28.5 C
ಪುತ್ತೂರು, ಬೆಳ್ತಂಗಡಿ
October 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ನಿನಾದ ಕ್ಲಾಸಿಕಲ್ಸ್ ನಲ್ಲಿ ಶ್ರೀ ಶಾರದಾ ಪೂಜೆ ಹಾಗೂ ಗುರುವಂದನೆ ಕಾರ್ಯಕ್ರಮ: ಝೀ ಸರಿಗಮಪ ಲಿಟಲ್ ಚಾಂಪ್ಸ್ ವಿಜೇತ ಮಾ. ಅಶ್ಮಿತ್ ಎ.ಜೆ. ರವರಿಗೆ ಸನ್ಮಾನ

ಉಜಿರೆ ನಿನಾದ ಕ್ಲಾಸಿಕಲ್ಸ್ ನಲ್ಲಿ ಶ್ರೀ ಶಾರದಾ ಪೂಜೆ , ಗುರುವಂದನೆ ಹಾಗೂ ಝೀ ಸರಿಗಮಪ ಲಿಟಲ್ ಚಾಂಪ್ಸ್ ವಿಜೇತರು ಮಾ. ಅಶ್ಮಿತ್ ಎ.ಜೆ. ರವರಿಗೆ ಸನ್ಮಾನ ಕಾರ್ಯಕ್ರಮವು ಅ.18ರಂದು ವಿದ್ಯಾಸಂಸ್ಥೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಆನುವಂಶಿಕ ಆಡಳಿತ ಮೊಕೇಸರರು ಶರತ್‌ಕೃಷ್ಣ ಪಡ್ಡೆಟ್ನಾಯ, ಉಜಿರೆ ವಾಣಿಜ್ಯ ಹಾಗೂ ಕೈಗಾರಿಕಾ ಸಂಘ ಅಧ್ಯಕ್ಷ ಪ್ರಸಾದ್ ಬಿ.ಎಸ್, ಉಜಿರೆ ಹಿಪ್ ಬಾಯ್ಸ್ ಡ್ಯಾನ್ಸ್ ಕ್ಯೂ ನಿರ್ದೇಶಕ ಸಹನ್ ಎಂ.ಎಸ್., ವಯೋಲಿನ್ ಗುರುಗಳು ವಿದ್ವಾನ್ ವೇಣುಗೋಪಾಲ್ ಶಾನ್‌ಭೋಗ್, ಮೃದಂಗ ಗುರುಗಳು ವಿದ್ವಾನ್ ವೆಂಕಟ ಯಶಸ್ವಿ ಕಬೆಕೋಡು, ನಿನಾದ ಕ್ಲಾಸಿಕಲ್ಸ್ ನೃತ್ಯ ಗುರುಗಳು ವಿನೀತ ಜೋಗಿತ್ತಾಯ, ಯೋಗ ಗುರುಗಳು ಡಾ. ಭಾಷಿಣಿ, ನಿನಾದ ಕ್ಲಾಸಿಕಲ್ಸ್ ನಿರ್ದೇಶಕಿ ಶ್ರೀದೇವಿ ಸಚಿನ್ ಉಪಸ್ಥಿತರಿದ್ದರು.

ಈ ವೇಳೆ ಝೀ ಸರಿಗಮಪ ಲಿಟಲ್ ಚಾಂಪ್ಸ್ 2026 ವಿಜೇತರು ಮಾ. ಅಶ್ಮಿತ್ ಎ.ಜೆ. ರವರವನ್ನು ಸನ್ಮಾನಿಸಿ, ಗೌರವಿಸಲಾಯಿತು.

ನಂತರ ನಿನಾದ ಕ್ಲಾಸಿಕಲ್ಸ್ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.


,

Related posts

ನಿಡ್ಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರತಿಭಾ ದಿನಾಚರಣೆ : ಯಕ್ಷ ಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ

Suddi Udaya

ಉಜಿರೆ ಕಾಶಿಬೆಟ್ಟು ಬಳಿ ಬೈಕ್ ಹಾಗೂ ಕಾರು ನಡುವೆ ಅಪಘಾತ: ಬೈಕ್ ಸವಾರರಿಗೆ ಗಂಭೀರ ಗಾಯ

Suddi Udaya

ನಡ ಸರಕಾರಿ ಪಿ.ಯು ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಉಜಿರೆ : ರುಡ್ ಸೆಟ್ ಸಂಸ್ಥೆಯಲ್ಲಿ “ರಬ್ಬರ್‌ ಟ್ಯಾಪಿಂಗ್‌ ʼʼ ತರಬೇತಿಯ ಸಮಾರೋಪ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪೆರ್ಲ ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಅಭಿವೃದ್ಧಿಗೆ ದೇಣಿಗೆ ಹಸ್ತಾಂತರ

Suddi Udaya

ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ಕ್ಷೇಮ ನಿಧಿ 9ನೇ ಸಹಾಯಧನ ಹಸ್ತಾಂತರ

Suddi Udaya
error: Content is protected !!