ಕಾಪು : ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ 22ನೇ ಹವಾ ನಿಯಂತ್ರಿತ ಕಾವು ಶಾಖೆಯು ಅ.21ರಂದು ಕಾಪು ಮಂಜುಶ್ರೀ ಎನ್ ಕೈವ್ ಮೊದಲನೇ ಮಹಡಿಯಲ್ಲಿ ಉದ್ಘಾಟನೆಗೊಂಡಿತು.ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಸೊಸೈಟಿಯನ್ನು ಉದ್ಘಾಟಿಸಿದರು.
ಗ್ರಾಹಕರ ನಂಬುಗೆಯ ಸಂಸ್ಥೆಯಾಗಿ ವಿಜಯ ಕ್ರೆಡಿಟ್ ಕೋ.ಅ.ಸೊಸೈಟಿ ಬೆಳೆದಿದೆ. ಜಯರಾಮ ಶೆಟ್ಟಿಯವರ ನೇತೃತ್ವದಲ್ಲಿ 2005ರಲ್ಲಿ ಗುರುವಾನಕೆರೆಯಲ್ಲಿ ಪ್ರಾರಂಭವಾದ ಸೊಸೈಟಿ ದ.ಕ ಮತ್ತು ಉಡುಪಿ ಉಭಯ ಜಿಲ್ಲೆಯಲ್ಲಿ ಸುಮಾರು 22 ಶಾಖೆಗಳು ಕಾರ್ಯನಿರ್ವಹಿಸುತ್ತದೆ ಎಂದರೆ ಅದಕ್ಕೆ ಜನರ ವಿಶ್ವಾಸವೇ ಕಾರಣ. ಕಾಪು ಬಂಟರ ಸಂಘದ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿಯವರು ದೀಪ ಪ್ರಜ್ವಲಿಸಿದರು.
ಮುಖ್ಯ ಅತಿಥಿಗಳಾಗಿ ಮೋಗವೀರ ಮಹಾಸಭಾದ ಅಧ್ಯಕ್ಷ ಸುಜಿತ್ ಕುಮಾರ್ ಕಾಪು, ಜಾಮಿಯಾ ಮಸೀದಿಯ ಅಧ್ಯಕ್ಷ ಶೇಖ್ ನಝೀರ್ ಅಹಮ್ಮದ್, ಕಟ್ಟಡದ ಮಾಲಕ ಪ್ರಸಾದ್ ಎಸ್. ಕಾಮತ್ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಸೊಸೈಟಿಯ ಅಧ್ಯಕ್ಷ ಅಜಿತ್ ಜಿ. ಶೆಟ್ಟಿ ಕೊರ್ಯಾರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ನಿರ್ದೇಶಕರುಗಳಾದ ಸೀತಾರಾಮ ಶೆಟ್ಟಿ, ಬಾಲಕೃಷ್ಣ ಪೂಂಜ, ಪುಷ್ಪರಾಜ್ ಶೆಟ್ಟಿ, ಕೃಷ್ಣ ಶೆಟ್ಟಿ ಟಿ, ಎಂ. ಜಯರಾಮ ಭಂಡಾರಿ, ಪುರಂದರ ಶೆಟ್ಟಿ, ಮಂಜುನಾಥ ರೈ.ಎನ್., ರಾಜು ಶೆಟ್ಟಿ ಬೆಂಗತ್ಯಾರು, ಜಯರಾಮ ಶೆಟ್ಟಿ ಮುಂಡಾಡಿ ಗುತ್ತು, ವಿಜಯ ಶೆಟ್ಟಿ ಉಪಸ್ಥಿತರಿದ್ದರು. ನಿರ್ದೇಶಕರಾದ ನೊಚ್ಚ ಪ್ರಕಾಶ್ ಶೆಟ್ಟಿ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಜಯ ಶೆಟ್ಟಿ ವಂದಿಸಿದರು.
ನಿರ್ದೇಶಕ ರಘುರಾಮ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಬಾಕ್ಸ್ 36,000ಕ್ಕೂ ಮಿಕ್ಕಿ ಸದಸ್ಯತ್ವವಿಜಯ ಕ್ರೆಡಿಟ್ ಸೊಸೈಟಿ ದಕ್ಷಿಣ ಕನ್ನಡ ಮತ್ತು ಉಡುಪಿ ಉಭಯ ಜಿಲ್ಲೆಯಲ್ಲಿ ಬಲಿಷ್ಠ ಸಂಸ್ಥೆಯಾಗಿ ಬೆಳೆಯುತ್ತಿದೆ. ಸೊಸೈಟಿಯಲ್ಲಿ 450 ಕೋಟಿ ಠೇವಣಿ ಇದ್ದು, ರೂ. 340 ಕೋಟಿ ಸಾಲ ನೀಡಿದ್ದೇವೆ. ರೂ. 790 ಕೋಟಿ ದಾಖಲೆಯ ವ್ಯವಹಾರ ಮಾಡಿ, ಈ ವರ್ಷ 5 ಕೋಟಿಗೂ ಅಧಿಕ ಲಾಭ ಬಂದು ಸದಸ್ಯರಿಗೆ ಶೇ.18% ಡಿವಿಡೆಂಟ್ ನೀಡಿದ್ದೇವೆ.
36,000ಕ್ಕೂ ಮಿಕ್ಕಿ ಸದಸ್ಯತ್ವ ಇದೆ. ನಾನು ಪ್ರಾರಂಭದಲ್ಲಿ ಈ ಸೊಸೈಟಿ ಉದ್ಯೋಗಿಯಾಗಿ ನಂತರ ಪ್ರಬಂಧಕನಾಗಿ, ಆಮೇಲೆ ಕಾರ್ಯ ನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಆಮೇಲೆ ಬಿಸಿನೆಸ್ ಪ್ರಾರಂಭಿಸಿ ಇದೀಗ ಸೊಸೈಟಿ ಅಧ್ಯಕ್ಷನಾಗಿದ್ದೇನೆ. ನನ್ನೊಂದಿಗೆ ಅನುಭವಿ ನಿರ್ದೇಶಕರ ತಂಡ ಇದ್ದು ಒಳ್ಳೆಯ ರೀತಿಯಲ್ಲಿ ಸಂಸ್ಥೆ ಬೆಳೆಯುತ್ತಾ ಇದೆ.- ಅಜಿತ್ ಜಿ ಶೆಟ್ಟಿ ಕೊರಾರು, ಅಧ್ಯಕ್ಷರು












