30.8 C
ಪುತ್ತೂರು, ಬೆಳ್ತಂಗಡಿ
October 29, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ದಯಾ ವಿಶೇಷ ಶಾಲೆಯಲ್ಲಿ ವಿಶ್ವ ಆರೈಕೆದಾರರ ದಿನಾಚರಣೆ

ಬೆಳ್ತಂಗಡಿ: ಲಾಯಿಲದ ದಯಾ ವಿಶೇಷ ಶಾಲೆಯಲ್ಲಿ ವಿಶ್ವ ಆರೈಕೆದಾರರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿಶೇಷ ಅಗತ್ಯವುಳ್ಳ ಮಕ್ಕಳ ಆರೈಕೆಯಲ್ಲಿ ತೊಡಗಿಸಿಕೊಂಡಿರುವ ಪೋಷಕರು, ಆರೈಕೆದಾರರು ಹಾಗೂ ಶಿಕ್ಷಕರ ಸೇವೆಯನ್ನು ಗೌರವಿಸುವುದು ಮತ್ತು ಅವರಲ್ಲಿ ಅರಿವು ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಅಲಾ ಸಂಚಾಲಕರು ಆದ ವಂ.ಫಾ.ವಿನೋದ್ ರವರು ವಿಶೇಷ ಮಕ್ಕಳ ಆರೈಕೆಯಲ್ಲಿ ಪೋಷಕರು ಮತ್ತು ಆರೈಕೆದಾರರು ವಹಿಸುವ ಪ್ರಮುಖ ಪಾತ್ರದ ಕುರಿತು ಮಾಹಿತಿ ನೀಡಿದರು. ಮಕ್ಕಳ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಬೆಳವಣಿಗೆಯಲ್ಲಿ ಪ್ರೀತಿ, ತಾಳ್ಮೆ, ಸಹನೆ ಮತ್ತು ನಿರಂತರ ಪ್ರೋತ್ಸಾಹದ ಮಹತ್ವವನ್ನು ತಿಳಿಸಿದರು. ವಿಶೇಷ ಮಕ್ಕಳ ಆರೈಕೆಯಲ್ಲಿ ಎದುರಾಗುವ ಸವಾಲುಗಳನ್ನು ಪರಸ್ಪರ ಹಂಚಿಕೊಳ್ಳಲು ಹಾಗೂ ಅವುಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಲು ಕಾರ್ಯಕ್ರಮವು ಉತ್ತಮ ವೇದಿಕೆಯಾಯಿತು.ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಾಲೆ ಮತ್ತು ಮನೆಯ ನಡುವಿನ ಉತ್ತಮ ಸಹಕಾರ ಅಗತ್ಯವಾಗಿದೆ. ಪೋಷಕರು ಮಕ್ಕಳ ಸಾಮರ್ಥ್ಯವನ್ನು ಗುರುತಿಸಿ, ಅವರಿಗೆ ಸ್ವಾವಲಂಬಿ ಜೀವನ ನಡೆಸಲು ಅಗತ್ಯವಾದ ಕೌಶಲ್ಯಗಳನ್ನು ಬೆಳೆಸಲು ಪ್ರೋತ್ಸಾಹಿಸಬೇಕು ಎಂಬ ಸಂದೇಶವನ್ನು ನೀಡಿದರು. ಆರೈಕೆದಾರರ ಸೇವೆ ಅಮೂಲ್ಯವಾಗಿದ್ದು, ಅವರ ತ್ಯಾಗ, ಪ್ರೀತಿ ಮತ್ತು ಸಮರ್ಪಣೆಯನ್ನು ಸಮಾಜ ಗೌರವಿಸಬೇಕು ಎಂದು ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ಪೋಷಕರು ಶಾಲಾ ಮಕ್ಕಳು ಭಾಗವಹಿಸಿದ್ದರು. ವಿಶೇಷ ಮಕ್ಕಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಪೋಷಕರು, ಶಿಕ್ಷಕರು ಮತ್ತು ಸಮಾಜದ ಸಹಭಾಗಿತ್ವ ಅತ್ಯಗತ್ಯ ಎಂಬ ಆಶಯದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.ಶಾಲಾ ಮಕ್ಳಳ ಪೋಷಕರಿಗೆ ಹೂವುವನ್ನು ನೀಡುವ ಮೂಲಕ ಅವರನ್ನು ಗೌರವಿಸಲಾಯಿತು,ಕಾರ್ಯಕ್ರಮದ ನಿರೂಪನೆ ಹಾಗೂ ಧನ್ಯವಾದವನ್ನು ಶಾಲಾ ಸಿಬ್ಬಂದಿಯಾದ ಐವನ್ ನೇರೆವೇರಿಸಿದರು.

Related posts

ಬೆಳ್ತಂಗಡಿ ಬಿಜೆಪಿ ಮಂಡಲದ ವತಿಯಿಂದ ಡಾ. ಶ್ಯಾಮ್ ಪ್ರಸಾದ ಮುಖರ್ಜಿ ಯವರ ಪುಣ್ಯಸ್ಮರಣೆ

Suddi Udaya

ಆಗಸ್ಟ್ 2 , 3: ಉಜಿರೆಯಲ್ಲಿ “ಮಹಿಳಾ ಯಕ್ಷ ಸಂಭ್ರಮ” : ಪತ್ರಿಕಾಗೋಷ್ಠಿ

Suddi Udaya

ಪಡಂಗಡಿ : ಪೊಯ್ಯೆಗುಡ್ಡೆ ನಿವಾಸಿ ಶ್ರೀಮತಿ ಕಮಲ ನಿಧನ

Suddi Udaya

ಉದ್ಯಮಿ ಸುರೇಶ್ ದೇವಾಡಿಗರವರು ತೋಟತ್ತಾಡಿ ಶ್ರೀ ಉಳ್ಳಾಲ್ತಿ ಭಜನಾ ಮಂದಿರದ ಭಜನಾ ತಂಡದವರಿಗೆ ನೀಡಿದ ಸಮವಸ್ತ್ರದ ಬಿಡುಗಡೆ

Suddi Udaya

ಬಳಂಜ ಶಿವಾಜಿ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾಗಿ ಹರೀಶ್ ದೇವಾಡಿಗ, ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್ ಕೆ

Suddi Udaya

ಕಾಶಿಪಟ್ಣ: ಸರಕಾರಿ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ

Suddi Udaya
error: Content is protected !!