34 C
ಪುತ್ತೂರು, ಬೆಳ್ತಂಗಡಿ
October 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆನಕ ಹೆಲ್ತ್ ಸೆಂಟರ್‌ನಲ್ಲಿ ಆಯುಧ ಪೂಜೆಯ ಸಂಭ್ರಮ

ಉಜಿರೆ: NABH ಮಾನ್ಯತೆ ಪಡೆದಿರುವ ಬೆನಕ ಹೆಲ್ತ್ ಸೆಂಟರ್, ಉಜಿರೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಆಯುಧ ಪೂಜೆಯನ್ನು ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು.

ಶ್ರೀ ಜನಾರ್ದನ ದೇವಸ್ಥಾನದ ಪುರೋಹಿತರಾದ ಶ್ರೀನಿವಾಸ ಹೊಳ್ಳ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಆಸ್ಪತ್ರೆಯ ಹೊರರೋಗಿ ವಿಭಾಗ (OPD), ಶಸ್ತ್ರಚಿಕಿತ್ಸಾ ಕೊಠಡಿ (OT) ಸೇರಿದಂತೆ ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಪೂಜೆ ಸಲ್ಲಿಸಲಾಯಿತು. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ವಾಹನಗಳಿಗೂ ಪೂಜೆ ನೆರವೇರಿಸಲಾಯಿತು.

ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆ ಹಾಗೂ ಆರೋಗ್ಯ ಸೇವೆಗಳಿಗೆ ಬಳಸುವ ಉಪಕರಣಗಳು, ಯಂತ್ರೋಪಕರಣಗಳು ಮತ್ತು ವಾಹನಗಳಿಗೆ ಪೂಜೆ ಸಲ್ಲಿಸುವ ಮೂಲಕ ಅವುಗಳ ಮಹತ್ವವನ್ನು ಸ್ಮರಿಸಲಾಯಿತು. ಆಯುಧ ಪೂಜೆಯು ಕರ್ತವ್ಯ ನಿರ್ವಹಣೆಯಲ್ಲಿ ಬಳಸುವ ಸಾಧನಗಳನ್ನು ಗೌರವಿಸುವ ಹಾಗೂ ಎಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥಿಸುವ ಸಂಪ್ರದಾಯದ ಸಂಕೇತವಾಗಿದೆ.

ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಗೋಪಾಲಕೃಷ್ಣ ಕೆ., ಸಹ ನಿರ್ದೇಶಕರಾದ ಡಾ. ಭಾರತಿ ಜಿ.ಕೆ., ತುರ್ತು ಚಿಕಿತ್ಸಾ ತಜ್ಞರಾದ ಡಾ. ಆದಿತ್ಯ ರಾವ್, ಪ್ರಸೂತಿ ಮತ್ತು ಸ್ತ್ರೀರೋಗ ಹಾಗೂ ಪೆಲ್ವಿಕ್ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಅಂಕಿತಾ ಜಿ. ಭಟ್, ಮೂಳೆ ಚಿಕಿತ್ಸಾ ತಜ್ಞರಾದ ಡಾ. ರೋಹಿತ್ ಜಿ. ಭಟ್, IVF ಹಾಗೂ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆಯಾದ ಡಾ. ನವ್ಯಾ ಭಟ್, ಅರಿವಳಿಕೆ ತಜ್ಞರಾದ ಡಾ. ಶ್ರೇಯಸ್ ಭಟ್, ಮೂಳೆ ಚಿಕಿತ್ಸಾ ತಜ್ಞರಾದ ಡಾ. ಶಶಾಂಕ್ ಕುಂಬ್ಳೆ ಹಾಗೂ ಮಕ್ಕಳ ತಜ್ಞರಾದ ಡಾ. ಗೋವಿಂದ್ ಕಿಶೋರ್ ಸೇರಿದಂತೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸಾಂಪ್ರದಾಯಿಕ ಆಚರಣೆಯೊಂದಿಗೆ ನಡೆದ ಈ ಕಾರ್ಯಕ್ರಮವು ಆಸ್ಪತ್ರೆಯ ಸಿಬ್ಬಂದಿಯಲ್ಲಿ ಭಕ್ತಿ, ಒಗ್ಗಟ್ಟು ಮತ್ತು ಸೇವಾ ಮನೋಭಾವವನ್ನು ಬಿಂಬಿಸಿತು.

Related posts

ಬಳಂಜ: ಕುತ್ಲಿಮಾರು ನಿವಾಸಿ ಅಶೋಕ್ ಶೆಟ್ಟಿ ನಿಧನ

Suddi Udaya

ತಣ್ಣೀರುಪಂತ: ನವಚೇತನಾ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನೂತನ ಕಟ್ಟಡದ ಉದ್ಘಾಟನೆ

Suddi Udaya

ಮೇ 12 : ರೂ.2.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಕೊಕ್ರಾಡಿ ಪ್ರೌಢಶಾಲೆ-ಕಾಲೇಜಿನ ನೂತನ ಕೊಠಡಿಗಳ ಉದ್ಘಾಟನೆ

Suddi Udaya

ಲಾಯಿಲ: ದಯಾ ವಿಶೇಷ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಭಾರೀ ಮಳೆ ಹಿನ್ನೆಲೆ: ಬೆಳ್ತಂಗಡಿಯ ಪ್ರವಾಸಿ ತಾಣಗಳ ಪ್ರವೇಶಕ್ಕೆ ನಿಷೇಧ

Suddi Udaya

ಗುರುವಾಯನಕೆರೆ ಶಕ್ತಿನಗರ ನಿವಾಸಿ ಧನಂಜಯ ಇಂದ್ರ ನಿಧನ

Suddi Udaya
error: Content is protected !!