ಬೆಳ್ತಂಗಡಿ: ಬೆಳ್ತಂಗಡಿ ಕೋರ್ಟು ರಸ್ತೆಯಲ್ಲಿರುವ ಬಿಎಸ್.ಎನ್ ಎಲ್ ಕಛೇರಿಯ ಬಳಿ, ಅಭಿನಂದನಾ ರಸ್ತೆ ಬದಿಯಲ್ಲಿರುವ ಕಟ್ಟಡಕ್ಕೆ ನೂತನ ವಕೀಲರ ಕಚೇರಿ ಸ್ಥಳಾಂತರಗೊಂಡು ಅ. 29ರಂದು ಶುಭಾರಂಭಗೊಂಡಿತ್ತು.

ನೂತನ ಕಚೇರಿಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು ಉದ್ಘಾಟಿಸಿ ಶುಭಹಾರೈಸಿದರು.
ಬೆಳ್ತಂಗಡಿ ಹಿರಿಯ ನ್ಯಾಯವಾದಿ ಭಗೀರಥ ಜಿ. ಗೌರವ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಜಿತ್ ರವರ ಪತ್ನಿ ಶಾಲಿನಿ, ತಂದೆ ರವಿರಾಜ್ ಹೆಗ್ಡೆ , ತಾಯಿ ವಿಮಲಾವತಿ, ತುಕಾರಾಂ, ಅಕ್ಷಯ್ ರಾವ್, ಉಪಸ್ಥಿತರಿದ್ದರು.
ಬಂದಂತಹ ಅತಿಥಿ ಗಣ್ಯರನ್ನು ವಕೀಲರಾದ ಅಜಿತ್ ಎನ್. ಸ್ವಾಗತಿಸಿದರು. ವಕೀಲರಾದ ಅಕ್ಷಯ್ ಟಿ. ರಾವ್, ಜೋಬಿ ಜೋಯ್, ಚಿರಾಗ್ ಪಿ. ಶೆಟ್ಟಿ ಸತ್ಕರಿಸಿ ವಂದಿಸಿದರು.













