31.4 C
ಪುತ್ತೂರು, ಬೆಳ್ತಂಗಡಿ
October 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನ.1: ಪುಂಜಾಲಕಟ್ಟೆ ಗೆಳೆಯರ ಬಳಗ ಸಹಕಾರ ಸಂಘ ಉದ್ಘಾಟನೆ: ಸಂಘದ ನೂತನ ಅಧ್ಯಕ್ಷರಾಗಿ ನೆಲ್ವಿಸ್ಟರ್ ಗ್ಲಾನ್ ಪಿಂಟೊ

ಪುಂಜಾಲಕಟ್ಟೆ: ಗೆಳೆಯರ ಬಳಗ ಸಹಕಾರ ಸಂಘ ನಿಯಮಿತ ಪುಂಜಾಲಕಟ್ಟೆ ಇದರ ಉದ್ಘಾಟನೆಯು ನ.1 ರಂದು ಅಮೀರ್ ಕಾಂಪ್ಲೆಕ್ಸ್ ಪುಂಜಾಲಕಟ್ಟೆಯಲ್ಲಿ ನಡೆಯಲಿದೆ.

ಗೆಳೆಯರ ಬಳಗ ಸೇವಾ ಸಂಸ್ಥೆ ನಯನಾಡು ನೂರಾರು ಸಾಮಾಜಿಕ ಸೇವೆಗಳನ್ನು ನಡೆಸಿಕೊಂಡು ಬಂದಿದ್ದು, ಈ ಸಂಸ್ಥೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಯಾರೂ ಊಹಿಸದ ರೀತಿಯಲ್ಲಿ ಸಾಮಾಜಿಕ ಸೇವೆಯನ್ನು ನಡೆಸಿದೆ. ನಯನಾಡು ಗೆಳೆಯರ ಬಳಗ ಸೇವಾ ಸಂಸ್ಥೆ ಟ್ರಸ್ಟ್ ಸಾಧನೆ ಅಪಾರ. ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಪಿಲಾತ್ತಬೆಟ್ಟು ಗ್ರಾಮದ ನಯನಾಡು ಗೆಳೆಯರ ಬಳಗ ಸೇವಾ ಸಂಸ್ಥೆ ಟ್ರಸ್ಟ್ 2025ನೇ ಸಾಲಿನಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದೆ.

ಈ ಸಂಸ್ಥೆಯ ಗೆಳೆಯರ ಬಳಗ ಸಹಕಾರ ಸಂಘ ನಿ. ದ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ನಡೆಯಿತು. ಸಂಘದ ನೂತನ ಅಧ್ಯಕ್ಷರಾಗಿ ನೆಲ್ವಿಸ್ಟರ್ ಗ್ಲಾನ್ ಪಿಂಟೊ, ಗೌರವ ಸಲಹೆಗಾರರಾಗಿ ಜೊಯಲ್ ಲೋಬೋ, ಉಪಾಧ್ಯಕ್ಷರಾಗಿ ಅನಿಲ್ ರೋಶನ್ ಮೊರಾಸ್ ಆಯ್ಕೆಯಾಗಿದ್ದಾರೆ.

ನಿರ್ದೇಶಕರಾಗಿ ಮಧುಕರ ಶೆಟ್ಟಿ ಕೆ, ಜೀವನ್ ಫೆರ್ನಾಂಡಿಸ್, ವಸಂತ ಸಾಲಿಯಾನ್, ಪ್ರೇಮ್ ಲಾಯ್ಡ್ ಮಿರಾಂದ, ಲೋಕೇಶ್, ಅವಿಲ್ ಮೊರಾಸ್, ಜೋಯ್ಸ್ ಪಿಂಟೋ, ಸಂತೋಷ್ ಫೆರ್ನಾಂಡಿಸ್, ಡೈನಾ ಶರಲ್ ಡಿಸೋಜ ಆಯ್ಕೆ ಗೊಂಡಿದ್ದು, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಡೋನ್ ಪ್ರವೀಣ್ ಕ್ರಾಸ್ತ ನೇಮಕಗೊಂಡಿದ್ದಾರೆ.

Related posts

ಬೆಳ್ತಂಗಡಿ ಸ.ಪ್ರ.ದ. ಕಾಲೇಜಿನಲ್ಲಿ ಜೋಶ್ ಅಲುಕಾಸ್ ಸಂಸ್ಥೆಯಿಂದ ಉದ್ಯೋಗ ಮೇಳ

Suddi Udaya

ಮಾರ್ಗ ಮಧ್ಯೆ ಕೈಕೊಡುವ ಕೆ.ಎಸ್.ಆರ್.ಟಿ.ಸಿ : ಒಂದೇ ದಿನದಲ್ಲಿ ಆರು ಕಡೆಗಳಲ್ಲಿ ಕೆಟ್ಟು ನಿಂತ ಸಾರಿಗೆ ಬಸ್

Suddi Udaya

ವೈಯಕ್ತಿಕ ತೇಜೋವಧೆ ಸರಿಯಲ್ಲ: ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ

Suddi Udaya

ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ಒಂದು ಹಾಗೂ ಎರಡನೇ ತರಗತಿಯ ವಿದ್ಯಾರ್ಥಿಗಳಿಗೆ “ಮಕ್ಕಳಿಗಾಗಿ ಕಥೆ” ಕಾರ್ಯಕ್ರಮ

Suddi Udaya

ಅ.28: ಕುತ್ಲೂರು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸಮಗ್ರ ರಕ್ಷಣಾ ಯೋಜನೆ ಅಪಘಾತ ವಿಮಾ ಮೇಳ’

Suddi Udaya

ನಾರಾವಿ: ಸಂತ ಅಂತೋನಿ ಶಿಕ್ಷಣ ‘ಸಂಸ್ಥೆಗಳ ದಿನಾಚರಣೆ’

Suddi Udaya
error: Content is protected !!