30.8 C
ಪುತ್ತೂರು, ಬೆಳ್ತಂಗಡಿ
October 29, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾಯೋಜನೆಗೆ ಸರಕಾರ ತಾತ್ಕಾಲಿಕ ಅನುಮೋದನೆ ; ರಸ್ತೆ ಗ್ರೀಡ್ ಪ್ಲಾನ್ ಪ್ರಕಟ: ಸಾರ್ವಜನಿಕರ ಆಕ್ಷೇಪಣೆಗೆ ಅವಕಾಶ, ಪ.ಪಂ. ಹಿರಿಯ ಸದಸ್ಯ ಜಗದೀಶ್‌ರಿಂದ ಆಕ್ಷೇಪಣೆ ಸಲ್ಲಿಕೆ

ಬೆಳ್ತಂಗಡಿ: ರಾಜ್ಯದಲ್ಲಿನ ಸ್ಥಳೀಯ ಯೋಜನಾ ಪ್ರದೇಶಗಳಲ್ಲಿನ ಅನುಮೋದಿತ ಮಹಾಯೋಜನೆ ಹೊಂದಿರುವ ಹಾಗೂ ಮಹಾಯೋಜನೆ ತಯಾರಿಕೆ ವಿವಿಧ ಹಂತಗಳಲ್ಲಿರುವ ನಗರ, ಪಟ್ಟಣಗಳಿಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಂತೆ ಭೌಗೋಳಿಕ ಮಾಹಿತಿ ಆಧಾರಿತ ರೋಡ್‌ನೆಟ್‌ವರ್ಕ್ ಗ್ರೀಡ್ ಯೋಜನೆಗೆ ಸರಕಾರ ತಾತ್ಕಾಲಿಕ ಅನುಮೋದನೆ ನೀಡಿದೆ.

ಬೆಳ್ತಂಗಡಿ ಪಟ್ಟಣ ಪಂಚಾಯತ್ ಯೋಜನಾ ಪ್ರಾಧಿಕಾರ ವ್ಯಾಪ್ತಿಗೆ ಸಿದ್ಧಪಡಿಸಲಾಗಿರುವ ಭೌಗೋಳಿಕ ಮಾಹಿತಿ ಆಧಾರಿತ ರೋಡ್‌ನೆಟ್‌ವರ್ಕ್ ಗ್ರೀಡ್ ಪ್ಲಾನ್‌ನ ನಕ್ಷೆಯನ್ನು ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಹಾಗೂ ಸಹಾಯಕ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಮಂಗಳೂರು ಇವರ ಕಛೇರಿಯಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಪ್ರಕಟಿಸಲಾಗಿದೆ.

ಈ ಯೋಜನೆಯಿಂದ ಬಾಧಿತರಾಗಬಹುದಾದ ಸಾರ್ವಜನಿಕರು ತಮ್ಮ ಸಲಹೆ, ಸೂಚನೆಗಳು ಅಥವಾ ಆಕ್ಷೇಪಗಳು ಏನಾದರೂ ಇದ್ದಲ್ಲಿ, ಖುದ್ದಾಗಿ, ಅಥವಾ ನೋಂದಾಯಿತ ಅಂಚೆ ಅಥವಾ ಇ-ಮೇಲ್ ಮೂಲಕ ಸಲ್ಲಿಸಬಹುದಾಗಿದೆ. ನಿಗಧಿತ 60 ದಿನಗಳ ಅವಧಿಯೊಳಗೆ ಸ್ವೀಕರಿಸಲ್ಪಟ್ಟ ಸಲಹೆ, ಸೂಚನೆಗಳು ಹಾಗೂ ಆಕ್ಷೇಪಣೆಗಳು ಮಾತ್ರ ಪರಿಗಣಿಸಲಾಗುವುದು. ಸದರಿ ಅವಧಿ ಮುಕ್ತಾಯಗೊಂಡ ನಂತರ ಸ್ವೀಕರಿಸಲ್ಪಡುವ ಯಾವುದೇ ಸಲಹೆ. ಸೂಚನೆ ಅಥವಾ ಆಕ್ಷೇಪಣೆಯನ್ನು ಪರಿಗಣಿಸಲಾಗುವುದಿಲ್ಲ ಎಂದು ಆಡಳಿತಾಧಿಕಾರಿಯವರು ಹಾಗೂ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.


9,12,18 ಮೀಟರ್ ರಸ್ತೆಗೆ ಜಗದೀಶ್ ಡಿ. ಆಕ್ಷೇಪ:


ಬೆಳ್ತಂಗಡಿ ನಗರದ ಮುಖ್ಯ ರಸ್ತೆಗಳನ್ನು ಅದರಲ್ಲಿ ಪಿ.ಡಬ್ಲ್ಯು.ಡಿ ರಸ್ತೆ ಜಿಲ್ಲಾ ಪಂಚಾಯತ್ ರಸ್ತೆಗಳನ್ನು ಹೊರತು ಪಡಿಸಿ, ಉಳಿದ ಪ.ಪಂ. ರಸ್ತೆಗಳು ೭.೫೦ ಮೀಟರ್ ವಿಸ್ತರಣೆ ಮತ್ತು ಜನನಿ ಬಿಡ ಆಶ್ರಯ ಕಾಲನಿ ರಸ್ತೆಗಳು ೬.೫೦ ಮೀಟರ್‌ಗಳಿಗೆ ಸೀಮಿತವಾಗಿ ರಸ್ತೆ ಗುರುತಿಸಬೇಕಾಗಿ ಬೆಳ್ತಂಗಡಿ ಪಟ್ಟಣ ಪಂಚಾಯತ್ ಮಾಜಿ ಹಿರಿಯ ಸದಸ್ಯ ಜಗದೀಶ್ ಡಿ. ಆಕ್ಷೇಪಣೆ ಸಲ್ಲಿಸಿದ್ದಾರೆ.

ಕರಡು ಪ್ರತಿಯಲ್ಲಿ ಕಂಡು ಬಂದಂತೆ 9 ಮೀಟರ್, 12 ಮೀಟರ್, 18 ಮೀಟರ್ ಗುರುತಿಸಿದಲ್ಲಿ ಸಣ್ಣ ಪಟ್ಟಣವಾದ ಬೆಳ್ತಂಗಡಿಯ ಜನತೆಗೆ ಸಾಕಷ್ಟು ತೊಂದರೆ ಅಗುವುದರಿಂದ ಮತ್ತು ಹೆಚ್ಚಿನ ನಿವೇಶನಗಳು 5 ಸೆಂಟ್ಸ್ ನಿವೇಶನಗಳು 15 ಸೆಂಟ್ಸ್ ನಿವೇಶನಗಳು ಹೆಚ್ಚಿರುವುದರಿಂದ ಇಲಾಖೆಯ ಕರಡು ಪ್ರತಿಯನ್ನು ಮತ್ತೊಮ್ಮೆ ಪರಿಶೀಲಿಸಿ ನಮ್ಮ ಬೇಡಿಕೆಯಂತೆ 7.50 ಮೀಟರ್ ಮತ್ತು 6.50 ಮೀಟರ್ ಅಗಲದ ರಸ್ತೆಗೆ ಮಾನ್ಯತೆ ನೀಡಬೇಕಾಗಿ ಬೆಳ್ತಂಗಡಿ ನಗರದ ಸಮಸ್ತ ನಾಗರಿಕರ ಪರವಾಗಿ ಜಗದೀಶ್ ಅವರು ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರಿಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ರಾಲಯಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ.

Related posts

ಕಡಿರುದ್ಯಾವರ: ಕಾನರ್ಪ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ ಹಾಗೂ ಭಜನಾ ಕಾರ್ಯಕ್ರಮ

Suddi Udaya

ನಾಲ್ಕೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಜನಮಂಗಳ ಯೋಜನೆಯಡಿ ಮಂಜೂರಾದ ವಾಕಿಂಗ್ ಸ್ಟಿಕ್ ಹಸ್ತಾಂತರ

Suddi Udaya

ಬೆಳ್ತಂಗಡಿ: ಹುಣ್ಸೆಕಟ್ಟೆ ನಿವಾಸಿ ಲ್ಯಾನ್ಸಿ ಫೆರ್ನಾಂಡಿಸ್ ಇಸ್ರೇಲ್ ನಲ್ಲಿ ನಿಧನ

Suddi Udaya

ಧರ್ಮಸ್ಥಳ ಗ್ರಾ.ಪಂ. ವ್ಯಾಪ್ತಿಯಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಮಾಹಿತಿ ಕಾರ್ಯಾಗಾರ

Suddi Udaya

ಕನ್ಯಾಡಿ ರಾಮ ಕ್ಷೇತ್ರದಲ್ಲಿ ನವರಾತ್ರಿಯ ವಿಶೇಷ ಪೂಜೆ

Suddi Udaya

ತೆಕ್ಕಾರು ಉಪ ಆರೋಗ್ಯ ಕೇಂದ್ರಕ್ಕೆ ಕಟ್ಟಡ ನಿರ್ಮಿಸಲು ಅನುದಾನ ಮಂಜೂರುಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ತೆಕ್ಕಾರು ಗ್ರಾ.ಪಂ. ಸದಸ್ಯ ಅಬ್ದುಲ್ ರಝಾಕ್ ರವರಿಂದ ಮನವಿ

Suddi Udaya
error: Content is protected !!