October 23, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಅ. 25: ಎಕ್ಸೆಲ್ ಟ್ರೋಫಿ ಮಕ್ಕಳ ಅಂತರ ಶಾಲಾ ಚದುರಂಗ ಸ್ಪರ್ಧೆ

ಗುರುವಾಯನಕೆರೆ: ಎಕ್ಸೆಲ್ ಟೆಕ್ನೊ ಸ್ಕೂಲ್, ಗುರುವಾಯನಕೆರೆ, ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್, ಕಾಪು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಅಸೋಸಿಯೇಷನ್ ಇವರ ಆಶ್ರಯದಲ್ಲಿ ಎಕ್ಸೆಲ್ ಟ್ರೋಫಿ ಮಕ್ಕಳ ಅಂತರಶಾಲಾ ಚದುರಂಗ ಸ್ಪರ್ಧೆಯು ಅ. 25ರಂದು ಎಕ್ಸೆಲ್ ಟೆಕ್ನೊ ಸ್ಕೂಲ್‌ನಲ್ಲಿ ನಡೆಯಲಿದೆ.

ಸ್ಪರ್ಧೆಯು 7, 9, 11, 13 ಮತ್ತು 16 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ವಿಭಾಗಗಳಲ್ಲಿ ನಡೆಯಲಿದ್ದು, ಪ್ರತಿ ವಿಭಾಗದಲ್ಲಿ 10 ಬಾಲಕರಿಗೆ ಹಾಗೂ 7 ಬಾಲಕಿಯರಿಗೆ ಬಹುಮಾನ ನೀಡಲಾಗುವುದು. ಒಟ್ಟು ₹15,020 ನಗದು ಬಹುಮಾನಗಳನ್ನು ವಿತರಿಸಲಾಗುವುದು.

ಚದುರಂಗ ಕ್ರೀಡೆಯ ಮೂಲಕ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ತಾರ್ಕಿಕ ಚಿಂತನೆ ಹಾಗೂ ಬೌದ್ಧಿಕ ಸಾಮರ್ಥ್ಯವನ್ನು ಬೆಳೆಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ 9731230323 ಅಥವಾ 9606455769 ಸಂಖ್ಯೆಯನ್ನು ಸಂಪರ್ಕಿಸಬಹುದು. ನೋಂದಣಿಗೆ ಕೊನೆಯ ದಿನಾಂಕ – 24-10-2026 ನೋಂದಣಿ‌ ಶುಲ್ಕ: 500

Related posts

ಇಂದಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಚುನಾವಣೆ: ಸತತ ಎರಡನೇ ಅವಧಿಗೆ ಅಧಿಕಾರ ಹಿಡಿದ ಬಿಜೆಪಿ ಬೆಂಬಲಿತರು

Suddi Udaya

ಎಸ್.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಉದ್ಯೋಗ ನೇಮಕಾತಿ ತರಬೇತಿ ಕಾರ್ಯಾಗಾರ

Suddi Udaya

ಬೆಳ್ತಂಗಡಿ : ತೋಟಗಾರಿಕೆ ಬೆಳೆಗಳಿಗೆ ರಿಯಾಯಿತಿ ದರದಲ್ಲಿ ಔಷಧಿಗಳು ಲಭ್ಯ

Suddi Udaya

ಕಕ್ಕಿಂಜೆ: ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ವಲಯ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಮಚ್ಚಿನ ಗ್ರಾ.ಪಂ., ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಸಂಯೋಗದಲ್ಲಿ ಆಧಾರ್ ಶಿಬಿರ

Suddi Udaya

ಕಸ ಹಾಕಿದವರಿಗೆ ದಂಡ ಹಾಕಿದ ಲಾಯಿಲ ಗ್ರಾಮ ಪಂಚಾಯತ್

Suddi Udaya
error: Content is protected !!