಾಖಲು

Suddi Udaya

ಎಸ್‌ಎನ್ ಮೂಡಬಿದ್ರಿ ಪಾಲಿಟೆಕ್ನಿಕ್‌ನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

Suddi Udaya

ಓಡಿಲ್ನಾಳ: ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಚಂದ್ರಶೇಖರ ಎಲ್. ಮತ್ತು ಮನೆಯವರಿಂದ ಸ್ಟೀಲ್ ತಟ್ಟೆ ಕೊಡುಗೆ

Suddi Udaya

ನಿಡ್ಲೆ : ನೆಕ್ಕರೆ ನಿವಾಸಿ ಧರ್ಣಮ್ಮ ನಿಧನ

Suddi Udaya
error: Content is protected !!