ನಾವೂರು ಶ್ರೀ ಗೋಪಾಲಕೃಷ್ಣ ಸೇವಾ ಟ್ರಸ್ಟ್ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59 ನೇ ವರ್ಧಂತ್ಯುತ್ಸವ ಸಂಭ್ರಮದ ಪ್ರಯುಕ್ತ ಅವರನ್ನು ಇಂದು ಕ್ಷೇತ್ರದಲ್ಲಿ ಭೇಟಿಯಾಗಿ ಗೌರವಾರ್ಪಣೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಎ.ಬಿ ಉಮೇಶ್, ಉಪಾಧ್ಯಕ್ಷರಾದ ಶ್ರೀಮತಿ ತನುಜಾ ಶೇಖರ್, ಗಣೇಶ್ ಕಣಾಲು, ಪ್ರಧಾನ ಕಾರ್ಯದರ್ಶಿ ಧರ್ಣಪ್ಪ ಮೂಲ್ಯ, ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಡಾ. ಪ್ರದೀಪ್, ಸೂರ್ಯನಾರಾಯಣ ಭಟ್, ಹಾಗೂ ವಿಜಯ್ ಕುಲಾಲ್ ಮತ್ತು ಚಂದ್ರಿಕಾ ವಿಜಯ್ ಉಪಸ್ಥಿತರಿದ್ದರು.













