25.8 C
ಪುತ್ತೂರು, ಬೆಳ್ತಂಗಡಿ
October 30, 2026
ಕರಾವಳಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಂದಿನಿ ಹಾಲಿನ ದರ 8ರೂ. ಹೆಚ್ಚಳ

ಬೆಳ್ತಂಗಡಿ: ನಿರೀಕ್ಷೆಯಂತೆ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂ. ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಅನುಮೋದನೆ ನೀಡಿದ್ದು, ಪರಿಷ್ಕೃತ ದರ ನ.1ರಿಂದಲೇ ಜಾರಿಗೆ ಬರಲಿದೆ.

ಹೈನುಗಾರಿಕೆ ನಿರತ ರೈತರ ಹಾಗೂ ಹಾಲು ಒಕ್ಕೂಟಗಳ ಬೇಡಿಕೆ ಆಧರಿಸಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ನ.1 ರಿಂದ ಪ್ರತಿ ಲೀಟ‌ರ್ ಹಾಲಿನ ದರ ಈಗಿರುವ 48 ರೂ. ನಿಂದ 56 ರೂ.ಗೆ ಏರಿಕೆ ಆಗಲಿದೆ ಇದರಲ್ಲಿ 7ರೂ. ರೈತರಿಗೆ ಸಿಕ್ಕರೆ 1 ರೂ. ಒಕ್ಕೂಟಗಳ ನಿರ್ವಹಣೆಗೆ ಜಮೆ ಆಗಲಿದೆ. ಹೈನುಗಾರಿಕೆಗೆ ಉತ್ತೇಜನ ನೀಡಲು ಪ್ರತಿ ಲೀಟರ್ ಹಾಲಿಗೆ ರಾಜ್ಯ ಸರ್ಕಾರ ನೀಡುತ್ತಿರುವ 5 ರೂ. ಪ್ರೋತ್ಸಾಹಧನ ಯಥಾ ಪ್ರಕಾರ ಮುಂದುವರಿಯಲಿದೆ. ಬರಗಾಲದ ಹಿನ್ನೆಲೆಯಲ್ಲಿ ಹಾಲು ಉತ್ಪಾದಕ ರೈತರ ಹಿತಕಾಯಲು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದರು.

Related posts

ಲಾಯಿಲದಲ್ಲಿ ಕೆಟ್ಟು ನಿಂತ ಕೆಎಸ್ ಆರ್ ಟಿ ಸಿ ಬಸ್ಸು: ಟ್ರಾಫಿಕ್ ಜಾಮ್

Suddi Udaya

ಪದ್ಮುಂಜ ಸಿಎ ಬ್ಯಾಂಕ್ ಹಿರಿಯ ಗುಮಾಸ್ತ ಚಿದಾನಂದ ಗೌಡರಿಗೆ ನುಡಿನಮನ

Suddi Udaya

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ: ಎಫ್‌ಎಸ್ಎಲ್ ವರದಿ ಬರುವವರೆಗೂ ಎಸ್‌ಐಟಿ ತನಿಖೆ ಸ್ಥಗಿತ: ಗೃಹ ಸಚಿವ ಪರಮೇಶ್ವರ್

Suddi Udaya

ಪದವಿಪೂರ್ವ ಕಾಲೇಜುಗಳ ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ : ಉಜಿರೆ ಎಸ್ ಡಿ ಎಮ್ ಪದವಿ ಪೂರ್ವ ಕಾಲೇಜಿನ ಮೂರು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಉಜಿರೆ ಗಾಂಧಿನಗರ ಅಂಗನವಾಡಿ ಶಾಲೆಗೆ ಎಸ್.ಕೆ ಸದ್ವಿಕ್ ಹುಟ್ಟುಹಬ್ಬದ ಪ್ರಯುಕ್ತ ಅಂಬೇಡ್ಕರ್ ಭಾವಚಿತ್ರ ಕೊಡುಗೆ

Suddi Udaya

ಭಜನೆಯಿಂದ ಸಾಮಾಜಿಕ ಸಾಮರಸ್ಯ: ಪ್ರೊ. ಶುಭಾ ಮರವಂತೆ

Suddi Udaya
error: Content is protected !!