30.8 C
ಪುತ್ತೂರು, ಬೆಳ್ತಂಗಡಿ
October 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾವೂರು ಡಾ. ಪ್ರದೀಪ್‌ರವರ ಆರೋಗ್ಯ, ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ: ಪ್ರಕರಣದ ಹಿಂದಿರುವ ಸೂತ್ರಧಾರನ ರಕ್ಷಣೆಯನ್ನು ಪೊಲೀಸ್ ಇಲಾಖೆ ಮಾಡುತ್ತಿದೆಯೇ ಗ್ರಾಮಸ್ಥರಿಗೆ ಅನುಮಾನ: ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ಹರೀಶ್ ಸಾಲ್ಯಾನ್

ಬೆಳ್ತಂಗಡಿ: ಅ.6 ರಂದು ರಾತ್ರಿ ನಾವೂರಿನ ಡಾ. ಪ್ರದೀಪ್ ರವರ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ ನಡೆದಿದ್ದು ಇದನ್ನು ನಾವೂರು ಗ್ರಾಮದ ಸಮಸ್ತ ಶಾಂತಿಪ್ರಿಯ ಗ್ರಾಮಸ್ಥರು ಒಕ್ಕೊರಳಿಂದ ಖಂಡಿಸಿದ್ದು. ಇದರ ಸತ್ಯಾಸತ್ಯತೆಯನ್ನು ಸಮಾಜದ ಮುಂದೆ ತರಬೇಕು ಎಂದು ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಹರೀಶ್ ಸಾಲ್ಯಾನ್ ಆಗ್ರಹಿಸಿದರು.

ಅವರು ಅ.21ರಂದು ಬೆಳ್ತಂಗಡಿ ಎಸ್.ಡಿ.ಎಂ ಕಲಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಬೆಂಕಿ ಹಚ್ಚಿದ ಪ್ರಕರಣದಲ್ಲಿ ತಕ್ಷಣ ಸ್ಪಂದಿಸಿದ ಪೊಲೀಸ್ ಇಲಾಖೆ, ಸೂಕ್ತ ಕ್ರಮ ಕೈಗೊಂಡು ಮೂರು ಜನ ಆರೋಪಿಗಳನ್ನು ಈಗಾಗಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಶ್ಲಾಘನೀಯ ಹಾಗೂ ನಾವು ಗ್ರಾಮಸ್ಥರ ಪರವಾಗಿ ಇಲಾಖೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಆದರೆ ಯಾವ ಉದ್ದೇಶಕ್ಕೆ ಈ ಕೃತ್ಯ ನಡೆಯಿತು. ಎಂಬುದರ ಸತ್ಯಾಸತ್ಯತೆಯನ್ನು ಸಮಾಜದ ಮುಂದೆ ತರಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ತನಿಖಾ ತಂಡದ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದ್ದು ಯಾರದೇ ಒತ್ತಡಕ್ಕೆ ಮಣಿಯದೆ ನೈಜ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸುತ್ತೇವೆ ಎಂದು ತಿಳಿಸಿದರು.

ಈ ಪ್ರಕರಣಕ್ಕೆ ಪೂರಕವಾಗಿ ಪ್ರೇರಣೆ ನೀಡಿದಂತಹ ಇನ್ನಷ್ಟು ವ್ಯಕ್ತಿಗಳು ಇರಬಹುದು ಎಂಬ ಶಂಕೆ ಗ್ರಾಮಸ್ಥರಲ್ಲಿ ಇದ್ದು ಹಾಗೆಯೇ ಬೆಂಕಿ ಕೊಟ್ಟವರನ್ನು ಸೆರೆಹಿಡಿದು ಇದರ ಹಿಂದಿರುವ ಸೂತ್ರಧಾರನ ರಕ್ಷಣೆಯನ್ನು ಪೊಲೀಸ್ ಇಲಾಖೆ ಮಾಡುತ್ತಿದೆಯೇ ಎಂಬ ಅನುಮಾನವೂ ಗ್ರಾಮಸ್ಥರಲ್ಲಿ ಇದೆ, ಅದಲ್ಲದೇ ಪ್ರಾಥಮಿಕ ಹಂತದಲ್ಲೇ ಈ ಪ್ರಕರಣವನ್ನು ಹಳ್ಳಕ್ಕೆ ತಳ್ಳುವ ಹುನ್ನಾರ ನಡೆಯುತ್ತಿದೆ ಎಂಬ ಆಕ್ರೋಶವೂ ಗ್ರಾಮಸ್ಥರಲ್ಲಿದ್ದು ಹಾಗಾಗಿ ಇಲಾಖೆ ಆಧುನಿಕ ತಂತ್ರಜ್ಞಾನದ ಮೂಲಕ ಪೊಲೀಸ್ ಇಲಾಖೆ ಇನ್ನಷ್ಟು ಕೂಲಂಕುಷವಾಗಿ ತನಿಖೆ ನಡೆಸಿ ಅವರನ್ನು ಕೂಡ ತನಿಖೆಗೆ ಒಳಪಡಿಸುವಂತೆ ಗ್ರಾಮಸ್ಥರು ಆಗ್ರಹಿಸುತ್ತೇವೆ ಎಂದು ಹೇಳಿದರು.


ಗ್ರಾಮಸ್ಥರ ಗುಮಾನಿಯ ಪ್ರಕಾರ ಈ ಕೃತ್ಯದ ಹಿಂದೆ ಇನ್ನು ಹಲವಾರು ಮಂದಿ ಇದ್ದು ಅವರುಗಳನ್ನು ತನಿಖೆಗೆ ಒಳಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದು, ಬಂಧಿತರ ಮೊಬೈಲ್ ಕರೆಗಳ ಮಾಹಿತಿಯ ಪೂರಕವಾಗಿ ಪ್ರಮುಖ ಸೂತ್ರಧಾರನ ಪತ್ತೆಗೆ ಸಹಾಯವಾಗಲಿದ್ದು ಇದನ್ನು ಇಲಾಖೆಯವರು ಯಾಕೆ ಮಾಡುತ್ತಿಲ್ಲ ಎಂಬುದು ಗ್ರಾಮಸ್ಥರ ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಆಗ್ರಹಿಸುತ್ತೇವೆ. ನಮ್ಮ ಆಗ್ರಹವು ಈಡೇರದಿದ್ದಲ್ಲಿ ಮುಂದಿನ ದಿನದಲ್ಲಿ ಗ್ರಾಮಸ್ಥರು ಒಟ್ಟಾಗಿ ಪ್ರತಿಭಟನೆ ನಡೆಸಲು ಹಿಂಜರಿಯುದಿಲ್ಲ ಎಂದು ಎಚ್ಚರಿಸಿದರು.


ಹಲವಾರು ವರ್ಷಗಳಿಂದ ಜಾತಿ ಧರ್ಮ ಭೇದ ಮರೆತು ಎಲ್ಲರೂ ಶಾಂತಿ ಸಾಮರಸ್ಯದಿಂದ ನೆಮ್ಮದಿಯಾಗಿ ಬದುಕುತ್ತಿದ್ದು, ನಮ್ಮ ಗ್ರಾಮದಲ್ಲಿ ಇತ್ತೀಚಿಗೆ ನಡೆದಂತಹ ಹಲವಾರು ಬೆಳವಣಿಗೆಗಳು ಗ್ರಾಮದ ಜನರಲ್ಲಿ ನೆಮ್ಮದಿಯನ್ನು ಕೆಡಿಸಿದೆ. ಆದ್ದರಿಂದ ಮುಂದಿನ ದಿನದಲ್ಲಿ ಶಾಂತಿ ಕದಡದಂತೆ ಸೂಕ್ತ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಳ್ಳಬೇಕೆಂದು ಗ್ರಾಮಸ್ಥರ ಪರವಾಗಿ ಒತ್ತಾಯಿಸುವುದಾಗಿ ಹರೀಶ್ ಸಾಲ್ಯಾನ್ ಹೇಳಿದರು.
ನಡ ಗ್ರಾ.ಪಂ ಮಾಜಿ ಅಧ್ಯಕ್ಷ ಪ್ರವೀಣ್ ವಿ.ಜಿ ಮಾತನಾಡಿ, ಡಾ.ಪ್ರದೀಪ್ ಅವರ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಈ ಪ್ರಕರಣದಲ್ಲಿ ಯಾರೋ ನಾಯಕರು ಸೇರಿಕೊಂಡಿದ್ದಾರೆ. ಪೊಲೀಸರಿಗೆ ಇದರ ಮಾಹಿತಿ ನೀಡಿದ್ದೇವೆ. ಅವರನ್ನು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್‌ನ ಉಪಾಧ್ಯಕ್ಷೆ ತನುಜಾ ಶೇಖರ್, ಕೊಡಮಣಿತ್ತಾಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗಣೇಶ್ ಕಣಾಲ್, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಧರ್ಣಪ್ಪ ಮೂಲ್ಯ ಉಪಸ್ಥಿತರಿದ್ದರು. ನಾವೂರು ಗ್ರಾ.ಪಂ ಮಾಜಿ ಅಧ್ಯಕ್ಷ ಗಣೇಶ್ ಗೌಡ ಸ್ವಾಗತಿಸಿ, ವಂದಿಸಿದರು.

Related posts

ಏ.18: ಯ೦ಗ್‌ ಬಾಯ್ಸ್ ಸವಣಾಲು ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ 2ನೇ ವರ್ಷದ “ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ”

Suddi Udaya

ಎಲ್.ಸಿ.ಆರ್. ವಿದ್ಯಾಸಂಸ್ಥೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Suddi Udaya

ಬಿಜೆಪಿ ಯುವ ಮೋರ್ಚಾ ನಾಯಕರಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರು “ಸತ್ಯ ಧರ್ಮಕ್ಕೆ ಸಂದ ಜಯ”: ಶಾಸಕ ಹರೀಶ್ ಪೂಂಜ

Suddi Udaya

ಮುಂಡಾಜೆ ಮತ್ತು ಕಕ್ಕಿಂಜೆ ರೋಟರಿ ಸಮುದಾಯ ದಳಗಳ ಪದಾಧಿಕಾರಿಗಳ ಆಯ್ಕೆ

Suddi Udaya

ಬೆಳ್ತಂಗಡಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ , ನ್ಯಾಷನಲ್ ಇನ್ಶುರೆನ್ಸ್ ಕಂಪನಿ ಬಂಟ್ವಾಳ ಬ್ರಾಂಚ್ ಮತ್ತು ಜೆಸಿಐ ಸೀನಿಯರ್ ಛೇಂಬರ್ ವತಿಯಿಂದ ಮಹಾತ್ಮ ಗಾಂಧಿ ಜಯಂತಿ ಆಚರಣೆ

Suddi Udaya

ಗೇರುಕಟ್ಟೆ ನಿವೃತ್ತ ಯೋಧ ವಿಕ್ರಮಗೆ ಅದ್ದೂರಿ ಸ್ವಾಗತ

Suddi Udaya
error: Content is protected !!