ಬೆಳ್ತಂಗಡಿ: ಜೈ ಶ್ರೀರಾಮ್ ಗೆಳೆಯರ ಬಳಗ ಶ್ರೀರಾಮನಗರ ಬಂದಾರು ಇದರ ಹೆಮ್ಮೆಯ ಸದಸ್ಯರಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ತನ್ನದೆ ಆದ ಹೆಸರು ಮಾಡಿಕೊಂಡು ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ ಚಂದ್ರಹಾಸ ಕುಂಬಾರ ಬಂದಾರು ಇವರ ದ್ವಿತೀಯ ಕೃತಿ “ಸ್ವಾತಿಮುತ್ತು” ಚುಟುಕುಗಳ ಹನಿ ಅ.22 ರಂದು ಮಾಣಿಲ ಕ್ಷೇತ್ರದಲ್ಲಿ ಶ್ರೀ ಮೋಹನದಾಸ ಸ್ವಾಮೀಜಿಯವರ ದಿವ್ಯ ಹಸ್ತದಿಂದ ಬಿಡುಗಡೆ ಮಾಡಲಾಯಿತು.
ಈ ಚುಟುಕು ಹನಿಗೆ ತುಳುನಾಡ ಕಂಚಿದ ಸ್ವರಬಿರ್ಸೆ ಎನ್ನುವ ಹೆಸರು ಪಡೆದ ಎಚ್.ಕೆ ನಯನಾಡು ಇವರು ಮುನ್ನುಡಿ ಬರೆದು
ಸಾಹಿತಿಗಳಾದ ಶ್ಯಾಮ್ ಪ್ರಸಾದ್ ಭಟ್ ಉಡುಪಿ ಇವರು ಬೆನ್ನುಡಿ ಬರೆದಿರುತ್ತಾರೆ. ಹಾಗೂ ಈ ಪುಸ್ತಕದ ಮುಖಪುಟವನ್ನು ಸಾಹಿತಿಗಳು ಪದ್ಮನಾಭ ಪೂಜಾರಿ ಬಂಟ್ವಾಳ ಇವರು ವಿನ್ಯಾಸ ಮಾಡಿರುತ್ತಾರೆ.
ದೀಕ್ಷಿತ್ ಎರ್ಮಾಳ ಇವರು ಮಂಜುಶ್ರೀ ಪ್ರಿಂಟರ್ಸ್ ಉಜಿರೆ ಇಲ್ಲಿ ಮುದ್ರಣ ಮಾಡಿರುತ್ತಾರೆ.
ಕೃತಿ ಬಿಡುಗಡೆಯ ಸಮಯದಲ್ಲಿ ನಾಡೋಜ ಮಹೇಶ್ ಜೋಶಿ, ಎಚ್.ಕೆ ನಯನಾಡು, ವಕೀಲರು ಉದಯ್ ಕುಮಾರ್ ಬಿ.ಕೆ, ಜೈ ಶ್ರೀರಾಮ್ ಗೆಳೆಯರ ಬಳಗದ ಅಧ್ಯಕ್ಷ ಶ್ರೀಧರ್ ಬಿ.ಕೆ ಜೊತೆಗಿದ್ದರು.













