26.1 C
ಪುತ್ತೂರು, ಬೆಳ್ತಂಗಡಿ
October 25, 2026
ಚಿತ್ರ ವರದಿಧಾರ್ಮಿಕವರದಿ

ಅಯೋಧ್ಯೆಯ ಕನ್ಯಾಡಿ ಶ್ರೀರಾಮ ಮಠಕ್ಕೆ ಮಸ್ಕತ್ ಭಕ್ತರಿಂದ ರೂ.10 ಲಕ್ಷ ದೇಣಿಗೆ ಸಮರ್ಪಣೆ

ಕನ್ಯಾಡಿ: ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಮಹತ್ವಾಕಾಂಕ್ಷೆಯ ಯೋಜನೆಯಾದ ಪುಣ್ಯಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಕನ್ಯಾಡಿ ಶ್ರೀರಾಮ ಶಾಖಾ ಮಠದ ಕನಸಿಗೆ ಮಸ್ಕತ್‌ನ ರಾಮಭಕ್ತರು ಭಕ್ತಿಯ ಸೇತುವೆ ಕಟ್ಟಿದ್ದಾರೆ. ಒಗ್ಗಟ್ಟಿನಿಂದ ಸಂಗ್ರಹಿಸಿದ ₹10 ಲಕ್ಷಕ್ಕೂ ಅಧಿಕ ಮೊತ್ತದ ಬೃಹತ್ ದೇಣಿಗೆಯನ್ನು ಶ್ರೀಕ್ಷೇತ್ರದಲ್ಲಿ ಪರಮಪೂಜ್ಯ ಶ್ರೀಮಂಡಲೇಶ್ವರ ಬ್ರಹ್ಮಾನಂದ ಸ್ವಾಮೀಜಿ ಮಹಾರಾಜ್ ಅವರ ಪಾದಕಮಲಗಳಿಗೆ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಸಮರ್ಪಿಸಲಾಯಿತು.

ಈ ಪುಣ್ಯ ಕಾರ್ಯದ ರೂವಾರಿ, ಒಮಾನ್ ಬಿಲ್ಲವಾಸ್ ಮಸ್ಕತ್‌ನ ಮಾಜಿ ಅಧ್ಯಕ್ಷರು ಹಾಗೂ ಮಹಾಸಂಸ್ಥಾನದ ಗಲ್ಫ್ ರಾಷ್ಟ್ರಗಳ ಉಪಾಧ್ಯಕ್ಷರಾದ ಸುಜಿತ್ ಅಂಚನ್ ಪಾಂಗಾಳ ಅವರು ಭಕ್ತರ ಪರವಾಗಿ ದೇಣಿಗೆಯನ್ನು ಹಸ್ತಾಂತರಿಸಿದರು.

ಅವರ ನೇತೃತ್ವ, ಸಂಘಟನಾ ಚತುರತೆ ಮತ್ತು ರಾಮಸೇವೆಯ ಕಳಕಳಿಗೆ ನೆರೆದಿದ್ದ ಗಣ್ಯರೆಲ್ಲರೂ ಮುಕ್ತಕಂಠದಿಂದ ಶ್ಲಾಘನೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬ್ರಹ್ಮಾವರ ಬಿಲ್ಲವ ಸಂಘದ ಅಧ್ಯಕ್ಷ ಬಿ.ಎನ್. ಶಂಕರ್ ಪೂಜಾರಿ, ಶ್ರೀರಾಮ ಪೂಜಾರಿ ಕಲ್ಯಾಣಪುರ, ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಮಹೇಶ್ ಅಂಚನ್, ಜಿಲ್ಲಾ ಬಿಲ್ಲವ ಮಹಾಮಂಡಲದ ಅಧ್ಯಕ್ಷೆ ಗೀತಾಂಜಲಿ ಸುವರ್ಣ, ಜಯಂತ್ ಕೋಟ್ಯಾನ್ , ರಂಜೀತ್ ಪೂಜಾರಿ ತೋಡಾರ್, ಬೆಳ್ತಂಗಡಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಮಂಜುನಾಥ್ ಸಾಲ್ಯಾನ್, ಉದ್ಯಮಿ ಕಾಮರಾಜ್ ಸುವರ್ಣ, ಬಾಲಕೃಷ್ಣ ಕೋಟ್ಯಾನ್ , ಬಿರುವೆರ್ ಕಾಪು ಸಮಿತಿಯ ಸ್ಥಾಪಕಾಧ್ಯಕ್ಷ ಬಾಲಕೃಷ್ಣ ಕೋಟಿಯನ್, ಮಜೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಭಾಸ್ಕರ ಪೂಜಾರಿ, ರಿತೇಶ್ ಕೋಟ್ಯಾನ್, ಶುಭ ರಾಜೇಂದ್ರ ಚಿಲಿಂಬಿ, ಸುರೇಂದ್ರ ಅಂಚನ್, ಉಮೇಶ್ ಬಂಗೇರ ಹಾಗೂ ದೀಪಕ್‌ರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸಭಿಕರನ್ನು ಹೃದಯಪೂರ್ವಕವಾಗಿ ಸ್ವಾಗತಿಸಿದ ಪರಮಪೂಜ್ಯ ಸ್ವಾಮೀಜಿಯವರು, “ಸಮುದ್ರದಾಚೆ ಇದ್ದರೂ ಸಂಸ್ಕೃತಿಯನ್ನು ಮರೆತಿಲ್ಲ, ರಾಮನನ್ನು ಮರೆತಿಲ್ಲ ಎನ್ನುವುದಕ್ಕೆ ಮಸ್ಕತ್ ಭಕ್ತರ ಈ ಕೊಡುಗೆ ಜೀವಂತ ಉದಾಹರಣೆ. ಇದು ಕೇವಲ ಹಣವಲ್ಲ, ಇದು ಅಯೋಧ್ಯೆಯಲ್ಲಿ ತುಳಸಿ ಗಿಡವಾಗಿ, ಇಟ್ಟಿಗೆಯಾಗಿ, ಗೋಪುರವಾಗಿ ಬೆಳೆಯುವ ಭಕ್ತಿ” ಎಂದು ಹೃದಯಸ್ಪರ್ಶಿಯಾಗಿ ಆಶೀರ್ವದಿಸಿದರು.

Related posts

ಆ.28: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ಶ್ರೀ ದುರ್ಗಾದೇವಿಯ ಸನ್ನಿಧಿಗೆ ಆಗಮಿಸುತ್ತಿರುವ ಧರ್ಮಸ್ಥಳದ ಶ್ರದ್ಧಾ ಅಮಿತ್

Suddi Udaya

ಪಿಲಾತಬೆಟ್ಟು ಸಂತ ಜೋಸೆಫರ ಅ.ಹಿ.ಪ್ರಾ. ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಶ್ರೀ ಧ. ಮಂ. ಆಂ.ಮಾ. ಶಾಲೆಯಲ್ಲಿ ಸನ್ ರೈಸ್ ಡೇ ಹಾಗೂ ಸ್ಕಾಪ್೯ ಡೇ

Suddi Udaya

ಬೆಳ್ತಂಗಡಿ : ರೆಂಕೆದಗುತ್ತು ನಿವಾಸಿ ಉದಯ ಪೂಜಾರಿ ನಿಧನ

Suddi Udaya

ಪದ್ಮುಂಜ ಸಿ ಎ ಬ್ಯಾಂಕ್ ನಲ್ಲಿ ಅಡಿಕೆ ಬೆಳೆ ಮತ್ತು ಕಾಳುಮೆಣಸು ಬೆಳೆಗಳ ಆಧುನಿಕ ಬೇಸಾಯ ಕ್ರಮದ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ

Suddi Udaya

ಎಸ್ ಎಸ್ ಎಲ್ ಸಿ ಫಲಿತಾಂಶ: ಉರುವಾಲು ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.100 ಫಲಿತಾಂಶ

Suddi Udaya
error: Content is protected !!