26.1 C
ಪುತ್ತೂರು, ಬೆಳ್ತಂಗಡಿ
October 25, 2026
Uncategorizedಗ್ರಾಮಾಂತರ ಸುದ್ದಿತಾಲೂಕು ಸುದ್ದಿಧಾರ್ಮಿಕವರದಿ

ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ಮತ್ತು ಸಿರಿಗಳ ದೇವಸ್ಥಾನದ ಜೀರ್ಣೋದ್ದಾರಕ್ಕೆ ‘ಬನತ ಭೈರವೆ’ ನಾಟಕ: ಅಳದಂಗಡಿಯಲ್ಲಿ ನಾಟಕದ ಪೋಸ್ಟರ್ ಮತ್ತು ಟಿಕೆಟ್ ಬುಕ್ ಬಿಡುಗಡೆ

ಶಿರ್ಲಾಲು: ಶ್ರೀ ಮಹಾಲಿಂಗೇಶ್ವರ ಮತ್ತು ಸಿರಿಗಳ ದೇವಸ್ಥಾನ, ಹುರುಂಬಿದೊಟ್ಟು ಶಿರ್ಲಾಲು ಕ್ಷೇತ್ರದ ಜೀರ್ಣೋದ್ದಾರದ ಪ್ರಯುಕ್ತ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಆರ್ಥಿಕ ಸಂಪನ್ಮೂಲ ಸಂಗ್ರಹಿಸುವ ಉದ್ದೇಶದಿಂದ ಡಿ. 22ರಂದು ಮಂಗಳೂರಿನ ಉರ್ವ ಚಿಲಿಂಬಿಯ ಸಾಯಿ ಶಕ್ತಿ ಕಲಾಬಳಗದ ವತಿಯಿಂದ ‘ಬನತ ಭೈರವೆ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

ನಾಟಕದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಅ. 25ರಂದು ಅಳದಂಗಡಿಯ ಶ್ರೀ ಸತ್ಯದೇವತಾ ದೈವಸ್ಥಾನದಲ್ಲಿ ನಡೆಯಿತು. ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತದಾರರಾದ ಶಿವಪ್ರಸಾದ ಅಜಿಲರು ಪೋಸ್ಟರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.ಅಳದಂಗಡಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಸದಾನಂದ ಪೂಜಾರಿ ಉಂಗಿಲಬೈಲು ಹಾಗೂ ಆಮಂತ್ರಣ ಸಾಂಸ್ಕೃತಿಕ ಸೇವಾ ಪ್ರತಿಷ್ಠಾನದ ವಿಜಯಕುಮಾರ್ ಜೈನ್ ಅವರು ನಾಟಕದ ಟಿಕೆಟ್ ಬುಕ್ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಹುರುಂಬಿದೊಟ್ಟು ದೇವಸ್ಥಾನದ ಆಡಳಿತ ಮೊಕ್ತೇಸರ ಹರ್ಷ ಆರ್. ಜೈನ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಕುಮಾರ್ ಜೈನ್ ಹಿತ್ತಿಲು ಮನೆ,ಕಾರ್ಯದರ್ಶಿಯಾದ ರಾಜೇಶ್ ನೂಜಿಗೆ, ಕೋಶಾಧಿಕಾರಿಯಾದ ಶೀತಲ್ ಕುಮಾರ್ ಜ್ಯೆನ್, ಪ್ರದೀಪ್ ಪೇರಲ್ದಡಿ, ಪ್ರಭಾಕರ ಕುಲಾಲ್ ಶ್ರೀ ಸಾಯಿ, ಮಾಧವ ಕುಲಾಲ್ ಬಗ್ಯೊಟ್ಟು, ನಂದ ಕುಮಾರ್ ನಲ್ಲಾರು, ಜನಾರ್ಧನ ಪಲ್ಲದಲ್ಕೆ, ರಮೇಶ್ ನೂಜಿಗೆ, ಸುರೇಶ್ ಕುಲಾಲ್ ಕಂಬ್ಲದಡ್ಡ, ಸುಧಾಕರ ಗುರುಮಜಲು, ಪೂವಪ್ಪ ಸಾಲಿಯಾನ್ ಪಲ್ಲದಲ್ಕೆ,ರವಿ ಚಂದ್ರ ಕುರೆವೂರು, ಉಮೇಶ್ ಸಾಲಿತ್ಲು. ಸಚಿನ್ ಮಾಂತ್ಯೋಲು, ಧರ್ಣಪ್ಪ ದೋರಿಂಜ, ಹಾಗು ಊರ ಭಕ್ತಾದಿಗಳು ಇತರರು ಉಪಸ್ಥಿತರಿದ್ದರು.ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ರಾಜೇಶ್ ನೂಜಿಗೆ ಸ್ವಾಗತಿಸಿ, ವಂದಿಸಿದರು.

Related posts

ರಾಜ್ಯ ಸರಕಾರಿ ನೌಕರರ ಸಂಘ ಬೆಳ್ತಂಗಡಿ ಶಾಖೆಯ ಅಧ್ಯಕ್ಷ ಚುನಾವಣೆಗೆ ವಿಘ್ನ : ಪೊಲೀಸ್ ಠಾಣೆಯ ಮೇಟ್ಟಿಲೇರಿದ ಮತದಾರರ ಪಟ್ಟಿಯ ವಿವಾದ

Suddi Udaya

ಬ್ರೈಟ್ ಹೊರೈಝನ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭೆಗೆ ‘ವಿಂಗ್ಸ್ ಆಫ್ ವಿಸ್ಡಮ್’ ವೇದಿಕೆ

Suddi Udaya

ಜೆ ಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಎಸ್ ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಸತತ 2ನೇ ಬಾರಿಗೆ ಸುರಕ್ಷಿತ ಹೆರಿಗೆಯನ್ನು ಖಾತ್ರಿಪಡಿಸುವ ಮಾನ್ಯತಾ ಪ್ರಮಾಣಪತ್ರ

Suddi Udaya

ಕುಸಿಯುವ ಮೊದಲು ಹೊಸ ಸೇತುವೆ ನಿರ್ಮಾಣವಾಗುವುದೇ…? ಚುನಾವಣೆ ಬಹಿಷ್ಕಾರ ಹಾಕಿದರೂ ಕ್ಯಾರೇ ಅನ್ನದ ಅಧಿಕಾರಿಗಳು…!!!

Suddi Udaya

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ: ಬಿ.ಸಿ.ರೋಡಿನಿಂದ ದೇವರ ಆಭರಣ, ಉತ್ಸವ ಮೂರ್ತಿ ಮೆರವಣಿಗೆ

Suddi Udaya
error: Content is protected !!