September 6, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಉಚ್ಚಿಲದಲ್ಲಿ ಭೀಕರ ರಸ್ತೆ ಅಪಘಾತ: ಬೈಕ್ ಸವಾರ ಮಾಲಾಡಿ ನಿವಾಸಿ ರಮೇಶ್ ಹೆಗ್ಡೆ ಮೃತ್ಯು

ಬೆಳ್ತಂಗಡಿ: ಉಚ್ಚಿಲ ಪೇಟೆಯಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮಾಲಾಡಿ ಗ್ರಾಮದ ಕೊಲ್ಪದಬೈಲು ನಿವಾಸಿ ಬೈಕ್ ಸವಾರ ರಮೇಶ್ ಹೆಗ್ಡೆ (52 ವರ್ಷ) ರವರು ಸಾವನ್ನಪ್ಪಿರುವ ಘಟನೆ ಇಂದು (ಸೆ.30) ಬೆಳಗ್ಗೆ ನಡೆದಿದೆ.

ಘಟನೆ ವಿವರ: ಬೆಳಗ್ಗೆ 6 ಸುಮಾರಿಗೆ ಉಡುಪಿಯಿಂದ ಮಂಗಳೂರು ಕಡೆ ಹೋಗುತ್ತಿದ್ದ ಬೈಕ್ ಗೆ ಉಚ್ಚಿಲ ಪೇಟೆಯ ಕೆನರಾ ಬ್ಯಾಂಕಿನ ಎ.ಟಿ.ಎಂ ಮುಂದೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಈ ವೇಳೆ ಬೈಕ್ ಸವಾರನ ಮೇಲೆ ಬೇರೆ ವಾಹನ ಕೂಡ ಹರಿದು ಹೋಗಿದೆ ಎನ್ನಲಾಗಿದೆ. ಅಂಬ್ಯುಲೆನ್ಸ್ ಮೂಲಕ ಪಡುಬಿದ್ರೆ ಶವಾಗಾರಕ್ಕೆ ಸಾಗಿಸಿದ್ದಾರೆ. ಈ ವೇಳೆ ಪಡುಬಿದ್ರೆ ಪೊಲೀಸರು ಹಾಜರಿದ್ದರು. ಉಚ್ಚಿಲ ದಸರಾ ವೇಳೆ ಚರುಂಬುರಿ ವ್ಯಾಪಾರ ನಡೆಸುತ್ತಿದ್ದ ಇವರು ಇಂದು ಊರಿಗೆ ಬರುತ್ತಿರುವ ಸಂದರ್ಭ ಈ ಘಟನೆ ನಡೆದಿದೆ.

ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Related posts

ಕುವೆಟ್ಟು ಸ.ಉ.ಪ್ರಾ. ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ನಿಡ್ಲೆ ಶೀರೂರು ಪರ್ಯಾಯ ಸ್ವಾಗತ ಸಮಿತಿಯಿಂದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ಹುಟ್ಟೂರ ಗೌರವಾರ್ಪಣೆ

Suddi Udaya

ಶ್ರೀ ಕೃಷ್ಣ ಕುಂಬಾರರ ಗೆಳೆಯರ ಬಳಗ ಚಾರ್ಮಾಡಿ ವಲಯದಿಂದ ಪುರುಷರ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾಟ ಮತ್ತು ನೃತ್ಯ ಸ್ಪರ್ಧೆ

Suddi Udaya

ಧರ್ಮಸ್ಥಳ: ಶ್ರೀ ಮಂ.ಅ. ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಅಭಿಯಾನ ಹಾಗೂ ಕನಕದಾಸ ಜಯಂತಿ ಕಾರ್ಯಕ್ರಮ

Suddi Udaya

ಪರೀಕ ಆತ್ರಾಡಿ ಮಸೀದಿಯಿಂದ ಶ್ರೀನಿವಾಸ ದೇವಸ್ಥಾನದವರೆಗೆ ಅಗಲೀಕರಣದೊಂದಿಗೆ ಡಾಮರೀಕರಣಕ್ಕೆ ಚಾಲನೆ

Suddi Udaya

ಗೇರುಕಟ್ಟೆ: ಅಂಚೆ ಪತ್ರ ವಿತರಕ ಡಾಕಯ್ಯ ಗೌಡ ಸೇವಾ ನಿವೃತ್ತಿ, ಇಲಾಖೆ ಹಾಗೂ ಸ್ಥಳೀಯರ ವತಿಯಿಂದ ಸನ್ಮಾನ

Suddi Udaya
error: Content is protected !!