September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ದಿ| ಕಾಶಿ ಶೆಟ್ಟಿ ಸ್ಮರಣಾರ್ಥ ದೇವನಾರಿ ಬಂಗಾಡಿ ಸ. ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಯೂನಿಫಾರ್ಮ್ ವಿತರಣೆ

ಇಂದಬೆಟ್ಟು : ಸಮಾಜ ಸೇವಕ ಹಾಗೂ ಉದ್ಯಮಿ ಬರೋಡ ಶಶಿಧರ್ ಶೆಟ್ಟಿ ಅವರ ವತಿಯಿಂದ ದೇವನಾರಿ ಬಂಗಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 60 ವಿದ್ಯಾರ್ಥಿಗಳಿಗೆ ಉಚಿತ ಯೂನಿಫಾರ್ಮ್ (ಟಿ-ಶರ್ಟ್ ಮತ್ತು ಪ್ಯಾಂಟ್) ವಿತರಿಸಲಾಯಿತು.

ತಮ್ಮ ತಾಯಿ ದಿ| ಕಾಶಿ ಶೆಟ್ಟಿ ಅವರ ಸ್ಮರಣಾರ್ಥವಾಗಿ ಈ ಯೂನಿಫಾರ್ಮ್‌ಗಳನ್ನು ಶಾಲೆಯ ವಿದ್ಯಾರ್ಥಿಗಳಿಗೆ ದೇಣಿಗೆಯಾಗಿ ನೀಡಲಾಗಿದೆ. ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಈ ನೆರವು ಒದಗಿಸಲಾಗಿದೆ.

ಯೂನಿಫಾರ್ಮ್ ವಿತರಣೆಯ ವ್ಯವಸ್ಥೆಯನ್ನು ಕುವೆಟ್ಟು ಗ್ರಾಮ ಪಂಚಾಯತ್‌ ಮಾಜಿ ಉಪಾಧ್ಯಕ್ಷ ಪ್ರದೀಪ್‌ ಶೆಟ್ಟಿ ಅವರು ಮಾಡಿಕೊಟ್ಟು, ದಾನಿಗಳ ಪರವಾಗಿ ಶಾಲೆಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ದಾನಿ ಶಶಿಧ‌ರ್ ಶೆಟ್ಟಿ ಅವರ ಸಾಮಾಜಿಕ ಕಾಳಜಿಯನ್ನು ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಕಲ್ಯಾಣಕ್ಕಾಗಿ ಇಂತಹ ದಾನಿಗಳ ಸಹಕಾರವು ಮಾದರಿಯಾಗಿದೆ.

Related posts

ಹೆದ್ದಾರಿ ಕಾಮಗಾರಿಗಳು ಪ್ರಗತಿಯಲ್ಲಿದ್ದು ಮಳೆಗಾಲ ಪ್ರಾರಂಭ ಮುನ್ನ ಮುನ್ನೆಚ್ಚರಿಕೆ ವಹಿಸುವಂತೆ  ಜಿಲ್ಲಾಧಿಕಾರಿ ಮುಲೈ ಮುಗಿಲನ್ ರವರಿಗೆ ಬ್ರಿಜೇಶ್ ಚೌಟ ಮನವಿ

Suddi Udaya

ಚಾರ್ಮಾಡಿ ಅರಣ್ಯದಲ್ಲಿ ಭಾರೀ ಬೆಂಕಿ

Suddi Udaya

ಜೈನರಿಗೆ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಹಿರಿಯೂರಿನ ಶಾಸಕ ಡಿ. ಸುಧಾಕರ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನವನ್ನು ನೀಡಿ: ನಿರಂಜನ್ ಜೈನ್ ಕುದ್ಯಾಡಿ‌

Suddi Udaya

ಕಳೆಂಜ: ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ್ ಆಗಿ ಧನಂಜಯ ಗೌಡ ಆಯ್ಕೆ

Suddi Udaya

ಜು.19: ಡಾಕ್ಯುಮೆಂಟರಿ ಪ್ರದರ್ಶನ ಮತ್ತು ಕುದ್ಕ ಬಚ್ಚಿರೆ ಪುಸ್ತಕ ಬಿಡುಗಡೆ

Suddi Udaya

ಮೇಲಂತಬೆಟ್ಟು: ಪಕ್ಕಿದಕಲ ನವೋದಯ ಯುವಕ & ಯುವತಿ ಮಂಡಲದ 27ನೇ ವರ್ಷದ ಸಾರ್ವಜನಿಕ ಆಟೋಟ ಸ್ಪರ್ಧೆ ಹಾಗೂ ಮೋಟೋಕ್ರಾಸ್ 2025 ಪೋಸ್ಟರ್ ಬಿಡುಗಡೆ

Suddi Udaya
error: Content is protected !!