26.7 C
ಪುತ್ತೂರು, ಬೆಳ್ತಂಗಡಿ
October 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

1994-96 ರ ಪುಂಜಾಲಕಟ್ಟೆ ಪ್ರೌಢಶಾಲಾ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

ಪುಂಜಾಲಕಟ್ಟೆ: ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದ 1994-96 ರಲ್ಲಿ ವಿದ್ಯಾರ್ಜನೆ ಗೈದು ಇದೀಗ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಒತ್ತಿ ಸಾಧನೆಯ ಶಿಖರವನ್ನು ಏರಿರುವ ವಿದ್ಯಾರ್ಥಿಗಳ ಸಮ್ಮಿಲನವು ಇತ್ತೀಚೆಗೆ ತಾವು ಕಲಿತ ಸಂಸ್ಥೆಯಲ್ಲಿಯೇ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಪ್ರಕೃತ ಸಂಸ್ಥೆಯ ಉಪ ಪ್ರಾಂಶುಪಾಲರಾಗಿರುವ ಗಣೇಶ್ ವಹಿಸಿಕೊಂಡು ಸಭೆಯನ್ನು ಮುನ್ನಡೆಸಿದರು. ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶಾಮಪ್ರಸಾದ್ ಸಂಪಿಗೆ ತ್ತಾಯ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಾದ ಮಂಜಪ್ಪ ಮೂಲ್ಯ , ಪ್ರಸ್ತುತ ಸಾಲಿನ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ದಿವಾಕರ ಶೆಟ್ಟಿ ಕಂಗಿತ್ತಿಲು ಸದಸ್ಯೆ ಶ್ರೀಮತಿ ಪ್ರೀತಿ ಹಾಗೂ ಪ್ರೌಢಶಾಲಾ ವಿಭಾಗದ ಸದಸ್ಯರು, ತಮಗೆ ಕಳಿಸಿದ ಗುರುಗಳಾದ ಶ್ರೀಮತಿ ಕುಮುದ ಎಂ, ಪ್ರಸ್ತುತ ಸಂಸ್ಥೆಯಲ್ಲಿ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಧರಣೇಂದ್ರ ಕೆ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಮತ್ತೊಮ್ಮೆ ನೀವೆಲ್ಲರೂ ಇದೇ ರೀತಿ ವರ್ಷಕ್ಕೊಮ್ಮೆಯಾದರೂ ಜೊತೆಯಾಗಬೇಕು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಆ ದಿನಗಳಲ್ಲಿ ಇದ್ದಂತಹ ಬಡತನ-ಸಿರಿತನ- ಎಂಬ ಬೇದ ಭಾವವನ್ನು ಇಟ್ಟುಕೊಳ್ಳದೆ ಎಲ್ಲರೂ ಜೊತೆಯಾಗಿ ಕಳೆದ ದಿನಗಳು ಅದು ಶಾಶ್ವತ ಹಾಗೂ ಅಮರ ಎಂದು ಪ್ರತಿಯೊಬ್ಬರು ತಮ್ಮ ತಮ್ಮ ಅನಿಸಿಕೆಯಲ್ಲಿ ಹಂಚಿಕೊಂಡರು.

ಅಷ್ಟು ಮಾತ್ರವಲ್ಲದೆ ಪ್ರಸ್ತುತ ಸಂಸ್ಥೆಯ ಬೇಡಿಕೆಗಳ ಬಗ್ಗೆ ವಿಮರ್ಶೆಯನ್ನು ಮಾಡಿ ಈ ಸಂಸ್ಥೆಗೆ ನಮ್ಮದೇ ಆದ ಕೊಡುಗೆಯನ್ನು ಕೊಡಲು ನಾವು ಸದಾ ಸಿದ್ಧ ಎಂದು ಪ್ರತಿಯೊಬ್ಬರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕಲಿಕಾ ಗುರುಗಳಾದ ಶ್ರೀಮತಿ ಕುಮುದ ಎಂ ಹಿಂದಿ ಶಿಕ್ಷಕಿ ಇವರಿಗೆ ಸರ್ವರು ಜೊತೆ ಸೇರಿ ಗುರು ನಮನ ಸಲ್ಲಿಸಿ ಗೌರವಿಸಿದರು. ಮಾತ್ರವಲ್ಲದೆ ಆರಂಭದಲ್ಲಿ ಸಂಸ್ಥೆಗೆ ಅತಿ ಅಗತ್ಯವಾಗಿ ಪ್ರಯೋಜನವಾಗುವ ಫ್ಯಾನ್ಗಳನ್ನು ನೆನಪಿಗಾಗಿ, ಸಂಸ್ಥೆಯ ಉಪ ಪ್ರಾಂಶುಪಾಲರು ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರ ಹಾಗೂ ಹಿರಿಯ ವಿದ್ಯಾಥಿ ಸಂಘದ ಅಧ್ಯಕ್ಷರ ಸಮ್ಮುಖದಲ್ಲಿ ಹಸ್ತಾಂತರ ಮಾಡಿದರು.

ಕಾರ್ಯಕ್ರಮವನ್ನು 1994-96 ಸಾಲಿನ ಹಿರಿಯ ವಿದ್ಯಾರ್ಥಿಯಾದ ಉದಯಕುಮಾರ್ ನಿರ್ವಹಿಸಿದರು. ಸುಧಾ ಭಟ್ ಪ್ರಾರ್ಥಿಸಿ, ಸತೀಶ್ ಆಚಾರ್ಯ ಬೆರ್ಕಳ ಸ್ವಾಗತಿಸಿ, ನಾರಾಯಣ್ ಧನ್ಯವಾದ ಸಲ್ಲಿಸಿದರು.

Related posts

ಕ.ಸಾ.ಪ ಸಮ್ಮೇಳನ: ಸರ್ವಾಧ್ಯಕ್ಷ ಪ್ರೊ.ಎ ಕೃಷ್ಣಪ್ಪ ಪೂಜಾರಿ ಅವರಿಗೆ ಅಧಿಕೃತ ಆಮಂತ್ರಣ

Suddi Udaya

ದ್ವಿತೀಯ ಪಿಯುಸಿ ಪರೀಕ್ಷೆ ವಾಣಿಜ್ಯ ವಿಭಾಗದಲ್ಲಿ ಸಾಧನೆಗೈದ ಜೋಶನ್‌ ರಫಾಯೆಲ್‌ ಡಿಸೋಜ ರಿಗೆ ಮಡಂತ್ಯಾರು ಸೇಕ್ರೆಡ್‌ ಹಾಟ್‌೯ ವಿದ್ಯಾಸಂಸ್ಥೆಯ ವತಿಯಿಂದ ಸನ್ಮಾನ

Suddi Udaya

ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾಗಿ ರವಿ ಪೂಜಾರಿ ಚಿಲಿಂಬಿ ಆಯ್ಕೆ

Suddi Udaya

ಹರೀಶ್ ಪೂಂಜರ ಜಯಭೇರಿ : ಇಬ್ಬರು ಯುವಕರಿಂದ ಅಳದಂಗಡಿ ದೇವಸ್ಥಾನಕ್ಕೆ ಪಾದಯಾತ್ರೆ

Suddi Udaya

ಧಮ೯ಸ್ಥಳ: ದೂರುದಾರನ ಜೊತೆ ಬೊಳಿಯಾರ್ ನ ಹೊಸ ಜಾಗಕ್ಕೆ ಬಂದ ಎಸ್ ಐಟಿ ತಂಡ

Suddi Udaya

ಕಲ್ಮಂಜ ಸ.ಪ್ರೌ. ಶಾಲೆಯಲ್ಲಿ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ

Suddi Udaya
error: Content is protected !!