September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪದ್ಮುಂಜ ಸಿಎ ಬ್ಯಾಂಕ್ ಹಿರಿಯ ಗುಮಾಸ್ತ ಚಿದಾನಂದ ಗೌಡರಿಗೆ ನುಡಿನಮನ

ಪದ್ಮುಂಜ: ಇಲ್ಲಿಯ ಕೃಷಿ ಪತ್ತಿನ ಸಹಕಾರಿ ಸಂಘದ ಹಿರಿಯ ಗುಮಾಸ್ತ ಚಿದಾನಂದ ಗೌಡ ಕುರಾಯ ಅವರ ಹೆಸರಿನಲ್ಲಿ ನುಡಿ ನಮನ ಕಾರ್ಯಕ್ರಮ ಪದ್ಮುಂಜ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣಕ್ಕರ ಇವರ ಅಧ್ಯಕ್ಷತೆಯಲ್ಲಿ ಮಾ. 24 ರಂದು ಜರಗಿತು.

ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಂಕಿತಾ ಪ್ರಾಸ್ತಾವಿಕವಾಗಿ ಮಾತನಾಡಿ ಮೃತ ಚಿದಾನಂದ ಅವರ ವ್ಯಕ್ತಿತ್ವದ ಜವಾಬ್ದಾರಿಯುತ ಕರ್ತವ್ಯದ ಬಗ್ಗೆ ವಿವರಿಸಿ ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲೆಂದು ಹಾರೈಸಿದರು.

ಮೃತರ ಕುಟುಂಬಸ್ಥರಲ್ಲೊಬ್ಬರಾದ ಸುಂದರ ಗೌಡ ಕೊಕ್ಕಡ ಮಾತನಾಡಿ ಕುಟುಂಬದಲ್ಲಿ ಒಂದು ಉತ್ತಮ ನಡೆ ನುಡಿ ಉತ್ತಮ ಒಡನಾಟ ಹೊಂದಿರುವ ವ್ಯಕ್ತಿಯಾಗಿದ್ದರು ಅವರ ಅಗಲಿಕೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.

ಸಂಘದ ಮಾಜಿ ಅಧ್ಯಕ್ಷೆ ರಾಜಶ್ರೀ ಎಸ್ ಹೆಗ್ಡೆ ಮಾತನಾಡಿ ಚಿದಾನಂದ ಗೌಡ ರವರು ಓರ್ವ ತಾಲೆಯ ಒಳ್ಳೆಯ ಸ್ವಭಾವ ಹೊಂದಿರುವ ವ್ಯಕ್ತಿಯಾಗಿದ್ದರು. ಇಂದಿನ ಆನ್ಸೆನ್ ಯುಗದಲ್ಲಿ ಕಂಪ್ಯೂಟರ್ ವ್ಯವಹಾರಗಳ ಮಧ್ಯೆ ಸರ್ವರ್ ಸಮಸ್ಯೆ ಸಾಮಾನ್ಯವಾಗಿದೆ ಈ ಸಂದರ್ಭದಲ್ಲಿ ಬಳಕೆದಾರರ ಕಿರಿ ಕಿರಿ ಇದ್ದದ್ದ ಇದನ್ನೆಲ್ಲ ಬಹಳ ನಾಜೂಕಾಗಿ ಸುದಾರಿಸುತ್ತಿದ್ದರು ಎಂದರು.

ಮಾಜಿ ಕಾರ್ಯನಿರ್ವಾಹಣಾಧಿಕಾರಿ ತಿಮ್ಮಯ್ಯ ಗೌಡ ಮಾತನಾಡಿ. ಚಿದಾನಂದ ಗೌಡ ರವರು ಓರ್ವ ಪಿಗ್ಮಿ ಸಂಗ್ರಹಕ್ಕಾಗಿ ನಮ್ಮ ಸಂಸ್ಥೆಗೆ ಸೇರಿಕೊಂಡರು ತದನಂತರ ಖಾಯಂ ಗುಮಾಸ್ತನಾಗಿ ಮುಂದುವರಿದರು. ಅವರೊಬ್ಬ ನಾಟಿ ವೈದ್ಯರು ಆಗಿದ್ದರು ಹಾವು ಕಡಿತಕ್ಕೆ ನಾಟಿ ಔಷಧಿ ನೀಡುತ್ತಿದ್ದರು. ಹಿಂದೊಮ್ಮೆ ಯಾವುದೋ ಕಾರಣಕ್ಕೆ ರಾಜಿನಾಮೆಗೆ ಮುಂದಾಗಿ ನನ್ನೊಂದಿಗೆ ಆವಲತ್ತು ತೋಡಿಕೊಂಡಿದ್ದರು. ಆದರೆ ಅವರನ್ನು ಸಮಾಧಾನ ಪಡಿಸಿ ರಾಜಿನಾಮೆ ನೀಡದೆ ಕರ್ತವ್ಯದಲ್ಲಿ ಮುಂದುವರಿಯುವಂತೆ ಸೂಚಿಸಿದ್ದ ಎಂದರು. ಆದರೆ ವಿಧಿ ಅವರನ್ನು ಕೊನೆಯವರೆಗೆ ಕರ್ತವ್ಯ ನಿರ್ವಸಲು ಅವಕಾಶ ನೀಡಲಿಲ್ಲ ಎಂದರು.

ಇನ್ನೊರ್ವ ಮಾಜಿ ಕಾರ್ಯನಿರ್ವಾಹಣಾಧಿಕಾರಿ ಪುರಂದರ ಶೆಟ್ಟಿ ಮಾತನಾಡಿ ತಮ್ಮ ಒಡನಾಟದ ಅನುಭವಗಳನ್ನು ಹಂಚಿಕೊಂಡು ಬೇಸರ ವ್ಯಕ್ತಪಡಿಸಿದರು.ಬಂದಾರು ಪಂಚಾಯತಿ ಮಾಜಿ ಅಧ್ಯಕ್ಷ ದಿನೇಶ್ ಗೌಡ ರವರು ಮಾತನಾಡಿ ಮತರ ನುಡಿ ನಮನ ಹೇಳಿದರು.

ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರ ಇವರು ಮಾತನಾಡಿ ಚಿದಾನಂದರು ಸಂಘದ ಮೇಲೆ ಇಟ್ಟಂತಹ ಪ್ರೀತಿ ಸಂಘದ ಮೇಲಿಟ್ಟ ಜವಾಬ್ದಾರಿ ಅವರ ಸೇವೆಯನ್ನು ಎಂದಿಗೂ ಮರೆಯುವಂತಿಲ್ಲ ಅವರ ಜೀವನವೇ ನನಗೊಂದು ಪ್ರೇರಣೆಯಾಗಿದೆ ಕೂರೋಣ ಸಂದರ್ಭದಲ್ಲಿಯೂ ಅವರು ತನ್ನ ಜೀವದ ಹಂಗು ತೊರೆದು ಕಾರ್ಯವಹಿಸಿದ ಓರ್ವ ತ್ಯಾಗಮಯಿ ಸಿಬ್ಬಂದಿಯಾಗಿದ್ದರು ಎಂದರು.

ಕಾರ್ಯಕ್ರಮದಲ್ಲಿ ಮೃತರ ತಾಯಿ ಸೇಸಮ್ಮ, ಪತ್ನಿ ದರ್ಣಮ್ಮ, ಮಕ್ಕಳಾದ ಸುಮಂತ್, ಸುಮಿತ್ರ, ಸುರಕ್ಷಾ ಸೇರಿದಂತೆ ಕುಟುಂಬಸ್ಥರು, ಸಂಘದ ಉಪಾಧ್ಯಕ್ಷರು ಹಾಲಿ ಸದಸ್ಯರುಗಳು ಸಂಘದ ಮಾಜಿ ಅಧ್ಯಕ್ಷರುಗಳು, ಮಾಜಿ ಕಾರ್ಯನಿರ್ವಾಹಣಾಧಿಕಾರಿಗಳು, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಸಂಘದ ನಿರ್ದೇಶಕರಾದ ನಾರಾಯಣ ಗೌಡ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Related posts

ಮೊಗ್ರು: ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ಅಲೆಕ್ಕಿ -ಮುಗೇರಡ್ಕ ಬೆಳ್ಳಿಹಬ್ಬದ ಆಚರಣೆಯ ಸಮಾಲೋಚನ ಸಭೆ

Suddi Udaya

ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಸಾಂಸ್ಕೃತಿಕ ವೈಭವ

Suddi Udaya

ಕರುನಾಡು Got ಟ್ಯಾಲೆಂಟ್ ರಿಯಾಲಿಟಿ ಶೋ ಗೆ ಆಯ್ಕೆಯಾದ ಉಜಿರೆಯ ಹಿಪ್-ಬಾಯ್ಸ್ ನೃತ್ಯ ತಂಡ

Suddi Udaya

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ಹಾಗೂ ಕ್ರಾಸ್ ಸಂಸ್ಥೆ ಬೆಂಗಳೂರು ನೇತೃತ್ವದಲ್ಲಿ 2 ದಿನದ ತರಬೇತಿ ಕಾರ್ಯಾಗಾರ

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ

Suddi Udaya

ಕಿಲ್ಲೂರು‌ ನೂತನ ಮಸ್ಜಿದ್ ಗೆ ಖಾಝಿ ಕೂರತ್ ತಂಙಳ್ ರಿಂದ ಶಿಲಾನ್ಯಾಸ

Suddi Udaya
error: Content is protected !!