31.9 C
ಪುತ್ತೂರು, ಬೆಳ್ತಂಗಡಿ
October 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳ: ಸುನಿಲ್ ಸಿಲ್ಕ್ ಸ್ಯಾರೀಸ್ ಬೃಹತ್ ಸೀರೆ ಮೇಳದ ‘ಲಕ್ಕಿ ಕೂಪನ್’ ವಿಜೇತರಿಗೆ ಬಹುಮಾನ ವಿತರಣೆ

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದ ಸುನಿಲ್ ಸಿಲ್ಕ್ ಸ್ಯಾರೀಸ್ ವತಿಯಿಂದ ಅ. 16ರಿಂದ 21ರವರೆಗೆ ಆಯೋಜಿಸಲಾಗಿದ್ದ ಬೃಹತ್ ಸೀರೆ ಮೇಳದ ಅಂಗವಾಗಿ ಗ್ರಾಹಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ಲಕ್ಕಿ ಕೂಪನ್ ಯೋಜನೆಯ ಅದೃಷ್ಟಶಾಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸೀರೆ ಮೇಳದ ವಿಶೇಷ ಆಕರ್ಷಣೆಯಾಗಿ ಪ್ರತಿ ಸೀರೆ ಖರೀದಿಗೆ ಒಂದು ಲಕ್ಕಿ ಕೂಪನ್ ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಗ್ರಾಹಕರ ಪ್ರೋತ್ಸಾಹ ಹಾಗೂ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈ ವಿಶೇಷ ಯೋಜನೆಯನ್ನು ಆಯೋಜಿಸಲಾಗಿತ್ತು.

ಅ.26ರಂದು ನಡೆದ ಲಕ್ಕಿ ಕೂಪನ್ ಡ್ರಾ ಕಾರ್ಯಕ್ರಮದಲ್ಲಿ ಬೆಂಗಳೂರಿನ ರಕ್ಷಿತ್ ರೈ ಅವರು ಅದೃಷ್ಟಶಾಲಿ ವಿಜೇತರ ಹೆಸರನ್ನು ಘೋಷಿಸಿದರು. ಧರ್ಮಸ್ಥಳದ ಶ್ರೀ ಸದಾಶಿವ ಕಾಮದೇನು ಅವರು ಅದೃಷ್ಟಶಾಲಿ ವಿಜೇತರಾಗಿ ಆಯ್ಕೆಯಾಗಿದ್ದು, ಅವರಿಗೆ ಲಕ್ಕಿ ಕೂಪನ್ ಯೋಜನೆಯಡಿ ನಿಗದಿಪಡಿಸಲಾಗಿದ್ದ ಆಕರ್ಷಕ ಉಡುಗೊರೆಯನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸುನಿಲ್ ಬೇಕಲ್, ಪವಿತ್ರ, ಸಮನ್ಯು, ವಿನೋದ್ ಬೇಕಲ್, ಕಿರಣ್, ಸಂಪತ್ ರೈ, ಯತೀಶ್, ದಿನೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬೃಹತ್ ಸೀರೆ ಮೇಳದ ಯಶಸ್ಸಿಗೆ ಕಾರಣರಾದ ಗ್ರಾಹಕರ ಅಮೂಲ್ಯ ಪ್ರೋತ್ಸಾಹ, ವಿಶ್ವಾಸ ಹಾಗೂ ಸಹಕಾರಕ್ಕೆ ಸುನಿಲ್ ಸಿಲ್ಕ್ ಸ್ಯಾರೀಸ್ ಸಂಸ್ಥೆಯ ಮಾಲೀಕರು ಕೃತಜ್ಞತೆ ಸಲ್ಲಿಸಿದರು. ಅಲ್ಲದೆ, ಮೇಳದ ಯಶಸ್ವಿ ಆಯೋಜನೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸಿದರು.

Related posts

ಅರಸಿನಮಕ್ಕಿ ಗ್ರಾ.ಪಂ.ನಿಂದ ಚರಂಡಿ ದುರಸ್ಥಿ ಕಾರ್ಯ

Suddi Udaya

ಸೆ.30: ತಾಲೂಕು ಪಂಚಾಯತ್‌ ಪ್ರಭಾರ ಸಹಾಯಕ ಲೆಕ್ಕಾಧಿಕಾರಿ ಅಶೋಕ್ ದೇವಾಡಿಗ ನಿವೃತ್ತಿ

Suddi Udaya

ಗುರುವಾಯನಕೆರೆ: ಇನೋವಾ ಕಾರಿನಲ್ಲಿ ಹಿಂಸಾತ್ಮಕವಾಗಿ ಗೋವುಗಳ ಸಾಗಾಟ: ಊರವರು ಹಾಗೂ ಪೋಲಿಸರಿಂದ ತಡೆಹಿಡಿದು ಚಾಲಕನ ಸೆರೆ, ಇಬ್ಬರು ಆರೋಪಿಗಳು ಪರಾರಿ:

Suddi Udaya

ದ್ವೇಷ ಭಾಷಣ ಪ್ರಕರಣ: ಮಹೇಶ್ ಶೆಟ್ಟಿ ತಿಮರೋಡಿ ರವರಿಗೆ ಜಾಮೀನು ಮಂಜೂರು

Suddi Udaya

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಪ್ರಾಪ್ತಿ ಎಂ ಗೌಡರಿಗೆ ಸನ್ಮಾನ

Suddi Udaya

ಕಲ್ಮಂಜ: ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಹಾಗೂ ವಾರ್ಷಿಕ ಜಾತ್ರೋತ್ಸವ ಸಮಿತಿಯ ಪೂರ್ವಭಾವಿ ಸಭೆ

Suddi Udaya
error: Content is protected !!