31.4 C
ಪುತ್ತೂರು, ಬೆಳ್ತಂಗಡಿ
October 26, 2026
ತಾಲೂಕು ಸುದ್ದಿ

ಬಂದಾರು : ಸ.ಪ್ರ.ದ.ಕಾಲೇಜು ಬೆಳ್ತಂಗಡಿ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಸಂಪನ್ನ

ಬಂದಾರು : ಎನ್ ಎಸ್ ಎಸ್ ವಿಶೇಷ ಶಿಬಿರವು ವಿದ್ಯಾರ್ಥಿ ಜೀವನದಲ್ಲಿ ಮರೆಯಲಾಗದ ಅದ್ಭುತ ಅನುಭವಗಳನ್ನು ಕೊಡುತ್ತದೆ, ಶಿಬಿರವು ಸಮಯ ಪ್ರಜ್ಞೆ , ತಾಳ್ಮೆ, ಪರಸ್ಪರ ನಂಬಿಕೆ, ಸಹಕಾರ, ಒಗ್ಗಟ್ಟು, ಶ್ರಮ ಹಂಚಿಕೊಳ್ಳುವಿಕೆ ಸೇರಿದಂತೆ ಉತ್ತಮ ಶಿಸ್ತುಗಳನ್ನು ಕಲಿಸುವ ಮೂಲಕ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಬೆಳ್ತಂಗಡಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಮ್ ಹೇಳಿದರು.

ಅವರು ಸ.ಪ್ರ. ದರ್ಜೆ ಕಾಲೇಜು ಬೆಳ್ತಂಗಡಿ ಇವರ ವತಿಯಿಂದ “ವ್ಯಸನಮುಕ್ತ ಮತ್ತು ಕ್ಷಯ ಮುಕ್ತ ಯುವ ಜನತೆ” ಎಂಬ ಆಶಯದೊಂದಿಗೆ ಬಂದಾರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಅ.18ರಿಂದ 24ರವರೆಗೆ ನಡೆದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಶಿಬಿರಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಸಂಬಂಧಗಳ ಬೆಲೆಯೂ ಅರ್ಥವಾಗುತ್ತದೆ ಎಂದು ರಕ್ಷಿತ್ ಶಿವರಾಮ್ ಅಭಿಪ್ರಾಯಪಟ್ಟರು.
ಬೆಂಗಳೂರಿನ ಯುವ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ವಿದ್ಯಾರ್ಥಿಗಳು ಎನ್ ಎಸ್ ಎಸ್ ಶಿಬಿರವು ಕಲಿಸಿದ ಶಿಸ್ತುಗಳನ್ನು ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡು ರಾಷ್ಟ್ರದ ಸಂಪತ್ತುಗಳಾಗಿ ಬೆಳೆದು ಮಾತೃಭೂಮಿಯ ಋಣ ತೀರಿಸುವ ಆದರ್ಶ ಪ್ರಜೆಗಳಾಗಬೇಕು. ಹೊಸ ಆವಿಷ್ಕಾರ, ಹೊಸ ವಿಚಾರಧಾರೆಗಳಿಂದ ನಮ್ಮ‌ಹೆಮ್ಮೆಯ ಭಾರತ ಮತ್ತೊಮ್ಮೆ ಅಭಿವೃದ್ಧಿಯತ್ತ ದಾಪುಗಾಲಿಡುವಂತಾಗಬೇಕು, ನಮ್ಮ ಕನಸಿನ ಭಾರತಕ್ಕೆ ಶಕ್ತಿಯಾಗಿ ಹೊಸ ಹೊಸ ವಿಚಾರಗಳಿಗೆ ಒತ್ತು ನೀಡುವಂತಾಗಬೇಕು ಎಂದು ಕರೆ ನೀಡಿದರು.


ಬೆಳ್ತಂಗಡಿ ಸ.ಪ್ರ.ದ.ಕಾಲೇಜಿನ ಪ್ರಾಂಶುಪಾಲ ಪದ್ಮನಾಭ ಅಧ್ಯಕ್ಷತೆ ವಹಿಸಿ ಮಾತನಾಡಿ ವಾರ್ಷಿಕ ವಿಶೇಷ ಶಿಬಿರದ ಉದ್ದೇಶ ಮತ್ತು ಮಹತ್ವವನ್ನು ತಿಳಿಸಿದರು.
ಸಮಾರಂಭದಲ್ಲಿ ಬೆಳ್ತಂಗಡಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಮನ್ವಯಾಧಿಕಾರಿ ಬಸವಲಿಂಗಪ್ಪ ಟಿ.ಬಿ., ತಾ.ಪಂ.ಮಾಜಿ ಸದಸ್ಯ ಕೃಷ್ಣಯ್ಯ ಆಚಾರಿ, ಮುಖ್ಯ ಅತಿಥಿಗಳಾಗಿ ಪದ್ಮುಂಜ, ಸಿ.ಎ.ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಪಣೆಕ್ಕರ ಶುಭಹಾರೈಸಿದರು.

ವೇದಿಕೆಯಲ್ಲಿ ಎಸ್.ಡಿ.ಎಂ.ಸಿ.ಅಧ್ಯಕ್ಷ ಉಮೇಶ್ ಗೌಡ ಪೊಯ್ಯೋಳೆ , ಪದ್ಮುಂಜ ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ಅಶೋಕ ಗೌಡ ಪಾಂಜಾಳ, ಗ್ರಾ.ಪಂ. ಮಾಜಿ ಅಧ್ಯಕ್ಷೆ ಪರಮೇಶ್ವರಿ ಪುಯಿಲ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ಬಾಸ್ ಬಟ್ಲಡ್ಕ, ಕಾರ್ಯದರ್ಶಿ ನವೀನ್ ಕೊಲ್ಲಕೋಡಿ, ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಉದಯಭಟ್ , ಉದ್ಯಮಿ ಪ್ರಶಾಂತ್ ನಿರುಂಬುಡ, ಮುಖ್ಯ ಶಿಕ್ಷಕ ವಿಶ್ವನಾಥ ಯಂ.ಯು. , ಸಹ ಶಿಬಿರಾಧಿಕಾರಿ ಸುರೇಶ್ ಡಿ., ಘಟಕ ನಾಯಕರಾದ ಶಿಲ್ಪಾ, ರಕ್ಷಿತ್, ಶ್ರವಣ್, ಪ್ರತಿಜ್ಞಾ
ಉಪಸ್ಥಿತರಿದ್ದರು.

ಕು.ಸುಪ್ರಿಯಾ ಕಾರ್ಯಕ್ರಮ ನಿರೂಪಿಸಿ, ಶಿಬಿರಾಧಿಕಾರಿ ಡಾ.ಸುಮನಾ ಶೆಟ್ಟಿ ಸ್ವಾಗತಿಸಿದರು. ಶಿಬಿರಾಧಿಕಾರಿ ಡಾ.ಕುಶಾಲಪ್ಪ ಎಸ್ ಧನ್ಯವಾದವಿತ್ತರು.
ಏಳು ದಿನಗಳ ಶಿಬಿರ ವರದಿಯನ್ನು ವಾಚಿಸಲಾಯಿತು. ಉತ್ತಮವಾಗಿ ಗುರುತಿಸಿಕೊಂಡ ಶಿಬಿರಾರ್ಥಿಗಳನ್ನು ಸ್ಮರಣಿಕೆಯೊಂದಿಗೆ ಗುರುತಿಸಲಾಯಿತು. ಶಿಬಿರಾರ್ಥಿಗಳನ್ನು ಮತ್ತು ಶಿಬಿರಾಧಿಕಾರಿಗಳನ್ನು ಭಾವನಾತ್ಮಕವಾಗಿ ಬೀಳ್ಕೊಡಲಾಯಿತು.
ವಾರ್ಷಿಕ ವಿಶೇಷ ಶಿಬಿರದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 80 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಎಸ್ ಡಿಎಂ ಸಿ ಸದಸ್ಯ ಶಶಿಧರ್ ಗೌಡ ರೆಂಜೆದಡಿ ಏಳು ದಿನಗಳ ಎನ್.ಎಸ್.ಎಸ್ ಶಿಬಿರದಲ್ಲಿ ಶಾಲಾ ಆವರಣದೊಳಗೆ ಶಿಬಿರಾರ್ಥಿಗಳು ಕೈಗೊಂಡ ಶ್ರಮದಾನದಲ್ಲಿ ಪೂರೈಸಿದ ಕೆಲಸಗಳ ವಿವರಗಳನ್ನು ಮಂಡಿಸಿ ಸ.ಪ್ರ.ದ.ಕಾಲೇಜು ಆಡಳಿತ ಮಂಡಳಿಗೆ, ಎನ್.ಎಸ್.ಎಸ್. ಘಟಕಗಳಿಗೆ ಶಿಬಿರಾರ್ಥಿಗಳಿಗೆ ಶಿಬಿರಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

Related posts

ಮಹಾಕುಂಭಮೇಳದಲ್ಲಿ ಪವಿತ್ರ ಸ್ಥಾನಗೈದ ನಾರಾವಿ, ಉಪ್ಪಿನಂಗಡಿ ಮಾಂಡೋವಿ ಮೋಟರ್ಸ್ ನ ಸೀನಿಯರ್ ರಿಲೇಷನ್ಶಿಪ್ ಮ್ಯಾನೇಜರ್ ಚರಣ್ ಕುಮಾರ್, ಹರ್ಷ ರೈ

Suddi Udaya

ಕುವೆಟ್ಟು ಗ್ರಾ.ಪಂ ಬಳಿ ಟವರ್‌ಗೆ ಬಡಿದ ಸಿಡಿಲು: ಪಿಡಿಒ, ಸದಸ್ಯರು ಸಹಿತ ಸಿಬ್ಬಂದಿಗಳಿಗೆ ಸಿಡಿಲಿನ ಅಘಾತ: ಪಂಚಾಯತು ವಿದ್ಯುತ್ ಉಪಕರಣಗಳಿಗೆ ಹಾನಿ: ಬಿರುಕು ಬಿಟ್ಟ ಸಭಾಂಗಣ: ಪಾರಾದ ಆಶಾ ಕಾರ್ಯಕರ್ತೆಯರು

Suddi Udaya

ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದಕಟ್ಟೆ ವ್ಯವಸ್ಥಾಪನಾ ಸಮಿತಿ ರಚನೆ: ಅಧ್ಯಕ್ಷರಾಗಿ ಡಾ| ಶಶಿಧರ ಡೋಂಗ್ರೆ ಸೇನೆರೆಬೈಲು, ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಸತೀಶ್ ಪೂಜಾರಿ ಆಯ್ಕೆ

Suddi Udaya

ಮಾ.16: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಿಳಾ ಉದ್ಯಮಿಗಳ ಕಾರ್ಯಾಗಾರ

Suddi Udaya

ಬೆಳ್ತಂಗಡಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಗುಡ್ಡ ಕುಸಿತ

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ವಿಶೇಷ ಸಭೆ

Suddi Udaya
error: Content is protected !!