33.2 C
ಪುತ್ತೂರು, ಬೆಳ್ತಂಗಡಿ
October 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

“ಗೋಮಾತೆಯ ಗೌರವದ ಅಭಿಯಾನದ ಆಹ್ವಾನ” ಪೂರ್ವಭಾವಿ ಸಭೆ : ಬೆಳ್ತಂಗಡಿ ತಾಲೂಕು ಸಮಿತಿ ರಚನೆ

ಉಜಿರೆ: ಇಲ್ಲಿನ ಶಾರದಾ ಮಂಟಪದಲ್ಲಿ ಗೋಮಾತೆಯ ಸಂರಕ್ಷಣೆ ಮತ್ತು ಮಹತ್ವದ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಷ್ಟ್ರದ ಸಾಧು ಸಂತರ ಸೇವೆ ಮತ್ತು ಸಹಕಾರದಲ್ಲಿ ನಡೆಯುತ್ತಿರುವ ಈ ಅಭಿಯಾನಕ್ಕೆ ಬೆಳ್ತಂಗಡಿ ತಾಲೂಕಿನ ಸಮಿತಿಯನ್ನು ರಚಿಸಿ ಕಾರ್ಯಕ್ಕೆ ವೇಗ ಕೊಡುವ ನಿಟ್ಟಿನಲ್ಲಿ ಸಭೆಯನ್ನು ನಡೆಸಲಾಯಿತು.

ಸಭೆಯಲ್ಲಿ ಗೋ ಸೇವಾ ಗತಿವಿಧಿಯ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಪ್ರವೀಣ್ ಸರಳಾಯ ಅವರು ದೇಶವ್ಯಾಪಿ ನಡೆಯುತ್ತಿರುವ ಅಭಿಯಾನದ ಬಗ್ಗೆ ಹಾಗೂ ದೇಶೀಯ ಗೋವಿನ ಮಹತ್ವನ್ನು ಸವಿಸ್ತಾರವಾಗಿ ತಿಳಿಸಿದರು ಹಾಗೂ ದ.ಕ. ಜಿಲ್ಲಾ ಸಹ ಪ್ರಭಾರಿ ಅಶೋಕ್ ಇಳಂತಿಲ ಅವರು ಸಭೆಯ ಉದ್ದೇಶದ ಕುರಿತು ಮಾಹಿತಿ ನೀಡಿದರು.

ಅಭಿಯಾನದ ಮೂರನೇ ಹಂತದ ‘ಗೋ ಗೌರವ ಆಹ್ವಾನ’ ಸಹಿ ಸಂಗ್ರಹದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಬಗ್ಗೆ ಹಾಗೂ ಬೆಳ್ತಂಗಡಿ ತಾಲೂಕಿನ ಪ್ರತೀ ಗ್ರಾಮದಲ್ಲಿ ಸಮಿತಿ ರಚನೆ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕು ಸಂಘಚಾಲಕರಾದ ಗಣೇಶ ಕಾಂತಾಜೆ, ಘುಮಂತು ಕಾರ್ಯ ಗತಿವಿಧಿ ಯ ಪ್ರಾಂತ ಟೋಲಿ ಸದಸ್ಯ ಲಕ್ಷ್ಮಣ ದಾಸ್, ಘುಮಂತು ಕಾರ್ಯ ಮಂಗಳೂರು ವಿಭಾಗ ಸಂಯೋಜಕ ಸುದರ್ಶನ ಕನ್ಯಾಡಿ ಉಪಸ್ಥಿತರಿದ್ದರು.

ತಾಲೂಕು ಸಮಿತಿಯ ಪದಾಧಿಕಾರಿಗಳು: ತಾಲೂಕು ಪ್ರಭಾರಿ ಕಿರಣ್ ಚಂದ್ರ ಪುಷ್ಪಗಿರಿ, ತಾಲೂಕು ಸಂಯೋಜಕ ಕೇಶವ ಬಂಗೇರ, ಸಹ ಪ್ರಭಾರಿ ದಿನೇಶ್ ಚಾರ್ಮಾಡಿ, ಸಹ ಸಂಯೋಜಕರು ದೀಕ್ಷಿತ್ ಕಡಿರುದ್ಯಾವರ, ರಮೇಶ್ ಧರ್ಮಸ್ಥಳ , ಸಂತ ಪ್ರಭಾರಿ ಭಾಸ್ಕರ್ ಧರ್ಮಸ್ಥಳ, ಸಹಿ ಸಂಗ್ರಹ ಪ್ರಭಾರಿ ಪ್ರಮೋದ್ ದಿಡುಪೆ, ಗ್ರಾಮ ಸಮಿತಿ ಪ್ರಭಾರಿ ಗೌರವ್ ಶೆಟ್ಟಿ, ಸಾಮಾಜಿಕ ಜಾಲತಾಣ ಮಾನೀತ್ ,ಜಿತೇಶ್, ವ್ಯವಸ್ಥೆ ಪ್ರಭಾರಿ ಬಾಲಚಂದ್ರ ನೀರಚಿಲುಮೆ ಆಯ್ಕೆಯಾದರು.

Related posts

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅ.ಹಿ.ಪ್ರಾ. ಶಾಲೆಯಲ್ಲಿ ಶಿಕ್ಷಕ – ರಕ್ಷಕ ಸಂಘದ ಸಭೆ

Suddi Udaya

ಅಳದಂಗಡಿ ಶ್ರೀ ಸೋಮನಾಥೇಶ್ವರಿ ಜಾತ್ರಾ ಮಹೋತ್ಸವ, ಆಮಂತ್ರಣ ದಶಮಾನೋತ್ಸವ ಸಂಭ್ರಮ: ಉದ್ಯಮಿ ಮೋಹನ್ ಕುಮಾರ್‌ರವರಿಂದ ಅಮ್ಯೂಸ್‌ಮೆಂಟ್ ಉದ್ಘಾಟನೆ

Suddi Udaya

ಬಳಂಜ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಯಕ್ಷಭಾರತಿಯಿಂದ ಭಾರತ ಮಾತಾ ಪೂಜನ ಕಾರ್ಯಕ್ರಮ

Suddi Udaya

ಮಲವಂತಿಗೆ ಶ್ರೀ ವಿದ್ಯಾ ಗಣಪತಿ ಪೂಜ್ಯೋತ್ಸವ ಸಮಿತಿ ಅಧ್ಯಕ್ಷರಾಗಿ ತೀಕ್ಷಿತ್ ಕೆ., ಕಾರ್ಯದರ್ಶಿಯಾಗಿ ಜಯಂತ ಹೆಗ್ಡೆ ಆಯ್ಕೆ

Suddi Udaya

ಕಕ್ಯಪದವು ಎಲ್.ಸಿ.ಆರ್ ವಿದ್ಯಾಸಂಸ್ಥೆ ಪದವಿ ವಿಭಾಗದಲ್ಲಿ “ಮೂಲ ಸೌಕರ್ಯ ಹೂಡಿಕೆ ಟ್ರಸ್ಟ್” ವಿಷಯದ ಕುರಿತು ಕಾರ್ಯಾಗಾರ

Suddi Udaya
error: Content is protected !!