32.5 C
ಪುತ್ತೂರು, ಬೆಳ್ತಂಗಡಿ
October 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಆಧಿನಾಥ್ ಬಜಾಜ್‌ನಲ್ಲಿ ದೀಪಾವಳಿ ಹಬ್ಬದ ವಿಶೇಷ ಕೊಡುಗೆ: ಕಡಿಮೆ ಮುಂಗಡ ಪಾವತಿ, ಆಕರ್ಷಕ ಬಡ್ಡಿದರದಲ್ಲಿ ದ್ವಿಚಕ್ರ ವಾಹನ ಖರೀದಿಗೆ ಅವಕಾಶ

ಬೆಳ್ತಂಗಡಿ: ಇಲ್ಲಿನ ಆದ್ಯಾ ಕಾಂಪ್ಲೆಕ್ಸ್ನಲ್ಲಿ ಕಾರ್ಯಾಚರಿಸುತ್ತಿರುವ ಆಧಿನಾಥ್ ಬಜಾಜ್ ಶೋರೂಮ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ಘೋಷಿಸಲಾಗಿದೆ ಎಂದು ಸಂಸ್ಥೆಯ ಮಾಲಕ ರಾಜೇಶ್ ತಿಳಿಸಿದ್ದಾರೆ.
ದೀಪಾವಳಿ ಪ್ರಯುಕ್ತ ಬಜಾಜ್ ದ್ವಿಚಕ್ರ ವಾಹನಗಳನ್ನು ಆಕರ್ಷಕ ಮುಂಗಡ ಪಾವತಿ ಹಾಗೂ ಶೇ.6.99ರ ಬಡ್ಡಿದರದಲ್ಲಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.

ಪಲ್ಸರ್ ಎನ್‌ಎಸ್ 200ಗೆ ರೂ.15,999, ಪಲ್ಸರ್ 150ಗೆ ರೂ.12,999, ಪಲ್ಸರ್ ಎನ್ 160ಗೆ ರೂ.20999, ಬಜಾಜ್ ಚೇತಕ್‌ಗೆ ರೂ.2999 ಹಾಗೂ ಫ್ರೀಡಂ ಬೈಕ್‌ಗೆ ರೂ.10999 ಮುಂಗಡ ಪಾವತಿಯೊಂದಿಗೆ ಖರೀದಿಸಬಹುದಾಗಿದೆ. ರೂ. 4999ರಿಂದ ಮುಂಗಡ ಪಾವತಿ ಆರಂಭವಾಗುವ ಯೋಜನೆಯೂ ಲಭ್ಯವಿದೆ ಎಂದು ಸಂಸ್ಥೆ ತಿಳಿಸಿದೆ.

ಗ್ರಾಹಕರಿಗೆ ಒಂದು ವರ್ಷದ ಉಚಿತ ಸೇವೆ, ಎಕ್ಸ್ಪ್ರೆಸ್ ಸರ್ವಿಸ್, ಬಡ್ಡಿಯಲ್ಲಿ ರೂ. 4000ದವರೆಗೆ ಉಳಿತಾಯ ಹಾಗೂ ಉಚಿತ ಹೆಲ್ಮೆಟ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅಲ್ಲದೆ, ಗ್ರಾಹಕರ ಯಾವುದೇ ವಾಹನಗಳಿಗೆ ಹೊಸ ವಿಮೆ ಮಾಡಿಸುವುದು ಹಾಗೂ ವಿಮೆ ನವೀಕರಣವನ್ನು ಅತ್ಯಂತ ಕಡಿಮೆ ದರದಲ್ಲಿ ಮಾಡಿಕೊಡಲಾಗುತ್ತದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗ್ರಾಹಕರು ತಮ್ಮ ಇಷ್ಟದ ಬಜಾಜ್ ವಾಹನವನ್ನು ಆಕರ್ಷಕ ಕೊಡುಗೆಗಳೊಂದಿಗೆ ಖರೀದಿಸಲು ಇದು ಉತ್ತಮ ಅವಕಾಶವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಬೆಳ್ತಂಗಡಿಯ ಆಧಿನಾಥ್ ಬಜಾಜ್ ಶೋರೂಮ್ ಅನ್ನು ಸಂಪರ್ಕಿಸಬಹುದು ಎಂದು ರಾಜೇಶ್ ತಿಳಿಸಿದ್ದಾರೆ.

ಗ್ರಾಹಕ ಸ್ನೇಹಿ ಸೇವೆಗೆ ಆದ್ಯತೆ: ರಾಜೇಶ್
ದೀಪಾವಳಿ ಹಬ್ಬದ ಪ್ರಯುಕ್ತ ನಮ್ಮ ಶೋರೂಮ್‌ನಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆಗಳೊಂದಿಗೆ ಉತ್ತಮ ಸೇವೆ ಒದಗಿಸಲಾಗುತ್ತಿದೆ. ವಾಹನಗಳ ಮಾರಾಟದ ಜೊತೆಗೆ ಸರ್ವಿಸ್ ವಿಭಾಗಕ್ಕೂ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಗ್ರಾಹಕ ಸ್ನೇಹಿ ಸಿಬ್ಬಂದಿ ವರ್ಗ, ಗುಣಮಟ್ಟದ ಸೇವೆ ಹಾಗೂ ವಾಹನಗಳ ನಿರ್ವಹಣೆಯಲ್ಲಿ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಂಡು ಸಂಸ್ಥೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುತ್ತಿದೆ. ಗ್ರಾಹಕರ ತೃಪ್ತಿಯೇ ನಮ್ಮ ಪ್ರಮುಖ ಗುರಿಯಾಗಿದೆ ಎಂದು ಸಂಸ್ಥೆಯ ಮಾಲಕ ರಾಜೇಶ್ ತಿಳಿಸಿದ್ದಾರೆ.

Related posts

ತಾಜುಲ್ ಉಲಮಾ ರಿಲೀಫ್ ಟ್ರಸ್ಟ್ ಮದ್ದಡ್ಕ ವತಿಯಿಂದ 3 ಜೋಡಿ ಸರಳ ಸಮೂಹಿಕ ವಿವಾಹ

Suddi Udaya

ವಲಯ ಮಟ್ಟದ ಗೀತ ಗಾಯನ ಸ್ಪರ್ಧೆ :ನಡ ಸ.ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ

Suddi Udaya

ಮಡಂತ್ಯಾರು ವಿಶ್ವ ಹಿಂದೂ ಪರಿಷತ್ ವತಿಯಿಂದ ಶ್ರೀರಾಮೋತ್ಸವ

Suddi Udaya

ಕುಂಭಶ್ರೀ ಆಂ.ಮಾ. ಶಾಲಾ ಕಾಲೇಜಿನಲ್ಲಿ ಹೆಚ್.ಪಿ.ವಿ ವ್ಯಾಕ್ಸಿನ್ ಬಗ್ಗೆ ಮಾಹಿತಿ ಕಾರ್ಯಾಗಾರ

Suddi Udaya

ಗುರುವಾಯನಕೆರೆ: ಒಲಿಂಪಿಯಾಡ್ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ

Suddi Udaya

ಮಧ್ವ ಓಂಕಾರ ಫ್ರೆಂಡ್ಸ್ ಹಾಗೂ ಓಂಕಾರ ಮಹಿಳಾ ಘಟಕದ ವಾರ್ಷಿಕೋತ್ಸವ

Suddi Udaya
error: Content is protected !!