27.3 C
ಪುತ್ತೂರು, ಬೆಳ್ತಂಗಡಿ
October 29, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇ- ತ್ಯಾಜ್ಯ ಅಭಿಯಾನ ಕಾರ್ಯಕ್ರಮ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಇ- ತ್ಯಾಜ್ಯ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಮ್.ವಿ ಮಕ್ಕಳಿಗೆ ಇ ತ್ಯಾಜ್ಯ ದ ಬಗ್ಗೆ ಅರಿವು ಮೂಡಿಸಿ ಅದರ ಮರು ಬಳಕೆಯನ್ನು ಹೇಗೆ ಮಾಡುವುದೆಂದು ತಿಳಿ ಹೇಳಿದರು. ಬೆಳಗಿನ ಪ್ರಾರ್ಥನಾ ಸಮಯದ ಅವಧಿಯಲ್ಲಿ ಮಕ್ಕಳಿಗೆ ಇ ತ್ಯಾಜ್ಯದ ಕುರಿತು ರಸಪ್ರಶ್ನೆ ಯನ್ನು ಏರ್ಪಡಿಸಲಾಯಿತು.

ನಂತರ ಮಕ್ಕಳು ಅಂಚೆ ಕಾರ್ಡಿನಲ್ಲಿ ಇ ತ್ಯಾಜ್ಯದ ಕುರಿತು ಅವರ ಸಂಬಂಧಿಕರಿಗೆ, ಇಲಾಖೆಗೆ ಪತ್ರ ಬರೆದು ಪೋಸ್ಟ್ ಮಾಡಲಾಯಿತು. ಈ ಅಭಿಯಾನವನ್ನು ಶಾಲೆಯ ಪರಿಸರ ಸಂಘದ ವತಿಯಿಂದ ಆಯೋಜಿಸಿ ಶಾಲಾ ಮುಖ್ಯೋಪಾಧ್ಯಾಯಿನಿ, ಶಿಕ್ಷಕ ವೃಂದದವರು ಹಾಗೂ ಶಾಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Related posts

ಜೆಸಿಐ ಉಜಿರೆ ಸಿಟಿ -777 ಜೇಸಿ ಸಪ್ತಾಹ 2026 ಸಮಾರೋಪ ಸಮಾರಂಭ ಮತ್ತು ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ

Suddi Udaya

ಮಚ್ಚಿನ : ಕಲ್ಲಗುಡ್ಡೆಯಲ್ಲಿ ಬಡ ಮಹಿಳೆಗೆ ಮನೆ ಹಸ್ತಾಂತರ ಕಾರ್ಯಕ್ರಮ

Suddi Udaya

ಮರೋಡಿ: ಉಪನ್ಯಾಸಕ ಜಿನೇಂದ್ರ ಬಲ್ಲಾಳ್ ನಿಧನ

Suddi Udaya

ಕುಪ್ಪೆಟ್ಟಿಯಿಂದ ಉಪ್ಪಿನಂಗಡಿ ಸಂಚರಿಸುವ ರಸ್ತೆಯ ಅವ್ಯವಸ್ಥೆಯ ಕೇಳುವವರಾರು? : ಡಿವೈಎಫ್ ಐ ಪ್ರಶ್ನೆ

Suddi Udaya

ಉಜಿರೆ ಎಸ್.ಡಿ.ಎಂ ಸಿ.ಬಿ.ಎಸ್.ಇ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪನಾ ದಿನಾಚರಣೆ ಮತ್ತು ಧ್ವಜ ದಿನಾಚರಣೆ

Suddi Udaya

ಬಂದಾರು: ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಮುಂಡೂರು ವರ್ಷಾವಧಿ ಜಾತ್ರಾ ಮಹೋತ್ಸವ

Suddi Udaya
error: Content is protected !!