September 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸಂಘ-ಸಂಸ್ಥೆಗಳು

ಯಕ್ಷಭಾರತಿಯಿಂದ ಭಾರತ ಮಾತಾ ಪೂಜನ ಕಾರ್ಯಕ್ರಮ

ಉಜಿರೆಯ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ವೇದಿಕೆ ಕೃಷ್ಣಾನುಗ್ರಹ ಕಲ್ಯಾಣ ಮಂಟಪದಲ್ಲಿ ನಡೆದ ಯಕ್ಷಭಾರತಿಯ 11ನೇ ವಾರ್ಷಿಕ ಸಮಾರಂಭವು ಭಾರತ ಮಾತಾ ಪೂಜನ ಕಾರ್ಯಕ್ರಮದೊಂದಿಗೆ ಆರಂಭವಾಯಿತು.

ಉಜಿರೆಯ ಪಡುವೆಟ್ಟು ಮನೆಯ ಶ್ರೀಮತಿ ಕುಸುಮ ವಿ. ಪಡ್ವೆಟ್ನಾಯ ದೀಪ ಪ್ರಜ್ವಲಿಸಿ ಭಾರತ ಮಾತೆಗೆ ಪುಷ್ಪ ಅರ್ಪಿಸುವುದರ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು

ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪುತ್ತೂರು ಜಿಲ್ಲಾ ಸಂಘ ಚಾಲಕ ವಿನಯಚಂದ್ರ ಭಾಗವಹಿಸಿ ಭಾರತ ಮಾತಾ ಪೂಜನ ದ ಮಹತ್ವ ತಿಳಿಸಿದರು.

ಯಕ್ಷಭಾರತಿಯ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಉಪಸ್ಥಿತರಿದ್ದರು. ಟ್ರಸ್ಟಿ ಹರೀಶ್ ರಾವ್ ಮುಂಡ್ರುಪ್ಪಾಡಿ ಸ್ವಾಗತಿಸಿದರು. ಶ್ರೀನಿವಾಸ ರಾವ್ ಕಲ್ಮಂಜ ವಂದೇ ಮಾತರಂ ಹಾಡಿದರು. ಕು. ಶ್ರೀವಿದ್ಯಾ ಮತ್ತು ಕು. ಆಶ್ರಿತಾ ದೇಶಭಕ್ತಿ ಗೀತೆ ಹಾಡಿದರು. ಜೊತೆಕಾರ್ಯದರ್ಶಿ ಭವ್ಯ ಹೊಳ್ಳ ನಿರೂಪಿಸಿ, ಕೌಶಿಕ್ ರಾವ್ ವಂದಿಸಿದರು. ಟ್ರಸ್ಟಿಗಳಾದ ರತ್ನವರ್ಮ ಜೈನ್, ಶಶಿಧರ ಕನ್ಯಾಡಿ, ಕುಸುಮಾಕರ ಕೊತ್ತೋಡಿ, ಕೃಷ್ಣ. ಡಿ, ಯಶೋಧರ ಇಂದ್ರ ಸಹಕರಿಸಿದರು.

Related posts

ಕೊಕ್ಕಡ ಸೈಂಟ್ ಫ್ರಾನ್ಸಿಸ್ ಪ.ಪೂ ಕಾಲೇಜಿಗೆ ಶೇ.100 ಫಲಿತಾಂಶ

Suddi Udaya

ಕಳೆಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಉಚಿತ ಯಕ್ಷ ಶಿಕ್ಷಣ ತರಬೇತಿ ಉದ್ಘಾಟನೆ

Suddi Udaya

ಇಂದಬೆಟ್ಟು: ಬೆಳಕು ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

Suddi Udaya

ಜು.2: ಬೆಳ್ತಂಗಡಿ ರೋಟರಿ ಕ್ಲಬ್‌ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Suddi Udaya

ಗುರುವಾಯನಕೆರೆಯಿಂದ ಧರ್ಮಸ್ಥಳ ಕನ್ಯಾಡಿ ತನಕ ಬಸ್ಸು ನಿಲ್ದಾಣಗಳ ಸ್ವಚ್ಛತಾ ಕಾರ್ಯ

Suddi Udaya

ನಡ ಪ್ರೌಢ ಶಾಲೆ ಹಾಗೂ ಕಾಲೇಜು ರಸ್ತೆ ಬಳಿ ಅಪಾಯಕಾರಿ ಒಣಗಿದ ಬೃಹತ್ ಮರ : ತೆರವುಗೊಳಿಸುವಂತೆ ಗ್ರಾಮಸ್ಥರ ಆಗ್ರಹ

Suddi Udaya
error: Content is protected !!