ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 59 ನೇ ಪಟ್ಟಾಭಿಷೇಕದ ವರ್ಧಂತ್ಯುತ್ಸವದ ಪ್ರಯುಕ್ತ ಲಯನ್ಸ್ ಕ್ಲಬ್ ಬೆಳ್ತಂಗಡಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ರಘುರಾಮ ಶೆಟ್ಟಿ ಸಾಧನ, ಕಾರ್ಯದರ್ಶಿ ಅಮಿತಾನಂದ ಹೆಗ್ಡೆ, ಕೋಶಾಧಿಕಾರಿ ನಾಣ್ಯಪ್ಪ ನಾಯ್ಕ್, ಮಾಜಿ ಪ್ರಾಂತೀಯ ಅಧ್ಯಕ್ಷರುಗಳಾದ ಧರಣೇಂದ್ರ ಕೆ ಜೈನ್, ವಸಂತ ಶೆಟ್ಟಿ ಶ್ರದ್ಧಾ, ಮಾಜಿ ಅಧ್ಯಕ್ಷರುಗಳಾದ ರಾಮಕೃಷ್ಣ ಗೌಡ, ಜಯರಾಮ್ ಭಂಡಾರಿ ಎಂ., ಹೇಮಂತ ರಾವ್ ಎರ್ಡೂರ್, ರವೀಂದ್ರ ಶೆಟ್ಟಿ ಬಳಂಜ, ಲಯನ್ಸ್ ಸದಸ್ಯರುಗಳಾದ ಭುಜಬಲಿ ಧರ್ಮಸ್ಥಳ, ಗೋಪಾಲಕೃಷ್ಣ ಕಾಂಚೋಡು, ಎನ್. ಪಿ. ತಂಗಚ್ಚನ್ ಉಪಸ್ಥಿತರಿದ್ದರು.













